ಸಕ್ಕರೆಯ ಸೀಮೆ

Author : ಕೆ. ಅನಂತರಾಮು

Pages 648

₹ 200.00




Year of Publication: 2004
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ದುಃಖ ದುಮ್ಮಾನಗಳನ್ನು, ವರ್ತಮಾನದ ಕಷ್ಟ ಕಾರ್ಪಣ್ಯಗಳನ್ನು ತಮ್ಮ ಪೂರ್ವಿಕರ ಸಾಹಸ-ಹೆಮ್ಮೆಗಳನ್ನೂ ಈ ಕೃತಿಯಲ್ಲಿ ಕೆ.ಅನಂತರಾಮು ರವರು ಒಂದುಗೂಡಿಸಿದ್ಧಾರೆ. ಜನಪದಕ್ಕೆ ಜನಪದ, ಚರಿತ್ರೆಗೆ ಚರಿತ್ರೆ, ಸಾಹಿತ್ಯಕ್ಕೆ ಸಾಹಿತ್ಯ, ಮಾನವಶಾಸ್ತ್ರಕ್ಕೆ ಮಾನವಶಾಸ್ತ್ರ ನಾನ ಬಗೆಯ ವಿಷಯಗಳನ್ನು ಹೆಕ್ಕಿಕೊಂಡು ಇಲ್ಲಿ ಅಂತರ್ಗತಗೊಳಿಸಲಾಗಿದೆ. ಹಲವು ವಿಧದ ವಿಷಯಗಳು ಒಂದೇ ಪುಸ್ತಕದಲ್ಲಿ ಕೊಟ್ಟಿರುವುದರಿಂದ ಓದುಗರಿಗೆ ಉಪಯುಕ್ತವಾಗಿದೆ. ಮಂಡ್ಯ ಜಿಲ್ಲೆ ಯ ಪ್ರವಾಸ ಕಥನ ಗೀತೆ ಜನಮನ ಗೆದ್ದಿದೆ.

About the Author

ಕೆ. ಅನಂತರಾಮು
(25 October 1947)

ಲೇಖಕ, ಪ್ರಕಾಶಕರಾದ ಅನಂತರಾಮುರವರು ಜನಿಸಿದ್ದು 1947 ಅಕ್ಟೋಬರ್‌ 25ರಂದು. ಮೂಲತಃ  ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಾವಡಗೆರೆಯವರು. ತಂದೆ ಎನ್.ಎಸ್. ಕೃಷ್ಣಪ್ಪ, ತಾಯಿ ಸುಬ್ಬಲಕ್ಷ್ಮಮ್ಮ. ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮದ ಅನಂತಪುರಂ ಡಿಪೋವಿನಲ್ಲಿ ವೃತ್ತಿ ಆರಂಭಿಸಿದ ಇವರು  ಅಧ್ಯಾಪಕರಾಗಬೇಕೆಂಬ ಆಸೆಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ಮಹಾರಾಜಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಇವರ ಪ್ರಮುಖ ಕೃತಿಗಳೆಂದರೆ ದೇವ ಬಿನ್ನಪ, ಉದಯ ರವಿ ನಾಡಿನಲ್ಲಿ (ಜಪಾನ್ ಪ್ರವಾಸ ಕಥನ). ಸಕ್ಕರೆಯ ಸೀಮೆ (ಮಂಡ್ಯ ಜಿಲ್ಲೆಯ ಪ್ರವಾಸಕಥನ). ದಕ್ಷಿಣದ ಸಿರಿನಾಡು (ಸಮಗ್ರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕಥನ). ...

READ MORE

Related Books