ಸಾಹಿತ್ಯ ಲಹರಿ

Author : ಹೆಚ್. ಎಸ್. ಪಾರ್ವತಿ

Pages 204

₹ 100.00




Published by: ಕಿರಣ್ ಬುಕ್ ಡಿಸ್ಟ್ರಿ ಬ್ಯುಟರ್‍ಸ್
Address: ಬೆಂಗಳೂರು

Synopsys

`ಸಾಹಿತ್ಯ ಲಹರಿ’ ಕೃತಿಯು ಎಚ್.ಎಸ್. ಪಾರ್ವತಿ ಅವರ ಲೇಖನಗಳ ಸಂಕಲನವಾಗಿದೆ. ಒಟ್ಟು 19 ಲೇಖನಗಳಿವೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಾ.ಡಿಸೋಜ ಅವರ ‘ಕುಂಜಾಲು ಕಣಿವೆಯ ಕೆಂಪು ಹೂ’, ‘ಪಟ್ಟ ಮಹಾದೇವಿ ಶಾಂತಲಾ ಬಗ್ಗೆ ಪ್ರಕಟವಾಗಿರುವ ಕಾದಂಬರಿಗಳು’,‘ಅನಕೃ ಅವರ ಕಥಾ ಸಾಹಿತ್ಯ’, ‘ನವೋದಯ ಕಥೆಗಳು’ ಇಂಥ ಲೇಖನಗಳಲ್ಲೆಲ್ಲ ಲೇಖಕಿಯ ತಲಸ್ಪರ್ಶಿಯಾದ ಅಧ್ಯಯನ ಇರುವುದು ಕಾಣುತ್ತದೆ. ನಾ.ಡಿಸೋಜಾ ಅವರ ಕಾದಂಬರಿಯ ಬಗ್ಗೆ ಬರೆದುದನ್ನು ಬಿಟ್ಟರೆ, ಲೇಖಕಿ ಆಧುನಿಕ ಲೇಖಕರ ಸಾಹಿತ್ಯದ ಬಗ್ಗೆ ಬರೆದಿಲ್ಲದಿರುವುದು ಕುತೂಹಲ ಹುಟ್ಟಿಸುತ್ತದೆ. ಇವುಗಳ ಜೊತೆಗೆ, ಜಿ.ಎಸ್.ಶಿವರುದ್ರಪ್ಪನವರ ಬಗ್ಗೆ ಬರೆದ ಆತ್ಮೀಯ ಚಿತ್ರಣವೊಂದು ಇಲ್ಲಿದೆ. ಇವೆಲ್ಲ ಲೇಖನಗಳು ಅಕಾಡೆಮಿಕ್ ಅಧ್ಯಯನದ ಫಲವಾಗಿದೆ. ಸಾಹಿತ್ಯದ ಕೆಲವು ವಿವರಗಳಿಗಾಗಿ, ಮಾಹಿತಿಗಳಿಗಾಗಿ ಈ ಪುಸ್ತಕವನ್ನು ನೋಡಬಹುದು. ಇವುಗಳಲ್ಲಿ ‘ಸ್ವಾತಂತ್ರ‍್ಯ ಪೂರ್ವದ ಕನ್ನಡ ಲೇಖಕಿಯರು’, ‘ಪ್ರಾಚೀನ ಕರ್ನಾಟಕದಲ್ಲಿ ಉದ್ಯೋಗಸ್ಥ ಮಹಿಳೆ’,‘ಕರ್ನಾಟಕದರಸು ಮನೆತನಗಳು ಮತ್ತು ಕಲೆ’ ಇಂತಹ ಲೇಖನಗಳಾಗಿವೆ.

About the Author

ಹೆಚ್. ಎಸ್. ಪಾರ್ವತಿ
(03 February 1934 - 09 November 2015)

ಹಿರಿಯ ಸಾಹಿತಿ ಪಾರ್ವತಿ ಎಚ್.ಎಸ್ ಅವರು ವೃತ್ತಿಯಲ್ಲಿ ಆಕಾಶವಾಣಿ ಕಾರ್ಯಕ್ರಮ ಸಂಯೋಜಕಿಯಾಗಿ ಸೇವೆ ಸಲ್ಲಿಸಿದ್ದರು. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಅವರು ನೇಸರ-ನೆರಳು, ಮಡಿಲು, ಯುಗಪುರುಷ ಮುಂತಾದ ಕಾದಂಬರಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ   ಮಹತ್ವದ ಕೊಡುಗೆ ನೀಡಿದ್ದಾರೆ.  ಇವರಿಗೆ ಅನುಪಮಾ ಪ್ರಶಸ್ತಿ, ಸೌಹ ಸಮಾನ ಲಿಪಿಪ್ರಾಜ್ಞೆ ಪ್ರಶಸ್ತಿ, ಕೆ.ಎಸ್.ಭಾರತಿ ರಾಜಾರಾಮ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದುಬಂದಿವೆ.  ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ಕಲೆಗೆ ಜಾತಿಯ ಹಂಗಿಲ್ಲ, ಇದು ಬರಿ ಬೆಳಗಲ್ಲ, ಹೆಣ್ಣು ಹೃದಯ, ಬದಲಾದ ಪ್ರತಿಬಿಂಬ, ಸ್ವರ ಅಪಸ್ವರ, ಒಂಟಿ ಮೋಡ, ನೆನಪು ...

READ MORE

Related Books