ಸಾಹಿತ್ಯ ಭಾರತೀ

Author : ಎನ್‌. ಅನಂತರಂಗಾಚಾರ್‌

Pages 1308

₹ 1000.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ. ಬೆಂಗಳೂರು
Phone: 08022484516

Synopsys

ಹಿರಿಯ ಕೃತಿ ’ಸಾಹಿತ್ಯ ಭಾರತೀ’ ಭರತ ಖಂಡದ ಹತ್ತೊಂಬತ್ತು ಅಧಿಕೃತ ಭಾಷೆಗಳ ಸಾಹಿತ್ಯ ಚರಿತ್ರೆ ಹಾಗೂ ಭಾರತೀಯರಿಂದ ರಚಿತವಾಗುತ್ತಿರುವ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯೂ ರೂಪುಗೊಂಡಿದೆ. ಅವರು ಬಿ. ಎ. ಆನರ್ಸ್ ತರಗತಿಗೆ ಭಾರತೀಯ ಮತ್ತು ಇತರ ಭಾಷಾಸಾಹಿತ್ಯ ಚರಿತ್ರೆಗಳನ್ನು ಕುರಿತು ಭೋದಿಸಬೇಕಾಗಿ ಬಂದಾಗ, ಅದಕ್ಕೆ ಸಹಾಯವಾಗುವ ಪುಸ್ತಕಗಳಾವುವೂ ಕನ್ನಡದಲ್ಲಿ ದೊರೆಯುತ್ತಿರಲಿಲ್ಲವೆಂಬ ಕಾರಣದಿಂದ ರಚಿಸಿದ ಕೃತಿ ಇದು.

ಅಲ್ಲದೇ, ಭಾರತದ ವಿವಿಧ ಭಾಷೆಗಳ ಮಾದರಿ ಬರೆಹಗಳನ್ನೂ ನೀಡಿರುವುದು ಮತ್ತೊಂದು ವಿಶೇಷತೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ತೌಲನಿಕ ಅಧ್ಯಯನಕ್ಕೆ ಆಕರಗ್ರಂಥವಾಗಿ ಒದಗುವ ಒಂದು ಸಂಶೋಧನಾ ಗ್ರಂಥವಾಗಿಯೂ ಇದು ಅತ್ಯಂತ ಗಮನಾರ್ಹ ಕೃತಿಯಾಗಿದೆ.

About the Author

ಎನ್‌. ಅನಂತರಂಗಾಚಾರ್‌
(23 May 1906 - 28 October 1997)

ಪ್ರಾಚೀನ ಸಾಹಿತ್ಯದಲ್ಲಿ ಬಹು ಆಸ್ಥೆ ಹೊಂದಿದ್ದ ಎನ್‌ ಅನಂತ ರಂಗಾಚಾರ್‌ರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ. ಎನ್.ಎಸ್. ಸುಬ್ಬರಾವ್, ಎಂ. ಹಿರಿಯಣ್ಣ, ಎ.ಆರ್. ವಾಡಿಯಾ ಇವರ ಗುರುಗಳು. ‘ಮಲ್ಲಿಕಾರ್ಜುನರ ಸೂಕ್ತಿ ಸುಧಾರ್ಣವ’ ಗ್ರಂಥವನ್ನು ಅಚ್ಚುಕಟ್ಟಾಗಿ ಸಂಶೋಧಿಸಿ ಸಂಕಲಿಸಿ ಅಕಾರಾದಿಯಾಗಿ ಪ್ರಕಟಿಸಿದ್ದಾರೆ. ಹಲವಾರು ಕೈಬರಹದ ಗ್ರಂಥಗಳ ಸಂಶೋಧನೆಗೆ ಮುಂದಾಗಿ ದೇಶದ ಒಳಗೂ ಹೊರಗೂ ಸಂಚಾರ ಕೈಗೊಂಡರು. ಇವರ ಪ್ರಮುಖ ಕ್ಷೇತ್ರ ಗ್ರಂಥ ಸಂಪಾದನೆ, ಸಂಶೋಧನೆ, ಸಾಹಿತ್ಯ ಚರಿತ್ರೆ ರಚನೆಗಳು. ಸೂಕ್ತಿ”ಸುಧಾರ್ಣವ’ದ 2000 ಪದ್ಯಗಳಿಗೆ, ಕಾವ್ಯಸಾರದ 3500 ಪದ್ಯಗಳಿಗೆ ತುಲನಾತ್ಮಕವಾಗಿ, ಕ್ರೋಢಿಕರಿಸಿ ಅಕಾರಾದಿಯನ್ನು ...

READ MORE

Related Books