ಸಾಹಿತ್ಯ ತತ್ವ: ಬೇಂದ್ರೆ ದೃಷ್ಟಿ

Author : ಕೆ.ವಿ. ನಾರಾಯಣ

Pages 60

₹ 50.00




Year of Publication: 1984
Published by: ಅಭಿನವ ಪ್ರಕಾಶನ
Address: ಅಭಿನವ, 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ವಿಮರ್ಶಕ  ಕೆ.ವಿ.ನಾರಾಯಣ ಅವರು ಬರೆದಿರುವ ”ಸಾಹಿತ್ಯ ತತ್ತ್ವ: ಬೇಂದ್ರೆ ದೃಷ್ಟಿ’, ಕೃತಿಯು ವಿಮರ್ಶಾ ಕೃತಿಯಾಗಿದೆ. ಅಭಿನವ ಪ್ರಕಾಶನದ ಸರಸ್ವತಿಯ ನೆನಪು ಮಾಲಿಕೆಯಲ್ಲಿ ಪ್ರಕಟವಾದ ಈ ಕೃತಿಯು ಅಪೂರ್ವವಾದುದು. 

ಭಾರತೀಯ ಕಾವ್ಯಮೀಮಾಂಸೆ ಮತ್ತು ಪಾಶ್ಚಾತ್ಯ ಕಾವ್ಯತತ್ವಗಳ ತಲಸ್ಪರ್ಶಿಯಾದ ಅಧ್ಯಯನ, ಶ್ರೇಷ್ಟವಾದ ಸೃಜನಶೀಲ ಪ್ರತಿಭೆಗೆ ಮಾತ್ರ ಸಾಧ್ಯವಾದ ಒಳನೋಟಗಳು,ಮತ್ತು  ಆರೋಗ್ಯಕರವಾದ ವಾದ-ವಿವಾದಗಳನ್ನು ಮುಂದಿಡುವಾಗಲೂ ವಿಮರ್ಶಕರ ಮೂಲಭೂತಗುಣವಾಗಿರಬೇಕಾದ ವಿನಯವನ್ನು ಬಿಡದಿರುವುದು ಇಂತಹ ಹತ್ತು ಹಲವು ಸಂಗತಿಗಳು ಕೆ.ವಿ.ನಾರಾಯಣ ಅವರ ಈ ಕೃತಿಯಲ್ಲಿ  ಪ್ರಕಟವಾಗಿದೆ. 

ನವೋದಯದ ಹಿರಿಯರಾದ ಬೇಂದ್ರೆಯವರ ಸಾಹಿತ್ಯತತ್ತ್ವವನ್ನು, ಅಂದಿನ ಸಾಂಸ್ಕೃತಿಕ ಸಂದರ್ಭದ ಹಿನ್ನೆಲೆಯಲ್ಲಿ ವಿವರಿಸುವ, ಬೆಲೆಕಟ್ಟುವ ಈ ಕೃತಿ, ಅಂತಹ ಪ್ರಯತ್ನಗಳಿಗೆ ಮೇಲುಪಂಕ್ತಿ ಹಾಕಿಕೊಟ್ಟಿದೆ. ಸಾಹಿತ್ಯ ಸ್ವರೂಪ, ಸಾಹಿತ್ಯ ಪ್ರಯೋಜನ, ವಿವಿಧ ಸಾಹಿತ್ಯ ಪ್ರಕಾರಗಳ ಇತಿಮಿತಿಗಳೆರಡನ್ನೂ ನಿರ್ಮಮಭಾವದಿಂದ ನಿರೂಪಿಸುವ ವಿಮರ್ಶಕರು, ಇಂತಹ ಕೆಲಸಕ್ಕೆ ಬೇಕಾದ ಅಸಂದಿಗ್ಧಶೈಲಿ ಮತ್ತು ಖಚಿತವಾದ ಪರಿಭಾಷೆಗಳನ್ನು ರೂಪಿಸಿಕೊಂಡಿದ್ದಾರೆ. 

About the Author

ಕೆ.ವಿ. ನಾರಾಯಣ
(20 October 1948)

ಕಂಪಲಾಪುರ ವೀರಣ್ಣ ನಾರಾಯಣ ಅವರು ಜನಿಸಿದ್ದು 1948ರಲ್ಲಿ. ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು ಕಂಪಲಾಪುರ. ಅಮ್ಮ ಕೆಂಚಮ್ಮ ಮತ್ತು ಅಪ್ಪ ವೀರಣ್ಣ. ಮೊದಲ ಹಂತದ ಓದು ಪುತ್ತೂರು ಮತ್ತು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡು ಪಿ.ಯು.ಸಿ. ಓದಿದರು. ಇಂಜಿನಿಯರಿಂಗ್ ಮಾಡಲು ಅವಕಾಶವಿದ್ದರೂ ಎಂಜಿನಿಯರ್ ಆಗಕೂಡದೆಂದು ತೀರ್ಮಾನಿಸಿದ ಕೆ.ಎ.ಎಸ್ ಮತ್ತೆ ಮೈಸೂರಿನ ಯುವರಾಜ ಕಾಲೇಜಿನಲ್ಲಿ ವಿಜ್ಞಾನದ ಅಭ್ಯಾಸವನ್ನು ಮುಗಿಸಿದರು. ಆನಂತರದಲ್ಲಿ ಬಿ.ಎಡ್. ಮುಗಿಸಿ ಆರಂಭಿಸಿದ್ದು ಹೈಸ್ಕೂಲಿನಲ್ಲಿ ಅಧ್ಯಾಪನ. ಮುಂದಿನ ಓದಿಗಾಗಿ ಮತ್ತೆ ಬೆಂಗಳೂರಿನತ್ತ ಪಯಣ. ಆ ಹೊತ್ತಿಗೇನೆ ಸಾಹಿತ್ಯದ ಓದಿಗೂ ಬಿದ್ದು ಬರವಣಿಗೆಯಲ್ಲೂ ...

READ MORE

Related Books