ಸಾಕ್ಷರತೆಯ ಸುತ್ತಮುತ್ತ

Author : ಬಿ. ಪೀರ್ ಬಾಷ

Pages 124

₹ 30.00




Year of Publication: 1999
Published by: ಮಲ್ಲಿಗೆ ಪ್ರಕಾಶನ
Address: ಹೂವಿನ ಹಡಗಲಿ, ಬಳ್ಳಾರಿ

Synopsys

‘ಸಾಕ್ಷರತೆಯ ಸುತ್ತಮುತ್ತ’ ಲೇಖಕ ಬಿ. ಪೀರ್ ಬಾಷಾ ಮತ್ತು ಅವರ ಸ್ನೇಹಿತರು ಸಂಪಾದಿಸಿರುವ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಎಂ.ಪಿ. ಪ್ರಕಾಶ್ ಬರೆದ ಮುನ್ನುಡಿಯಲ್ಲಿ ’ಇಲ್ಲಿ ಆಯ್ಕೆಗೊಂಡಿರುವ ಲೇಖನಗಳು, ಅದರಲ್ಲೂ ಶ್ರೀ ಪಿ.ಆರ್. ಗೋಪಾಲ್ ಅವರ ಆಂದೋಲನದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಮತ್ತು ಶ್ರೀ ಲಿಂಗದೇವರು ಹಳೇಮನೆ ಅವರ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸಾಕ್ಷರತಾ ಆಂದೋಲನ ಎರಡೂ ಲೇಖನಗಳು ಗಮನಾರ್ಹವಾಗಿವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಕ್ಷರ ಸಂಸ್ಕೃತಿಗೆ ಮನುಷ್ಯನನ್ನು ಒಳಪಡಿಸುವ ಮೂಲಕ ಆತನನ್ನು ಹೆಚ್ಚು ವಿಶಾಲ ಮನೋಭಾವದ, ಕಡಿಮೆ ಕ್ರೂರಿಯಾದ ಮನುಷ್ಯನನ್ನಾಗಿ ಪರಿವರ್ತಿಸಬಹುದು. ಎಲ್ಲ ಜನಾಂದೋಲನಗಳ ಉದ್ದೇಶ ಇಂತಹ ಮಾನವ ಪ್ರೇಮವನ್ನು ಬೆಳೆಸಿಕೊಳ್ಳುವ ಸಾಮಾಜಿಕ ವ್ಯವಸ್ಥೆಯನ್ನು ನಿರ್ಮಿಸುವುದೇ ಆಗಿದೆ. ಈ ನಿಟ್ಟಿನಲ್ಲಿ, ಬೆಳಕು ಚೆಲ್ಲುವ ಹಲವು ಲೇಖನಗಳು ಈ ಕೃತಿಯಲ್ಲಿವೆ.

About the Author

ಬಿ. ಪೀರ್ ಬಾಷ
(01 May 1972)

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಿ. ಪೀರ್ ಬಾಷ ಅವರು ಹುಟ್ಟಿದ್ದು 1972 ರ ಮೇ 1 ರಂದು. ತಂದೆ-  ಬಿ.ಬಾಷಾ ಸಾಹೇಬ್ ಹಾಗೂ ತಾಯಿ- ಹಯಾತ್ ಬಿ. ಸದ್ಯ ಕೊಪ್ಪಳ ಜಿಲ್ಲೆಯ ಗಂಗಾವತಿಯ ಕಾರಟಗಿಯಲ್ಲಿ ವಾಸ. ಸಾಮಾಜಿಕ ಚಟುವಟಿಕೆಯೊಂದಿಗೆ ಬರವಣಿಗೆ ರೂಢಿಸಿಕೊಂಡಿರುವ ಪೀರ್ ಬಾಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಸದಸ್ಯರು. ಕವನ ಸಂಕಲನಗಳು : ಜೀವ ಬಂತು ಹಾದಿಗೆ, ಜಾಲಿ ಹೂಗಳ ನಡುವೆ,  ಅಕ್ಕಸೀತಾ ನಿನ್ನಂತೆ ನಾನೂ, ದೇವರು ಮನುಷ್ಯರಾದ ದಿನ, ಸಮಾಜವಾದಿ ಹೋರಾಟಗಾರರ ಸಂದರ್ಶನ ಮಾಡಿದ ಕೃತಿಗಳನ್ನು ಹಂಪಿಯ ಕನ್ನಡ ವಿ.ವಿ.ಪ್ರಕಟಿಸಿದೆ. ಸಮಾಜವಾದಿ ನೀಲಗಂಗಯ್ಯ ಪೂಜಾರ್ ಕುರಿತು ವ್ಯಕ್ತಿ ಚಿತ್ರಣ, ಸಂಪಾದಿತ ಕೃತಿ: ಶಿಲವೇರಿ ಶಿವಪ್ಪ ಸಂ (ತತ್ವಪದಗಳು), ...

READ MORE

Related Books