ಸಲೀಂ ಅವರ ಕಥೆಗಳು

Author : ಕಾ.ಹು ಚಾನ್ ಪಾಷ

Pages 208

₹ 180.00




Year of Publication: 2021
Published by: ಪೂರ್ಣ ದೃಷ್ಠಿ ಪ್ರಕಾಶನ
Address: ಬಂಗಾರಪೇಟೆ, ಕೋಲಾರ ಜಿಲ್ಲೆ

Synopsys

‘ಸಲೀಂ ಅವರ ಕಥೆಗಳು’ ಕಾ. ಹು. ಚಾನ್ ಪಾಷ ಅವರ ಅನುವಾದಿತ ಕತಾಸಂಕಲನವಾಗಿದೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಸಲೀಂ ಅವರ ತೆಲುಗು ಕಥೆಗಳನ್ನು ಅನುವಾದಿಸಿದ ಕೃತಿ ಇದು. ಒಟ್ಟು 17 ಕಥೆಗಳಿದ್ದು, ಎಲ್ಲವೂ ಮುಸ್ಲಿಂ ಸಂವೇದನೆಯ ಸಾಮಾಜಿಕ ಕಥೆಗಳಾಗಿವೆ. ಈ ಮುಸ್ಲಿಮರೆಲ್ಲ ಒಂದು ಕಾಲದಲ್ಲಿ ದಲಿತ ಹಿಂದುಳಿದವರಾಗಿದ್ದರು. ಹೊರಗಿನಿಂದ ಬಂದ ಮುಸ್ಲಿಮರು ಇವರನ್ನು ಒತ್ತಾಯದಿಂದ ಮತ ಪರಿವರ್ತನ ಮಾಡಿದಾಗ ಆರ್ಥಿಕ ಸಂಕಷ್ಟಗಳ ಜೊತೆಗೆ ಸಮಸ್ಯೆಗಳು ಅವರ ಜೊತೆಗೆ ಸೇರಿಕೊಂಡವು. ಎಲ್ಲ ಕಾಲಕ್ಕೂ ಮೇಲು - ಸಾಮಾಜಿಕ ಅಂತರ ಧರ್ಮಗಳ, ಬಡವರ ಸಮಸ್ಯೆಗಳಾಗಿ ಮುಂದುವರಿದುಕೊಂಡೇ ಬಂದಿವೆ ಎಂಬ ವಿಷಾದಮಯ ಭಾವ ಕಥೆಗಳುದ್ದಕ್ಕೂ ಕಾಣಬಹುದು. 

 

About the Author

ಕಾ.ಹು ಚಾನ್ ಪಾಷ

ಕವಿ-ಲೇಖಕ ಕಾ.ಹು ಚಾನ್ ಪಾಷ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೋಲಾರದ ಆಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರು. ತೆಲುಗು ಭಾಷೆಯಿಂದ ಕನ್ನಡಕ್ಕೆ ಹಲವಾರು ಕತೆ, ಕವನಗಳನ್ನು ಅನುವಾದ ಮಾಡಿದ್ದಾರೆ. ಕೃತಿಗಳು: ಮನದ ಮಲ್ಲಿಗೆ(ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ (ಕಥಾ ಸಂಕಲನ), ಭಲೇ! ಗಿಣಿರಾಮ’, ಮೂರು ವರಗಳು (ಮಕ್ಕಳ ನಾಟಕ), ಸಲೀಂ ಅವರ ಕತೆಗಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತೆಲುಗು ಸಾಹಿತಿ ಸಲೀಂ ಅವರ ಸಮಗ್ರ ಕತಾ ಸಾಹಿತ್ಯದಲ್ಲಿನ ಮುಸ್ಲಿಂ ಸಂವೇದನೆಯ ಕತೆಗಳು)  ಪ್ರಶಸ್ತಿ-ಪುರಸ್ಕಾರಗಳು: ಕಾವ್ಯಶ್ರೀ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ, ...

READ MORE

Related Books