ಸಕ್ರೆ ಮೂಟೆ ಯಾರಿಗ್ಬೇಕೂ

Author : ನಿರ್ಮಲಾ ಸುರತ್ಕಲ್

Pages 96

₹ 75.00




Year of Publication: 2016
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

'ಸಕ್ಕೆ ಮೂಟೇ... ಯಾರಿಗೇಕೂ...?” ಈ ಸಂಕಲನದ ಮೊದಲ ಕವಿತೆ ಶುರುವಾಗೋದು ಈ ಸಾಲಿನಿಂದಾನೇ, `ಸಕ್ಕೆ ಮೂಟೆ ಎಲ್ಲಿಗೂ ಬೇಕೂ, ಸತ್ರೆ ಮೂಟೆ ಎಲ್ಲಿಗೂ ಬೇಕೂ..' ಅಂತ ತಟಕ್ಕನೆ ಉತ್ತರ ಕೊಟ್ಟಿಡಬಹುದು. ಹಾಗೆಯೇ ಎಲ್ಲರಿಗೂ ಬೇಕಾಗೊ ಸಕ್ರೆ ಮೂಟೆ ಇಲ್ಲಿನ ಪುಟಗಳಲ್ಲೆಲ್ಲ ತುಂಬಿಕೊಂಡಿವೆ.

ಅಮ್ಮನ ಅಕ್ಕರೆಯೂ ಹಾಗೇ ಉಕ್ಕಿ ಹರಿದಿದೆ. ಪುಟಾಣಿಗಳ ಸಿಹಿ ಸಿಹಿ ಮಾತೂ ಹಾಗೇ ಚೆಲ್ಲುವರಿದಿದೆ. ತಾಯೊಡಲಿನ ವಾತ್ಸಲ್ಯದ ಲೋಕ ಈ ಹೊತ್ತಿಗೆ, ಆಡುಭಾಷೆಯ ಮಾತುಕತೆಯೇ ಇಲ್ಲೆಲ್ಲ ಕೇಳಿ ಬಂದರೂ ಗುಪ್ತಗಾಮಿನಿಯಾಗಿ ಹಾಡಿನ ಜುಳುಜುಳು ನಿನಾದ ಹರಿವಿದೆ ಇಲ್ಲಿ.

 

 

About the Author

ನಿರ್ಮಲಾ ಸುರತ್ಕಲ್

.ಲೇಖಕಿ ನಿರ್ಮಲಾ ಸುರತ್ಕಲ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪುರ ಗ್ರಾಮದವರು. ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸ. ವಸತಿ ನಿಯಲದ ಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ನಾನು ಪ್ರೀತಿಸುತ್ತೇನೆ (ಕವನ ಸಂಕಲನ), ತಿರುಚಬೇಡಿ ಮನಸುಗಳ ದೊಡ್ಡವರಿಗಾಗಿ, ಪಾತರಗಿತ್ತಿ ಪಕ್ಕಾ, ಅ..ಆ..ಇ..ಈ..ಉ..ಊ.., ಪುಟ್ಟಪುಟ್ಟಿ ಗುಟ್ಟಾಗಿ, ಸಕ್ರೆ ಮೂಟೇ ಯಾರಿಗ್ಬೇಕೂ...? ಚೀಂ ಚೀಂ ಚಿಕ್ಕ ಗುಬ್ಬಿ (ಮಕ್ಕಳ ಕವನ ಸಂಕಲನ) ಶ್ರಮಯೇವ... ಜಯತೆ (ಕಾದಂಬರಿ) . ಇವರಿಗೆ ಬಾಲವಿಕಾಸ ಅಕಾಡೆಮಿಯಿಂದ ಎರಡು ಬಾರಿ ಮಕ್ಕಳ ಚಂದಿರ ಪ್ರಶಸ್ತಿ, ಪುತ್ತೂರಿನ ಬೋಳಂತಕೋಡಿ ಕನ್ನಡ ಪ್ರಶಸ್ತಿ, ಡಿಸೋಜಾ-ಎಚ್ ಎಸ್.ವಿ ಪುಟಾಣಿ ಸಾಹಿತ್ಯ ...

READ MORE

Related Books