ಸಾಧನೆಯೇ ಬದುಕು

Author : ಬೆಳವಾಡಿ ಮಂಜುನಾಥ

Pages 268

₹ 500.00




Year of Publication: 2021
Published by: ಮಡಿಲು ಪ್ರಕಾಶನ
Address: `ಮಡಿಲು’, #54/ಇ, 2ನೇ ಕ್ರಾಸ್, ಬಿಎಸ್ ಕೆ 3ನೇ ಹಂತ, 3ನೇ ಫೇಸ್, 4ನೇ ಬ್ಲಾಕ್, ಕತ್ರಿಗುಪ್ಪೆ, ಬೆಂಗಳೂರು-85
Phone: 08026797575

Synopsys

ಲೇಖಕ ಮಂಜುನಾಥ ಬೆಳವಾಡಿ ಅವರ ಕೃತಿ ‘ಸಾಧನೆಯೇ ಬದುಕು’. ಈ ಕೃತಿಯು ನಾಡೋಜ ಡಾ. ಜಿ.ಟಿ.ರುದ್ರೇಶ್ ವೈದ್ಯಜೀವನ ಕಥನವಾಗಿದೆ. ಸಂಸ್ಕೃತ ವಿ.ವಿಯ ವಿಶ್ರಾಂತ ಕುಲಪತಿಗಳು ಡಾ.ಮಲ್ಲೇಪುರಂ ಜಿ. ವೆಂಕಟೇಶ ಅವರು ಈ ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಡಾ.ಮಂಜುನಾಥ ಬೆಳವಾಡಿ ಅವರು, ಬಲು ಶ್ರಮದಿಂದ ಈ ಗ್ರಂಥವನ್ನು ಬರೆದಿದ್ದಾರೆ. ಡಾ.ಬಿ.ಟಿ.ರುದ್ರೇಶ್ ಅವರ `ವೈದ್ಯಜೀವನ’ದ ಮುಖ್ಯ ಸಂಗತಿಗಳನ್ನೆಲ್ಲಾ ಸೂಕ್ತರೀತಿಯಿಂದ ಸಂಯೋಜಿಸಿದ್ದಾರೆ. ಡಾ.ಬಿ.ಟಿ.ರುದ್ರೇಶ್ ಅವರ ಒಟ್ಟು ಜೀವನ ಆಶಯವನ್ನು ಈ ಗ್ರಂಥದಲ್ಲಿ ದಾಖಲಿಸಿದ್ದಾರೆಂದರೆ ಅತಿಶಯೋಕ್ತಿ ಆಗದು. “ಸಾಧನೆಯಿಲ್ಲದೆ ಸತ್ತರೆ, ಸಾವಿಗೆ ಅವಮಾನ; ಆದರ್ಶವಿರದೆ ಬದುಕಿದರೆ ಬದುಕಿಗೆ ಅವಮಾನ” ಇದು ಡಾ.ಬಿ.ಟಿ.ರುದ್ರೇಶರ `ರುದ್ರೋಕ್ತಿ’! ಈ ಆಶಯವೇ `ಸಾಧನೆಯೇ ಬದುಕು’ ಗ್ರಂಥಕ್ಕೆ ಕೈದೀವಿಗೆಯಾಗಿದೆ. ಇದು ಕೇವಲ ಜೀವನಕಥನವಲ್ಲ; ಆ ಜೀವನದ ಹಿಂದಿರುವ ಆದರ್ಶ ಬದುಕಿನ ಜೀವನಕಥನ. ಈ ಜೀವವು ಹಲವು ಜೀವಗಳ ಜತೆ ಮಿಡಿಯುವ ಬೆಳಕಿನ ಕಥನವೂ ಆಗಿದೆ. ಇಲ್ಲಿ ಮಂಜುನಾಥ ಅವರು ಬಲು ಎಚ್ಚರದಿಂದ ಡಾ.ಬೆಳವಾಡಿ ತಿಪ್ಪೇಸ್ವಾಮಿ ರುದ್ರೇಶ ಅವರ ವೈದ್ಯಬದುಕಿನ ಹತ್ತಾರು ಮಗ್ಗುಲುಗಳನ್ನು ಮನಂಬುಗುವAತೆ ದಾಖಲಿಸಿದ್ದಾರೆ. ಈ ಗ್ರಂಥವು ರುದ್ರೇಶ ಅವರ ಹತ್ತಾರು ಮುಖಗಳನ್ನು ಪರಿಚಯಿಸುತ್ತಲೇ`ವೈದ್ಯಕಥನ’ದ ಕೇಂದ್ರದ ಸುತ್ತ ತಿರುಗುತ್ತದೆ! ಡಾ.ಬೆಳವಾಡಿ ಮಂಜುನಾಥರ ಶ್ರಮ, ಶ್ರದ್ಧೆ, ಉತ್ಸಾಹ, ಪ್ರೀತಿ, ಗೌರವ ಮುಂತಾದ ಗುಣಗೌರವಗಳನ್ನು ನಾನು ಈ ಗ್ರಂಥರಚನೆಯ ಕಾರಣದಿಂದಾಗಿ ಪ್ರಶಂಸಿಸುತ್ತೇನೆ. ಸಹೃದಯರು ಈ ಗ್ರಂಥವನ್ನು ಸ್ವಾಗತಿಸಬೇಕೆಂದು ಆಶಿಸುತ್ತೇನೆ. ಇದು ಬೆಳವಾಡಿ ಗ್ರಾಮದ ಒಬ್ಬ ಲೇಖಕ ಹಾಗೂ ಮತ್ತೊಬ್ಬ ವೈದ್ಯ ಇವರಿಬ್ಬರ ಇಜ್ಜೋಡು ಪ್ರತಿಮೆಯಾಗಿ `ಸಾಧನೆಯೇ ಹಾದಿ’ ರೂಪುಗೊಂಡಿದೆ! ಎಂಬುದಾಗಿ ಹೇಳಿದ್ದಾರೆ.

ಕೃತಿಯಲ್ಲಿ 11 ಅಧ್ಯಾಯಗಳಿದ್ದು, ಸಾಧನಾ ಪಥ, ಸಾಧನೆಯ ಹಿಂದಿನ ಹೆಜ್ಜೆಗಳು, ಸಾಧನಾ ನೈಪುಣ್ಯ, ಸಾಧನಾ ಸ್ವಾತಂತ್ಯ್ರ, ಸಾಧನಾ ಔದಾರ್ಯ, ಸಾಧನಾಮೂಲ, ಸಾಧನಾ ಮಾಧ್ಯಮ, ಸಾಧನಾ ಹವ್ಯಾಸ, ಸಾಧನಾ ಪುರಸ್ಕಾರ, ಸಾಧನಾ ಆಪ್ತತೆ, ಸಾಹಿತ್ಯ ಸಾಧನೆ ಎಂಬ ಶೀರ್ಷಿಕೆಗಳ ಲೇಖನಗಳಿವೆ.

About the Author

ಬೆಳವಾಡಿ ಮಂಜುನಾಥ
(18 June 1966)

ಡಾ. ಬೆಳವಾಡಿ ಮಂಜುನಾಥ ಅವರು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯಲ್ಲಿ ಜನಿಸಿದರು ಪ್ರಾಥಮಿಕ ವಿದ್ಯಾಭ್ಯಾಸ ಬೆಳವಾಡಿ ಸರ್ಕಾರಿ ಶಾಲೆ.ಪ್ರೌಢ ಶಿಕ್ಷಣ ಕಳಸಾಪುರ ವಿನಾಯಕ ಪ್ರೌಢಶಾಲೆ.ಚಿಕ್ಕಮಗಳೂರು ಐ.ಡಿ.ಎಸ್. ಜಿ ಸರ್ಕಾರಿ ಕಾಲೇಜಿನಿಂದ ಬಿ.ಎ ಪದವಿ. ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ. ಎ ಪ್ರಥಮ ಶ್ರೇಣಿಯೊಂದಿಗೆ ಚಿನ್ನದ ಪದಕ.ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಕುವೆಂಪು ವಿಶ್ವ ವಿದ್ಯಾನಿಲಯದಿಂದ ಬಿ.ಇಡಿ ಪದವಿ. ಧಾರವಾಡ ದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್ ಡಿ.ಪದವಿ. ಚನ್ನರಾಯ ಪಟ್ಟಣ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು. . ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸರ್ಕಾರಿ ಪದವಿ ಪೂರ್ವ ...

READ MORE

Related Books