ಸಾಹಿತ್ಯದಲ್ಲಿ ಪ್ರಗತಿ

Author : ವಿ.ಕೃ. ಗೋಕಾಕ (ವಿನಾಯಕ)

Pages 96

₹ 100.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು -560040
Phone: 9448804905

Synopsys

ಖ್ಯಾತ ಕವಿ-ವಿಮರ್ಶಕ-ಸಾಹಿತಿ ಡಾ. ವಿ.ಕೃ. ಗೋಕಾಕ್ ಅವರ ವಿಮರ್ಶಾತ್ಮಕ ಬರಹಗಳ ಸಂಗ್ರಹ ಕೃತಿ-ಸಾಹಿತ್ಯದಲ್ಲಿ ಪ್ರಗತಿ. ವಿಮರ್ಶೆಯ ರೀತಿ-ನೀತಿಗಳು, ಕಾವ್ಯದ ದ್ವಾದಶ ಸೂತ್ರಗಳು, ಕಾವ್ಯದಲ್ಲಿ ಮಹೋನ್ನತಿ, ರಾಷ್ಟ್ರೀಯ ಸಾಹಿತ್ಯ ನಿರ್ಮಾಣದ ರೂಪರೇಷೆ, ಸಾಹಿತ್ಯದಲ್ಲಿ ಪ್ರಗತಿ, ಕಾವ್ಯದ ಎರಡು ಮಾದರಿಗಳು, ಪ್ರಗತಿಪರ ಕವಿ ಶೆಲ್ಲಿ ಹೀಗೆ ಒಟ್ಟು 7 ಬರಹಗಳಿವೆ. 

ಹಳತು ಹೊಸತನ್ನೂ, ಮೂಡಣ ಪಡುವಣ ದರ್ಶನಗಳನ್ನೂ ಬೆರೆಸಿದರೆ ಮಾತ್ರ ನವೀನ ಸಂಸ್ಕೃತಿಯೊಂದನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ನಾವೀನ್ಯವು ನಮ್ಮ ಅರ್ಥ, ರಾಜಕಾರಣ , ಸಾಹಿತ್ಯ, ಕಾಮ, ಧರ್ಮ ಮೊದಲಾದ ಎಲ್ಲ ಜೀವನರಂಗಗಳಲ್ಲಿ ಬರಬೇಕಾಗಿದೆ. ಈ ದೃಷ್ಟಿಯಿಂದ ಪರಿಪೂರ್ಣವಾದ ಜೀವನದಲ್ಲಿ ಸಾಹಿತ್ಯಕ್ಕೆ ಯಾವ ಸ್ಥಾನವಿರಬಹುದು ? ಇಂಥ ಜೀವನವನ್ನು ನಾಡಿನಲ್ಲಿ ತರಬೇಕಾದರೆ ಸಾಹಿತ್ಯವು ಯಾವ ಹಾದಿಯನ್ನು ಹಿಡಿಯಬೇಕಾಗಬಹುದು? ಇವೇ ಮಾದಲಾದ ವಿವೇಚನೆಗಳ ವಿಷಯವನ್ನು ಕೃತಿಯು ಒಳಗೊಂಡಿದೆ.

ಆಂತರಿಕತೆ ಹಾಗೂ ಸಾಮಾಜಿಕತೆಗಳೆಂಬ ಸಾಹಿತ್ಯ ಪ್ರವೃತ್ತಿಗಳೆರಡು ಯಾವ ಮನೋಧರ್ಮವನ್ನು ಅವಲಂಬಿಸಿವೆ ಎಂಬುದನ್ನು ‘ಕಾವ್ಯದ ಎರಡು ಮಾದರಿಗಳು’ ಎಂಬಲ್ಲಿ ತೋರಿಸಿದ್ದರೆ,  ‘ಪ್ರಗತಿಪರ ಕವಿ ಶೆಲ್ಲಿ’ ಎಂಬ ಲೇಖದಲ್ಲಿ ಈ ಎರಡೂ ಪ್ರವೃತ್ತಿಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬೆರೆತ ರೀತಿಯನ್ನು ಉದಾಹರಿಸಲಾಗಿದೆ. ಸಾಹಿತ್ಯದ ಮೂಲ ತತ್ವಗಳ ವಿವೇಚನೆ ಬಗ್ಗೆ ಜನತೆಯಲ್ಲಿ ಪ್ರಸಾರವಾಗಬೇಕೆಂಬ ಉದ್ದೇಶದಿಂದ ಈ ಸಂಕಲನವನ್ನು ಪ್ರಕಟಿಸಿದ್ದೇನೆ ಎಂದು ಕವಿ ವಿ.ಕೃ. ಗೋಕಾಕ್ ಅವರು ಹೇಳಿದ್ದಾರೆ. 

ಈ ಪುಸ್ತಕವನ್ನು ಸಾಧನಾ ಮುದ್ರಣಾಲಯವು 1944ರಲ್ಲಿ ಮೊದಲ ಬಾರಿಗೆ ಪ್ರಕಟಿಸಿತ್ತು. ಬೆಲೆ: 1:80 ರೂ. ಪುಟ: 102 

 

 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books