ಸಾಲಿಗ್ರಾಮ ಮಹಾಬಲೇಶ್ವರ ಆಚಾರ್ಯ

Author : ರತ್ನಾವತಿ ಜೆ. ಬೈಕಾಡಿ

Pages 56

₹ 45.00




Year of Publication: 2018
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ  'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 239ನೇ ಪುಸ್ತಕ ಸಾಲಿಗ್ರಾಮ ಮಹಾಬಲೇಶ್ವರ ಆಚಾರ್ಯ. ನಿಸ್ಪೃಹ ಸೇವೆಗೆ ಇನ್ನೊಂದು ಹೆಸರು ಸಾಲಿಗ್ರಾಮ ಮಹಾಬಲೇಶ್ವರ ಆಚಾರ್ಯ ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದಲ್ಲಿ ಗೌರವ ಅಧ್ಯಾಪಕರಾಗಿರುವ ಮಹಾಬಲೇಶ್ವರ ಆಚಾರ್ಯರು ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಲಾಖೆಯ ವಿವಿಧ ಕೇಂದ್ರಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಆಚಾರ್ಯರು ನಿವೃತ್ತರಾಗುವಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಲ್ಲಿ ಆಡಳಿತಾಧಿಕಾರಿಯಾಗಿದ್ದರು. ಅವರು ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ವಿಶ್ವಬ್ರಾಹ್ಮಣ ಯುವಜನ ಸಭಾದ ಜತೆ ಕಾರ್ಯದರ್ಶಿಯಾಗಿ, ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಶ್ವಕರ್ಮ ವಿದ್ಯಾರ್ಥಿಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸುಸಂಸ್ಕೃತಿಯ ಪ್ರಸಾರದಲ್ಲಿ ತೊಡಗಿಕೊಂಡಿದ್ದಾರೆ. ಅಮರನಾಥ, ವೈಷ್ಣವೀ ದೇವಿ, ಬದರಿ, ಕೇದಾರ, ಹರಿದ್ವಾರ, ಹೃಷಿಕೇಶ, ಅಮೃತಸರ, ಗಯಾ, ಕಾಶಿ, ಪ್ರಯಾಗ, ನಲಂದ, ಅಲಹಾಬಾದ್ ಮುಂತಾಗಿ ದೇಶದಾದ್ಯಂತ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿರುವ ಆಚಾರ್ಯರು ದೇಶಸುತ್ತಿಯೂ ಕೋಶ ಓದಿಯೂ ಅನುಭವಸಂಪನ್ನರಾಗಿರುವವರು. ಹಲವು ವಿದೇಶಗಳಿಗೂ ಪ್ರವಾಸ ಹೋಗಿ ಅಲ್ಲಿನ ಜನಜೀವನವನ್ನು, ಆರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿರುವ ಆಚಾರ್ಯರ ಇನ್ನೊಂದು ಹವ್ಯಾಸ ಗ್ರಂಥ ಸಂಗ್ರಹ ಹಾಗೂ ಅಧ್ಯಯನ.

About the Author

ರತ್ನಾವತಿ ಜೆ. ಬೈಕಾಡಿ

ರತ್ನಾವತಿ ಜೆ. ಬೈಕಾಡಿ ಕನ್ನಡ ಮತ್ತು ಹಿಂದಿ ಸಾಹಿತ್ಯಗಳನ್ನು ಅಧ್ಯಯನ ಮಾಡಿ ಎಂ.ಎ. ಪದವಿಗಳನ್ನು ಪಡೆದಿದ್ದಾರೆ. ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆಯಲ್ಲಿ ಭಾಷಾಶಿಕ್ಷಕಿಯಾಗಿ ಕೆಲಸ ಮಾಡಿ ಈಗ ನಿವೃತ್ತರಾಗಿದ್ದಾರೆ. ಸಂಗೀತ ವಿದುಷಿಯಾಗಿರುವ ರತ್ನಾವತಿ ಬೈಕಾಡಿಯವರು ಭಾವಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ತುಳು ಭಾವಗೀತೆಗಳಿಗೆ ರಾಗ ಅಳವಡಿಸಿ ಹಾಡಿ ಈ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ...

READ MORE

Related Books