ಸಾಹಿತಿ ಗಣಪತಿ ದಿವಾಣ

Author : ಶ್ರೀರಾಮ ದಿವಾಣ

Pages 56

₹ 45.00




Year of Publication: 2017
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 203ನೇ ಪುಸ್ತಕ. ಸಾಹಿತಿ ಗಣಪತಿ ದಿವಾಣ ದಣಿವರಿಯದ ಕನ್ನಡ ಕಟ್ಟಾಳು. ಗಣಪತಿ ದಿವಾಣ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಅಂಕಣ ಬರೆದಿರುವವರೆನ್ನಲಾಗಿದೆ. ಕಾಸರಗೋಡಿನ ಸಾಹಿತಿ ಗಣಪತಿ ದಿವಾಣ (1929 -1999) ಸಾವಿರಾರು ಪುಟಗಳನ್ನು ಬರೆದರೂ ಇವುಗಳನ್ನು ಉಳಿಸಿಕೊಳ್ಳಲಾಗದೆ ಹೋದದ್ದು ದೌರ್ಭಾಗ್ಯ. 'ಕಲಾ ಶ್ರೀಮಂತಿಕೆಯ, ಆರ್ಥಿಕವಾಗಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿ, ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದರೂ ಕಲಿಯಲಾಗದೆ ಹೊಟ್ಟೆಪಾಡಿಗಾಗಿ ಊರೂರುಗಳಲ್ಲಿ ಕೆಲಸ ಮಾಡುತ್ತಾ, ಕವಿಯಾಗಿ, ಕಥೆಗಾರರಾಗಿ, ಲೇಖಕರಾಗಿ, ಅಂಕಣಕಾರರಾಗಿ, ಪತ್ರಿಕೋದ್ಯೋಗಿಯಾಗಿ ಜೀವನದುದ್ದಕ್ಕೂ ನೋವುಂಡವರು. ಸಮಾಜಕ್ಕೆ ಹಾಸ್ಯ ಸಾಹಿತ್ಯವನ್ನು ಉಣಿಸುತ್ತಾ, ಸಮಾಜ ಸೇವೆಯೊಂದಿಗೆ ಜೀವನ ಸಾರ್ಥಕಗೊಳಿಸಿದವರು. ಜೀವನವೇ ಹೋರಾಟವಾಗಿದ್ದಾಗ, ಕಾಸರಗೋಡು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಯಕ್ಷಗಾನ ಕ್ಕಾಗಿಯಷ್ಟೇ ವೇಷ ಹಾಕಿದ ದಿವಾಣರು ಎಂದಿಗೂ ಯಾವ ಸಂದರ್ಭದಲ್ಲೂ ನಿಜ ಬದುಕಿನಲ್ಲಿ ವೇಷ ಹಾಕಿದವರಲ್ಲ' ಎಂದು ಗಣಪತಿ ದಿವಾಣರ ಬದುಕನ್ನು ಅವರ ಪುತ್ರ ಶ್ರೀರಾಮ ದಿವಾಣ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

About the Author

ಶ್ರೀರಾಮ ದಿವಾಣ

ಶ್ರೀರಾಮ ದಿವಾಣರು (ಜನನ 1974) ಶಾಲಾ ದಿನಗಳಿಂದಲೇ ಸಾಹಿತ್ಯದ ಪ್ರೀತಿ ಬೆಳೆಸಿಕೊಂಡದವರು. ಸ್ವತಃ ಕವಿತೆ, ಚುಟುಕು, ಲೇಖನಗಳನ್ನು ಬರೆಯುತಿದ್ದ ಶ್ರೀರಾಮ ದಿವಾಣರು 'ಕಾಸರಗೋಡು ದರ್ಪಣ’ ಎಂಬ ಸಾಹಿತ್ಯಕ ಮಾಸ ಪತ್ರಿಕೆಯನ್ನು ಸಂಪಾದಕ ಪ್ರಕಾಶಕರಾಗಿ ಗಣಪತಿ ದಿವಾಣ ಹಾಗೂ ಅಣ್ಣ ರವಿರಾಜ ದಿವಾಣ ಇವರ ಸಹಕಾರದಿಂದ ಕೆಲವು ಕಾಲ ನಡೆಸಿದ್ದರು. ನಂತರ ಪೂರ್ಣಾವಧಿ ಪತ್ರಿಕಾ ವರದಿಗಾರರಾಗಿ ವಿವಿಧ ಪತ್ರಿಕೆಗಳಲ್ಲಿ ದುಡಿದರಲ್ಲದೆ, 'ಕರಾವಳಿ ರಿಪೋರ್ಟರ್' ಎಂಬ ಪತ್ರಿಕೆಯನ್ನೂ ನಡೆಸಿದ್ದುಂಟು. ಉಡುಪಿಯಲ್ಲಿ ಕೇಬಲ್ ಟಿವಿ ನ್ಯೂಸ್ ಛಾನೆಲ್ (ಉಡುಪಿ ವಾರ್ತೆ) ಆರಂಭಿಸಿದ್ದು ಅವರ ಹೆಗ್ಗಳಿಕೆ. ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ದಿವಾಣರು ...

READ MORE

Related Books