ಸಾಮ್ರಾಟ್ ಅಶೋಕನ ಅಂತರಂಗಕ್ಕೆ ಬೆಳಕು ತಂದ ಬುದ್ಧ

Pages 154

₹ 108.00




Year of Publication: 2012
Published by: ಸೌಮ್ಯಶ್ರೀ ಪುಸ್ತಕ ಪ್ರಕಾಶನ
Address: ಬೆಂಗಳೂರು

Synopsys

ಲೇಖಕ ಸಿ.ಎಚ್. ರಾಜಶೇಖರ ಅವರ ಕೃತಿ-ಸಾಮ್ರಾಟ್ ಅಶೋಕನ ಅಂತರಂಗಕ್ಕೆ ಬೆಳಕು ತಂದ ಬುದ್ಧ. ಅಮರ ಜಾತಕ ಕಥೆಗಳು ಜಗತ್ತಿನ ಸರ್ವ ಶ್ರೇಷ್ಠ ಕಥೆಗಳು. ಇವು ನೀತಿ ಬೋಧೆಕಗಳು, ಜೀವನ ಮಾರ್ಗದರ್ಶಿಗಳೂ ಆಗಿವೆ. ಇಂತಹ ಬೋಧೆಗಳು ಸಾಮ್ರಾಟ ಅಶೋಕನ ಮೇಲೆ ಗಾಢ ಪರಿಣಾಮ ಬೀರಿ, ಅವರು ಬೌದ್ಧ ಧರ್ಮ ಪ್ರಚಾರ-ಪ್ರಸಾರಕ್ಕೆ ನಿಂತಿದ್ದು ಈಗ ಇತಿಹಾಸ. ಈ ಕುರಿತು ಬರೆದ ಬರೆಹಗಳ ಸಂಕಲನವಿದು. ಲೇಖಕ ಸಿ.ಎಚ್ ರಾಜಶೇಖರ್ ಹೇಳುವಂತೆ,  ಬುದ್ಧರ ಉದಯವು ಕೋಟ್ಯನೂ ಕೋಟಿ ವರ್ಷಗಳಿಗೆ ಒಮ್ಮೆ ಸಂಭವಿಸುವಂತಹದ್ದು. ಈ ಕಾರಣಕ್ಕಾಗಿ ಇತಿಹಾಸದಲ್ಲಿ ಬುದ್ದ ಉದಯವೇ ಒಂದು ಅಪೂರ್ವ ಮತ್ತು ವಿಸ್ಮಯಕಾರಿ ಸಂಗತಿಯಾಗಿದೆ. ಅಂತಹ ಮಹಾತ್ಮರಿಂದ ಮಾತ್ರ ಲೋಕದ ಜನತೆಯ ಮನದಲ್ಲಿ ಯುಗಯುಗಗಳಿಂದ ಯುಂಬಿರುವ ಅಜ್ಞಾನ, ಅಂಧಕಾರ ಮತ್ತು ಕಗ್ಗತ್ತಲು ಕರಗಿ ಜ್ಞಾನಜ್ಯೋತಿ ಮೂಡಬಲ್ಲದು ಎನ್ನುತ್ತಾರೆ.   

 ಈ ಕೃತಿಯು 20 ಶೀರ್ಷಿಕೆಗಳಾದ ಶೀಲಸಂಪತ್ತಿಗೆ ಮಿಗಿಲು ಪುಣ್ಯವಿಲ್ಲ, ಅಕೋಸಕನೆ ಕೊಪವ ನೀಗಿಕೊ ಜ್ಞಾನದಿಂದ, ನಾದ ಹೊಮ್ಮಲಿ ಮದ್ಯಮ ಮಾರ್ಗದಿಂದ, ನೀ ಪಡೆದು ಧರ್ಮವ ನೀಡು, ಒಳಿತೇ ಅಭಿವೃದ್ದಿ ನಮ್ಮ ಪೊರೆವ ಧರ್ಮ, ಬಹುಜನರ ಹಿತ ಮತ್ತು ಸುಖಕ್ಕಾಗಿ ಬದುಕಿದಾತನೆ ಮಹಾತ್ಮ, ಸರ್ವರಿಗೂ ಹಿತಕಾರಿಯೇ ಸಮಾನತೆಯ ಅರ್ಥ, ದೇವರೆಂದರೆ ಅತಿಮಾನುಷ ಶಕ್ತಿಯ ಆರಾಧನೆ ಅಲ್ಲ, ಸಾಮ್ರಾಟ ಅಶೋಕನ ಅಂತರಂಗಕ್ಕೆ ಬೆಳಕು ತಂದ ಬುದ್ಧ, ದುರಾಸೆಯ ಕೊಳಗ ಎಂದೂ ತುಂಬದು, ಆದಾಯಕ್ಕೂ ಮಿಗಿಲು ಶುದ್ಧ ಮನ, ಅಧರ್ಮಕ್ಕೆ ಬಲಿಯಾದಳಾ ಸುಂದರಿ, ಅರ್ಧ ತಿಂದಿತ್ತ ದಾಳಿಂಬೆಗೆ ಒಲಿದ ಬುದ್ಧ, ಸುಜಾತ ಈ ಏಳರಲಿ ನಿನದ್ಯಾವ ಗುಣ, ಎದೆ ಹಾಲಿಗೂ ಮಿಗಿಲು, ಧರ್ಮದ ಋಣವೆಂದಳಾ ಗೌತಮಿ, ಧರ್ಮದ ಹಂಗಿಲ್ಲದಾತನೇ ಧರ್ಮಾತೀತ, ಸಂಕೋಲೆಗಳ ವಿಮಕ್ತಿಯೇ ನಿಬ್ಬಾಣ, ಧರ್ಮಸೇನಾನಿ ಸಾರಿಪುತ್ತ ಮತ್ತು ಬುದ್ಧನ ಕೊನೆಯ ಭೇಟಿ, ಶಾಶ್ವತವು ಅಶಾಶ್ವತದ ಅವಲಂಬನೆ ಗಳನ್ನು ಒಳಗೊಂಡಿರುತ್ತದೆ. 

Related Books