ಸಾಲ ಸಂಪೀಗಿ ಗಮ್ಮೆಂದೊ

Author : ಕಮಲಾ ಹೆಮ್ಮಿಗೆ

Pages 80

₹ 40.00




Year of Publication: 2007
Published by: ಜಾನಪದ ಪ್ರಕಾಶನ
Address: ಹೊನ್ನಾವರ, ಉತ್ತರ ಕನ್ನಡ

Synopsys

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಎನ್.ಆರ್. ನಾಯಕರು ಜಾನಪದ ವಿದ್ವಾಂಸರಾಗಿ ಬಹುಮುಖ ಸಾಧನೆ ಮಾಡಿದ್ದಾರೆ. ಉತ್ತರ ಕನ್ನಡದ ಜಾನಪದ ವಾಗ್ಮಯವನ್ನು ಕನ್ನಡ ಲೋಕಕ್ಕೆ ಒದಗಿಸಿಕೊಟ್ಟ ಎನ್. ಆರ್ ನಾಯಕರು ಕವಿಯಾಗಿಯೂ ತಮ್ಮ ಸೃಜನಶೀಲತೆಯನ್ನು ಪ್ರಕಟಿಸಿದ್ದಾರೆ. ಸಾಲ ಸಂಪೀಗೆ ಗಮ್ಮೆಂದೊ ಕೃತಿಯನ್ನು ಹೆಸರಾಂತ ಲೇಖಕಿ ಕಮಲ ಹೆಮ್ಮಿಗೆ ರಚಿಸಿದ್ದಾರೆ. ಕಮಲ ಅವರು ಹೇಳಿದಂತೆ ನಾಯಕರ ಕವಿತೆಗಳಲ್ಲಿ ಹೃದಯದ ಉಲ್ಲಾಸವಿದೆ. ದಲಿತಪರ ಸಾಮಾಜಿಕ ಕಾಳಜಿ ಇದೆ. ಜಾನಪದ ದೀಪಾರಾಧನೆಯ ಬೆಳ್ಳಿ ಬೆಳಕನ್ನು ನಾಡಿನಾದ್ಯಂತ ಹರಡಿರುವ ಎನ್.ಆರ್ ನಾಯಕರು ನವೋದಯ‌, ನವ್ಯ ಪರಂಪರೆಯನ್ನು ಸಮಭಾವದಿಂದ ಸ್ವೀಕರಿಸಿದವರು. ಕಮಲ ಹೆಮ್ಮಿಗೆ ಎನ್. ಆರ್ ನಾಯಕರ ಪಂಚ ಕಾವ್ಯದ ಪರಿಮಳವನ್ನು ಸಹೃದಯರು ಆಸ್ವಾದಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕರ ಕಾವ್ಯದ ಬಗೆಗೆ ತಾಳಿರುವ ಕಾವ್ಯಾಸಕ್ತಿ ಈ ಪುಸ್ತಕದಲ್ಲಿ ಅನಾವರಣಗೊಂಡಿದೆ ಎಂದು ಜಿ.ಎಂ ಹೆಗಡೆ ಬೆನ್ನುಡಿಯಲ್ಲಿ ಬರೆದಿದ್ದಾರೆ.

About the Author

ಕಮಲಾ ಹೆಮ್ಮಿಗೆ
(20 November 1952)

ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಅವರು ಹುಟ್ಟಿದ್ದು 20  ನವೆಂಬರ್, 1952ರಂದು, ಮೈಸೂರು ಜಿಲ್ಲೆಯ ಹೆಮ್ಮಿಗೆಯಲ್ಲಿ. ಪ್ರತಿಭಾವಂತ ಬರಹಗಾರ್ತಿ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಜಾನಪದವನ್ನು ಮುಖ್ಯವಿಷಯವನ್ನಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಎಂ.ಎ.ಪದವಿಯನ್ನು ಪಡೆದವರು. ಸವದತ್ತಿ ಎಲ್ಲಮ್ಮ ಹಾಗೂ ದೇವದಾಸಿ ಪದ್ದತಿಯ ಮೇಲೆ ಮಹಾಪ್ರಬಂಧ ರಚಿಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಭಾಷಾಂತರ ಡಿಪ್ಲೊಮಾ ಪಡೆದಿದ್ದಾರೆ. ನನ್ನ ಸಂಗಾತಿ ಎಂದರೆ ಒಂಟಿತನ ಎನ್ನುವ ಕಮಲಾ ಹೆಮ್ಮಿಗೆ I Think i am addicted to it ಎನ್ನುತ್ತಾರೆ. ಅಡಿಗ, ಅನಂತಮೂರ್ತಿ, ಶಾಂತಿನಾಥ ದೇಸಾಯಿ ಮೊದಲಾದವರ ಸಾಹಿತ್ಯಕ ಪ್ರಭಾವ ಇವರ ...

READ MORE

Related Books