ಸಾಯಿ ಸ್ಮೃತಿ

Author : ವಿಶ್ವಾಸ್ ಭಾರದ್ವಾಜ್

Pages 70
Year of Publication: 2021
Published by: ವಂಶಿ ಪಬ್ಲಿಕೇಷನ್ಸ್‌
Address: ನೆಲಮಂಗಲ, ಬೆಂಗಳೂರು
Phone: 9916595916

Synopsys

ಲೇಖಕ ವಿಶ್ವಾಸ್ ಭಾರಧ್ವಾಜ್‌ ಅವರು ಕನ್ನಡಕ್ಕೆ ಅನುವಾದಿಸಿರುವ ಕೃತಿ ʼಸಾಯಿ ಸ್ಮೃತಿʼ . ಕಲಿಯುಗದ ದಿವ್ಯ ಅವತಾರ ಪುರುಷ, ಚಮತ್ಕಾರಿ ಯೋಗಿರಾಜ ಶಿರಡಿಯ ಸಾಯಿಬಾಬಾ ಅವರ ಪವಾಡಗಳ ಕುರಿತು ಕೇಳುತ್ತಲೇ ಇರುತ್ತೇವೆ. ನೊಂದ ಜನಸಮುದಾಯದ ಮೇಲಿನ ಬಾಬಾರ ಕಾರುಣ್ಯದ ಕಡಲು  ಮನೆಮಾತಾಗಿದೆ. ಬಾಬಾರ ನಿಷ್ಕಲ್ಮಷ ಪ್ರೇಮ, ಅನನ್ಯ ಸೇವಾ ಮನೋಭಾವನೆ ಮತ್ತು ಅತ್ಯುತ್ಕೃಷ್ಟ ಆಧ್ಯಾತ್ಮಿಕ ಚಿಂತನೆಗಳನ್ನು ಕೆಲವೇ ಶಬ್ಧಗಳಲ್ಲಿ ಕೆಲವೇ ವಾಕ್ಯಗಳಲ್ಲಿ ಹಿಡಿದಿಡುವುದು ಕುಂಭದ್ರೋಣ ಮಳೆಯನ್ನು ಬೊಗಸೆಯಲ್ಲಿ ಹಿಡಿದಂತೆ. ಅಸ್ತಿತ್ವ ನಂಬುವ ಶ್ರದ್ಧಾವಂತ ಭಕ್ತರಿಗೆ ಈ ಕೃತಿಯು ಆಪ್ತವಾಗಿದೆ. ಸಾಯಿ ಭಗವಾನ್‌ರ ಸಪ್ತ ಪವಾಡಗಳು, ಆರತಿ ಸಾಯಿಗೀತೆಗಳು ಹಾಗೂ ಸಾಯಿಸ್ಮರಣೆಯ ಭಜನೆಗಳನ್ನು ಇಲ್ಲಿ ಕಾಣಬಹುದು. ಈ ಸಣ್ಣ ಪುಸ್ತಕದಲ್ಲಿ ಬಾಬಾ ಸ್ಮರಣೆ ಮಾಡುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ ಎಂಬುದು ಲೇಖಕರ ಅಭಿಪ್ರಾಯ.

About the Author

ವಿಶ್ವಾಸ್ ಭಾರದ್ವಾಜ್

ವಿಶ್ವಾಸ್ ಭಾರದ್ವಾಜ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಕನ್ನಡ ಪತ್ರಿಕೋದ್ಯಮ, ದೃಶ್ಯ ಮಾಧ್ಯಮ ಹಾಗೂ ಡಿಜಿಟೆಲ್‌ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವವಿದೆ. ಗೋಪಾಲಕೃಷ್ಣ ಅಡಿಗರ ಪದ್ಯ-ಸಾಹಿತ್ಯದಲ್ಲಿ ಒಲವು.  ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ನ ಪದವೀಧರರು. ಮೈಸೂರಿನ ಮಾನಸ ಗಂಗೋತ್ರಿಯ ಮುಕ್ತ ವಿವಿಯ ಸಮೂಹಃ ಸಂಪನ್ಮೂಲ ಹಾಗೂ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರರು.   ಕೃತಿಗಳು: ಕಾಲು ಹಾದಿ (ಹನಿ ಕತಾ ಸಂಕಲನ), ನಿಮಗೆ ನೀವೇ ದಾರಿದೀಪ (ಅನುವಾದ)  ...

READ MORE

Related Books