ಸಮಬಾಳಿನ ಸಂಘರ್ಷ

Author : ಪ್ರಕಾಶ್‌ ಕೆ.

Pages 320

₹ 430.00




Year of Publication: 2021
Published by: ಕ್ರಿಯಾ ಮಾಧ್ಯಮ ಪ್ರೈ. ಲಿಮಿಟೆಡ್
Address: #26, 4ನೇ ಕ್ರಾಸ್, ಮಹಾಲಕ್ಷ್ಮೀ ಲೇಔಟ್ ಬೆಂಗಳೂರು -560086

Synopsys

‘ಸಮಬಾಳಿನ ಸಂಘರ್ಷ’ ಕೃತಿಯು ಪ್ರಕಾಶ್ ಕೆ ಅವರು ಕರ್ನಾಟಕದಲ್ಲಿ ಕಮ್ಯೂನಿಸ್ಟ್ ಚಳವಳಿಯ ಒಂದು ನೋಟವನ್ನು ಒಳಗೊಂಡು ಬರೆದ ವಿಚಾರಗಳ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಈ ಕೃತಿಯು ಹಲವಾರು ವಿಚಾರಗಳನ್ನು ಒಳಗೊಂಡಿದ್ದು, ಗಾಂಧೀಜಿ ನೇತೃತ್ವದ ಬ್ರಿಟಿಷ್ ವಸಾಹತುಶಾಹಿ ಸರ್ವಾಧಿಕಾರ ವಿರೋಧಿ ಹೋರಾಟ, ಡಾ. ಅಂಬೇಡ್ಕರ್ ನೇತೃತ್ವದ ಭಾರತದ ವಸಾಹತುಶಾಹಿ ಸರ್ವಾಧಿಕಾರ ವಿರೋಧಿ ಹೋರಾಟ, ಸಮತಾವಾದಿಗಳ ನೇತೃತ್ವದ ಬಂಡವಾಳಶಾಹಿ ಸರ್ವಾಧಿಕಾರ ವಿರೋಧಿ ಹೋರಾಟ, ಇಲ್ಲಿನ ಮುಖ್ಯ ವಿಚಾರಗಳಾಗಿವೆ. ಗಾಂಧಿ, ಅಂಬೇಡ್ಕರ್ ಹಾಗು ಸಮತಾವಾದಿಗಳು ಪ್ರಧಾನವಾಗಿ ಈ ವಿಷಯಗಳನ್ನು ಮುನ್ನೆಲೆಗೆ ತಂದರೂ ಇತರೆ ವಿಷಯಗಳೂ ಕೂಡ ಅವರವರ ವಿಚಾರಧಾರೆಯಲ್ಲಿ ಅಡಕವಾಗಿದ್ದವು. ಅಂಬೇಡ್ಕರ್ ವಿಚಾರಧಾರೆಯಲ್ಲಿ ಆರ್ಥಿಕ ಆಯಾಮವೂ ಇತ್ತು. ಕಾರ್ಮಿಕರ ಪರವಾದ ಒಳವು ನಿಲುವುಗಳಿದ್ದವು. ಗಾಂಧೀಜಿಯವರಲ್ಲಿ ಅಸ್ಪ್ರಶ್ಯತೆ ವಿರೋಧಿ ದೃಢ ನಿಲುವು ಇತ್ತು. ಈ ಮಧ್ಯೆ ಸಮತಾವಾದಿಗಳ (ಕಮ್ಯೂನಿಸ್ಟರ) ಈ ನಿಲುವನ್ನು ಪ್ರಕಾಶ್ ಅವರು ಸಂಪೂರ್ಣ ಸ್ವಾತಂತ್ಯ್ರದ ಒತ್ತಾಯವಾಗಿ ವಿವರಿಸಿದ್ದಾರೆ. ಹಾಗೆಂದು ಎಲ್ಲಿಯೂ ಗಾಂಧಿ, ಅಂಬೇಡ್ಕರ್ ಅವರು ಹೋರಾಟದ ಮಹತ್ವವನ್ನು ಕಡೆಗಣಿಸುವುದಿಲ್ಲ. ಅಂಬೇಡ್ಕರ್ ಅವರ ವಿಚಾರಧಾರೆಯ ವಿವರಗಳನ್ನು ಸಕಾರಾತ್ಮವಾಗಿಯೇ ನಿರೂಪಿಸುತ್ತಾರೆ. ಗಾಂಧೀಜಿಯವರಾದಿಯಾಗಿ ಕೆಲವರ ಪಾತ್ರ ಕುರಿತು ಎಷ್ಟೇ ಮಿತಿಗಳಿದ್ದರೂ ಭಾರತದ ಜನತೆಗೆ ಅವರ ಸೇವೆಯನ್ನು ನಗಣ್ಯಗೊಳಿಸಲಾಗದು’ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಇಂತಹ ಸಕಾರಾತ್ಮಕ ದೃಷ್ಟಿ ಕೋನದಿಂದಲೇ ಪ್ರಕಾಶ್ ಅವರ ವಿಶ್ಲೇಷಣೆಗೆ ಚಾರಿತ್ರಿಕ ಮಹತ್ವ ಬರುತ್ತದೆ. ಚಾರಿತ್ಯ್ರಕತೆಗೆ ಸಕಾರಾತ್ಮಕ ಅಥವಾ ನೆಲೆಗಳು ಅಪ್ರಸ್ತುತ : ವಾಸ್ತವದ ವ್ಯಾಖ್ಯಾನ ,ಮಾತ್ರ ಪ್ರಸ್ತುತವಾಗಿದೆ’ ಎಂದಿದೆ.

About the Author

ಪ್ರಕಾಶ್‌ ಕೆ.

ಲೇಖಕ ಡಾ. ಪ್ರಕಾಶ್ ಕೆ. ಅವರು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಮತ್ತು ಸಿಐಟಿಯು ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.  ಹಂಪಿ ಕನ್ನಡ ವಿವಿಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಉಗಮ ಮತ್ತು ಬೆಳವಣಿಗೆ ವಿಚಾರದಲ್ಲಿ ಪಿಹೆಚ್‌ಡಿ ಮಾಡಿರುವ ಇವರು ಅನುವಾದಕರೂ ಹೌದು.  ಕೃತಿಗಳು : ಆಧುನಿಕೋತ್ತರವಾದ (ಭಾಷಾಂತರ), ಫಿಡೆಲ್ ಕ್ಯಾಸ್ಟ್ರೋ ( ಭಾಷಾಂತರ), ನಿರುದ್ಯೋಗ: ಒಂದು ಪೆಡಂಭೂತ, ಭಯೋತ್ಪಾದನೆ- ಸಿಐಎ, ಜಿಹಾದಿ, ಹಿಂದುತ್ವ, ಸಮಬಾಳಿನ ಸಂಘರ್ಷ: ಕರ್ನಾಟಕದಲ್ಲಿ ಕಮ್ಯುನಿಸ್ಟ್ ಚಳುವಳಿಯ ಒಂದು ನೋಟ. ...

READ MORE

Related Books