ವಿಶ್ವಮಾನ್ಯ ಅಂಕಿ ಅಂಶ ತಜ್ಞರಾದ ಚನ್ನಗಿರಿ ಕೇಶವಮೂರ್ತಿ ಅವರ ಜೀವನ ಸಾಧನೆ ಕುರಿತ 'ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು' ಪುಸ್ತಕ ಇದಾಗಿದೆ. ಇವರ ಬದುಕು, ಸಾಹಿತ್ಯ, ಕ್ರಿಕೆಟ್‌ನ ಯಶೋಗಾಥೆಯೇ ಇಲ್ಲಿನ ಜೀವಾಳ. ಇಂಥ ಅಪರೂಪದ ಕೃತಿಯನ್ನು ಪತ್ರಕರ್ತ ಕಗ್ಗೆರೆ ಪ್ರಕಾಶ್ ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ಸಾಮಾನ್ಯವಾಗಿ ಜೀವನ ವೃತ್ತಾಂತವನ್ನು ಸ್ವಯಂ ಲೇಖಕರೇ ಬರೆದುಕೊಳ್ಳುತ್ತಾರೆ ಇಲ್ಲವೇ ಹೇಳಿ ಬರೆಸುತ್ತಾರೆ. ಆದರೆ ಕೇಶವಮೂರ್ತಿ ಜೀವನ ವೃತ್ತಾಂತವನ್ನು ಸಂಬಂಧಿಕರು, ಸ್ನೇಹಿತರು, ಮಾಧ್ಯಮ ಮಿತ್ರರನ್ನು ಸಂಪರ್ಕಿಸಿ, ಅವರು ಕಂಡಂತೆ ಮೂರು ಭಾಗಗಳಲ್ಲಿ ಕಟ್ಟಿಕೊಡಲಾಗಿದೆ. ಹಾಗೆಯೇ ಕ್ರಿಕೆಟ್ ದಿಗ್ಗಜರ ಜೊತೆಗಿನ ಒಡನಾಟದ ಬರಹಗಳು ಕುತೂಹಲಕರವಾಗಿವೆ. ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಬ್ರಿಜೇಶ್ ಪಟೇಲ್, ಸುನಿಲ್ ಜೋಷಿ ಹಾಗೂ ಇನ್ನಿತರ ವಿಶ್ವದ ಕ್ರಿಕೆಟ್ ದಿಗ್ಗಜರ ಒಡನಾಟವನ್ನು ನಮಗೆ ಪರಿಚಯಿಸುವ ಆಸಕ್ತಿಕರ ಲೇಖನಗಳು ಈ ಕೃತಿಯಲ್ಲಿವೆ. ಟ್ರಾಫಿಕ್ ಪೊಲೀಸ್ ಅಲ್ಲದೆ, ನಲವತ್ತು ವರ್ಷದಿಂದ ಮನೆಕೆಲಸ ಮಾಡಿಕೊಂಡಿರುವ ಬೈರಮ್ಮ ಕೂಡ ಪುಸ್ತಕದಲ್ಲಿ ಬರೆದಿರುವುದು ವಿಶೇಷವಾಗಿದೆ.
ಕಗ್ಗೆರೆ ಪ್ರಕಾಶ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕಗ್ಗೆರೆ ಗ್ರಾಮದವರು. 1971 ಜೂನ್ 1 ರಂದು ಜನನ. ತಂದೆ ಕೆ.ಸಿ.ಚೆನ್ನಾಚಾರ್, ತಾಯಿ ಅಮ್ಮಯಮ್ಮ. ತಮ್ಮ ಹೆಸರಿನ ಮುಂದೆ ಹುಟ್ಟೂರನ್ನು ಸೇರಿಸಿಕೊಂಡು ಕನ್ನಡ ಸಾರಸ್ವತ ಲೋಕದಲ್ಲಿ ‘ಕಗ್ಗೆರೆ ಪ್ರಕಾಶ್’ ಎಂದೇ ಚಿರಪರಿಚಿತರು. ಬಂಡಾಯ ಸಾಹಿತ್ಯ ಸಂಘಟನೆ ಮೂಲಕ ಗುರುತಿಸಿಕೊಂಡವರು. ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 1994 ರಿಂದ ಹೊಸ ದಿಗಂತ, ಆಂದೋಲನ, ಪ್ರಜಾಮತ, ಕರ್ನಾಟಕ ನ್ಯೂಸ್ ನೆಟ್, ವಿಕ್ರಾಂತ ಕರ್ನಾಟಕ, ಹಾಯ್ ಬೆಂಗಳೂರು, ಚಿತ್ತಾರ, ಕರ್ನಾಟಕ ಟೀವಿ ಲೋಕ, ಕನ್ನಡಪ್ರಭ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ದುಡಿದವರು. ಇವರ ಕಾವ್ಯ-ಕಥೆ, ಚಿಂತನೆಗಳು ಆಕಾಶವಾಣಿ, ಕಿರುತೆರೆಗಳಲ್ಲೂ ಬಿತ್ತರಗೊಂಡಿವೆ. ಬೆಂಗಳೂರಿನಲ್ಲಿ ...
READ MORE