ಸಾಹಿತ್ಯ ವಿಜ್ಞಾನ ಸಂಕೀರ್ಣ

Author : ನಳಿನಿ ಮೂರ್ತಿ

Pages 320

₹ 220.00




Year of Publication: 2018
Published by: ಸಾಹಿತ್ಯ ನಂದನ

Synopsys

ಲೇಖಕಿ ನಳಿನಿ ಮೂರ್ತಿ ಅವರ ಕೃತಿ ಸಾಹಿತ್ಯ ವಿಜ್ಞಾನ ಸಂಕೀರ್ಣ. ವ್ಯಕ್ತಿ ಬೆಳೆದು ದೊಡ್ಡವನಾದಂತೆ ಯಾವುದೇ ಒಂದರಿಂದ ವಶೀಕೃತನಾಗಿ ಅದರ ಅನುಶೀಲನೆಯನ್ನೇ ತನ್ನ ವೃತ್ತಿಯೆಂದು ಆಯುವುದು ವಾಡಿಕೆ. ಆಗ ಇನ್ನೊಂದು (ಸಾಹಿತ್ಯ ಅಥವಾ ವಿಜ್ಞಾನ) ಹವ್ಯಾಸವಾಗುತ್ತದೆ. ಹೀಗೆ ವಿಜ್ಞಾನಿಗಳ – ಸಾಹಿತಿಗಳ ಬಳಗಗಳು ಕೆನೆಗಟ್ಟುತ್ತವೆ. ತೀರ ವಿರಳವಾಗಿ ಕೆಲವು ಪ್ರತಿಭಾನ್ವಿತರು ಉಭಯ ಪ್ರಕಾರ ಗಳಲ್ಲಿಯೂ ಪ್ರಾವೀಣ್ಯತೆ ಗಳಿಸಿ, ನವಶೈಲಿಯ ಪ್ರವರ್ತಕರಾಗುವುದುಂಟು. ಇವರಿಗೆ ‘ವಿಜ್ಞಾನವೆನ್ನೊಡಲು ಸಾಹಿತ್ಯವೆನ್ನುಸಿರು’ ಅಥವಾ ‘ಸಾಹಿತ್ಯವೆನ್ನೊಡಲು’ ವಿಜ್ಞಾನವೆನ್ನುಸಿರು ಆಗಿರುತ್ತದೆ.

About the Author

ನಳಿನಿ ಮೂರ್ತಿ
(24 February 1937)

ಕನ್ನಡದ ಸಾಹಿತ್ಯದಲ್ಲಿ ಒಲವುಳ್ಳ ನಳಿನಿ ಮೂರ್ತಿ ಅವರು 1927 ಫೆಬ್ರವರಿ 24ರಂದು ಜನಿಸಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಎಲೆಕ್ಟಿಕಲ್ ಕಮ್ಯೂನಿಕೇಷನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ‘ಬಿಸಿಲು ಮಳೆ, ಬೀಸಿ ಬಂದ ಬಿರುಗಾಳಿ, ಬಂಗಾರದ ಜಿಂಕೆ, ಹೊಸಬಾಳು, ಊರ್ಮಿಳಾ, ಪ್ರತಿಜ್ಞೆ’ ಅವರ ಪ್ರಮುಖ ಕಾದಂಬರಿಗಳು. ಭಾರತ ಸರ್ಕಾರದ ಇಂಜಿನಿಯರಿಂಗ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆ, ಎಂ.ಟೆಕ್ ಸ್ನಾತಕ ಪದವಿ ಇಂಗ್ಲೆಂಡ್‌ನ ಮ್ಯಾಚೆಸ್ಟರ್ ಕಾಲೇಜಿನಲ್ಲಿ, ಕೆನಡಾದ ನೋವನ್ನೀಶಿಯೊ ಪ್ರಾಂತ್ಯದ ಪ್ರೊಫೆಶನಲ್ ಇಂಜಿನಿಯರಿಂಗ್ ಸಂಸ್ಥೆಯ ಮೊದಲ ಮಹಿಳಾ ಉದ್ಯೋಗಿ, ಎಲೆಕ್ಟ್ರಿಕ್ಸ್‌ನಲ್ಲಿ ಪಿಎಚ್.ಡಿ. ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. ಕರ್ನಾಟಕ ಲೇಖಕಿಯರ ಸಂಘದಲ್ಲಿ ನಳಿನಿಮೂರ್ತಿ ...

READ MORE

Related Books