ಕವನಗಳಲ್ಲಿ ಸಂಕೀರ್ಣತೆ

Author : ವಿ.ಕೃ. ಗೋಕಾಕ (ವಿನಾಯಕ)

Pages 50

₹ 50.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಸಾಹಿತಿ ವಿ. ಕೃ ಗೋಕಾಕ್ ಅವರ ’ ಕವನಗಳಲ್ಲಿ ಸಂಕೀರ್ಣತೆ’ ಕೃತಿಯು ಕನ್ನಡ ಕಾವ್ಯ ಲೋಕದಲ್ಲಿಯ ಅಪೂರ್ವ ಕೃತಿ. ವಿಮರ್ಶೆಯಲ್ಲಿ ಪಾರಿಭಾಷಿಕ ಶಬ್ದಗಳು ಕಾಲಕಾಲಕ್ಕೆ ಬೇರೆಯಾಗಬಹುದು. ಹೊಸ ತತ್ವಗಳನ್ನೂ ವಿಮರ್ಶಕರು ಗುರುತಿಸಬಹುದು. ಆದರೆ, ಒಂದು ಕಾವ್ಯತತ್ವ ಅನೇಕ ಕಾವ್ಯಮಾರ್ಗಗಳಿಗೆ ಅನ್ವಯಿಸುತ್ತದೆ. ಅಂತೇ, ಅದು ಒಂದು ಮಾರ್ಗದ ಊರುಗೋಲಾಗದೇ, ಕಾವ್ಯತತ್ವವಾಗುತ್ತದೆ. ಈ ಮಾತು ಅನೇಕ ವಿಮರ್ಶಕರಿಗೆ ಅಪರಿಚಿತವೇ.  ‘ಸರಳೀಕರಣ'ವೆಂದರೆ ಒಂದು ಕಾವ್ಯಮಾರ್ಗವನ್ನು ದೂಷಿಸಲು ಬಳಸಬೇಕಾದ ಶಬ್ದವಾಗಿದೆ. “ಸರಳೀಕರಣ'ದ ಕ್ರಿಯೆ ಎಲ್ಲ ಕಾವ್ಯ ಮಾರ್ಗಗಳಲ್ಲಿಯೂ ಸಾಧ್ಯವೆಂಬುದನ್ನು ಈ ವಿಮರ್ಶಕರು ಗಮನಿಸುವುದಿಲ್ಲ. ಅವರಂತೆ ‘ಸಂಕೀರ್ಣತೆ’ ಒಂದೇ ತರಹದ ಕಾವ್ಯದಲ್ಲಿ ಕಂಡುಬರುವ ಗುಣವನ್ನು ಸೂಕ್ಷ್ಮವಾಗಿ ಅರಿಯಬಹುದು. ಕಾವ್ಯ, ವಿಮರ್ಶೆ, ಸಹೃದಯ ಓದುಗ , ಉಂಟು ಮಾಡಬಹುದಾದ ಪರಿಣಾಮ ಇತ್ಯಾದಿ ವಿಷಯಗಳ ಕುರಿತು ಆಳವಾದ ಅರಿವನ್ನು ಮೂಡಿಸಬಲ್ಲ ಕೃತಿ ಇದು. 

ಮೈಸೂರಿನ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಸಹ್ಯಾದ್ರಿ ಪ್ರಕಾಶನವು ಕೆ.ವಿ. ಶಂಕರಗೌಡ ದತ್ತಿ ಉಪನ್ಯಾಸ ಮಾಲಿಕೆಯಡಿ ಈ ಕೃತಿಯನ್ನುಮೊದಲ ಬಾರಿಗೆ ಅಂದರೆ 1978ರಲ್ಲಿ ಪ್ರಕಟಿಸಲಾಗಿತ್ತು. ಪುಟ: 60.

 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books