ಗದುಗಿನ ಜಗದ್ಗುರು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮೃತಿ ಸಂಚಯ ಎಂಬ ಉಪಶೀರ್ಷಿಕೆಯಡಿ ಲೇಖಕರಾದ ಎನ್. ಜಗದೀಶ ಕೊಪ್ಪ ಹಾಗೂ ಶಶಧರ ತೋಡಕರ ಅವರ ಸಂಪಾದಕತ್ವದ ಕೃತಿ-ಸಮಾಜಮುಖಿ. ಶ್ರೀ ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಸಮಾಜಸೇವೆ, 12ನೇ ಶತಮಾನದ ಬಸವಣ್ಣ ಸೇರಿದಂತೆ ಎಲ್ಲ ಶರಣರ ನಡೆ-ನುಡಿಯನ್ನು ತಮ್ಮ ಬದುಕಿ ಜೀವಾಳವಾಗಿಸಿಕೊಂಡಿದ್ದ ಅವರ ಬದುಕು-ಸಾಧನೆ, ಗ್ರಂಥ ಪ್ರಕಟಣೆ, ದಾಸೋಹ ಇತ್ಯಾದಿ ಸೇವೆಗಳನ್ನು ಪರಿಚಯಿಸಲು ವಿವಿಧ ಲೇಖಕರು ಬರೆದ ಲೇಖನಗಳ ಸಂಗ್ರಹವಿದು. ಕೃತಿಗೆ ಬೆನ್ನುಡಿ ಬರೆದ ಕವಿ ಚೆನ್ನವೀರ ಕಣವಿ ‘ಮಠೀಯ ಧಾರ್ಮಿಕ ವ್ಯವಸ್ಥೆಯಲ್ಲಿ ಗೊಡ್ಡು ಸಂಪ್ರದಾಯ, ಕಂದಾಚಾರಗಳ ಬುಡಮಟ್ಟ ಕಿತ್ತು, ಒಂದು ಶತಮಾನದ ಕಾರ್ಯ ನಾಲ್ಕು ದಶಕದಲ್ಲಿ ಮಾಡಿದ ಆರ್ಯ’ ಎಂದು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿ ಅವರ ಘನ ವ್ಯಕ್ತಿತ್ವವನ್ನು ಪ್ರಶಂಸಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದವರು. ಬೆಸಗರಹಳ್ಳಿಯಲ್ಲಿ ಪ್ರೌಢ ಶಿಕ್ಷಣ ಮತ್ತು ಪಿ.ಯು.ಸಿ ವಿದ್ಯಾಭ್ಯಾಸ ಹಾಗೂ ಬೆಂಗಳೂರು ವಿ.ವಿ.ಪುರಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಹಂಪಿಯ ಕನ್ನಡ ವಿ.ವಿಯಲ್ಲಿ ಜಾಗತೀಕರಣ ಕುರಿತ ಅಧ್ಯಯನ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು, ಪರಿಸರ, ಮತ್ತು ಜಾಗತಿಕ ಬಡತನದ ಕುರಿತು ವಿಶೇಷ ಆಸಕ್ತಿ. ಕೃತಿಗಳು: ಸುಮ್ಮಾನದ ಪದ್ಯಗಳು ಮತ್ತು ಕಾಶ್ಮೀರದ ಹಾಡು (ಕವನ ಸಂಕಲನಗಳು). ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತೀಯ ಮಹಿಳೆ ಮತ್ತು ಉಮರ್ ಖಯಾಮನ ಪದ್ಯಗಳುಸ ಹಾಗೂ ...
READ MORE