ಸಹಸ್ರ ಪದಿ

Author : ರವೀಂದ್ರ ಭಟ್ಟ

Pages 156

₹ 200.00




Published by: ದರೇಸ ಪಬ್ಲಿಕೇಷನ್ಸ್
Address: ನಂ.36, 3ನೇ ಮಹಡಿ, ರೇವೆ ಪೊಬ್ಬತ್ತಿ ಬಿಲ್ಡಿಂಗ್, ಸೌತ್ ಎಂಡ್ ರಸ್ತೆ, ಬಸವನಗುಡಿ, ಬೆಂಗಳೂರು-560 004.
Phone: 0804369 0041

Synopsys

ರವೀಂದ್ರ ಭಟ್ಟ ಅವರು ನಿರೂಪಣೆ ಮಾಡಿರುವ ಕೃತಿ ಸಹಸ್ತ ಪದಿ. ಈ ಕೃತಿಯು ಪ್ರೊ.ಎಂ.ಕೆ.ಶ್ರೀಧರ ಅವರ ಪ್ರೇರಣಾದಾಯಿ ಜೀವನ ಯಾತ್ರೆಯಾಗಿದೆ. ಈ ಕೃತಿಗೆ ಡಾ.ಕಸ್ತೂರಿರಂಗನ್ ಅವರು ಬೆನ್ನುಡಿ ಬರೆದಿದ್ದು,‘ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆ ಮತ್ತು ಸ್ಥಾಪನೆಯ ಹಿಂದೆ ಶ್ರೀಧರ್‌ ಅವರ ಪ್ರಧಾನ ಪಾತ್ರ ಇದೆ. ಅವರ ಕ್ರಿಯಾಶೀಲತೆ, ಜನರೊಂದಿಗೆ ಬೆರೆಯುವ ಸ್ವಭಾವ, ಅಂದುಕೊಂಡ ಕೆಲಸ ಮಾಡುವ ಗುಣಗಳೆಲ್ಲ ಜ್ಞಾನ ಆಯೋಗದ ಚಟುವಟಿಕೆಗಳಲ್ಲಿ ಕಂಡು ಬರುತ್ತವೆ. ಪ್ರಸ್ತುತ "ಸಹಸ್ತಪದಿ" ಹೆಸರಿನಲ್ಲಿ ಬರೆದಿರುವ ಅವರ ಜೀವನಗಾಥೆಯು ಒಂದು ಪ್ರೇರಣಾದಾಯಿ ಪುಸ್ತಕ. ಪುಸ್ತಕ ತೆರೆದ ಮೇಲೆ ಕೊನೆಯವರೆಗು ತಾನೆ ತಾನಾಗಿ ಓದಿಸಿಕೊಂಡು ಹೋಗುವ ಪುಸ್ತಕ. ಜೀವನ ಚರಿತ್ರೆಯೆಂದರೆ ಬೇರೆ ಬೇರೆ ವ್ಯಕ್ತಿಗಳ ಮೇಲೆ ಗೂಬೆ ಕೂರಿಸಲು ಮಾಡುವ ಕುಟಿಲೋಪಾಯಗಳು ಎಂದೇ ಬಿಂಬಿತವಾಗಿರುವ ಕಾಲದಲ್ಲಿ ಪ್ರಥಮ ಪುರುಷದಲ್ಲಿ ಪ್ರತಿದಿತವಾಗಿದ್ದರೂ, ವ್ಯಕ್ತಿ ಪ್ರಶಂಸೆಗೆ ಇಲ್ಲಿ ಸ್ಥಳವಿಲ್ಲ. ಹಾಗೆಯೇ ನಿಂದನೆಗೂ ಆಸ್ಪದವಿಲ್ಲವಾಗಿರುವುದು ನನಗೆ ಹೆಚ್ಚು ಖುಷಿ ತಂದಿದೆ’ ಎಂದಿದ್ದಾರೆ.

About the Author

ರವೀಂದ್ರ ಭಟ್ಟ
(07 July 1967)

ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು.  ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...

READ MORE

Related Books