ಸಮದರ್ಶಿ

Author : ದೇಜಗೌ (ದೇ. ಜವರೇಗೌಡ)

Pages 768

₹ 350.00




Year of Publication: 1996
Published by: ಪ್ರತಿಭಾ ಸಂಸತ್
Address: ಕುವೆಂಪುನಗರ, ಮೈಸೂರು- 570023

Synopsys

‘ಸಮದರ್ಶಿ’ ಪ್ರೊ. ಎಚ್ಚೆಸ್ಕೆ ಅವರ ಅಭಿನಂದನಾ ಗ್ರಂಥ. ಈ ಕೃತಿಯ ಪ್ರಧಾನ ಸಂಪಾದಕರು ನಾಡೋಜ ದೇ.ಜವರೇಗೌಡ(ದೇಜಗೌ). ವಿದ್ವಾನ್ ಎಂ. ಶಿವಕುಮಾರ ಸ್ವಾಮಿ ಅವರು ಕೃತಿಯ ಸಂಪಾದಕರು. ಎಚ್ಚೆಸ್ಕೆ ಎಂದೇ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾದವರು. ಪ್ರೊ. ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರು 75 ವರ್ಷ ದಾಟಿದ ಸಂದರ್ಭದಲ್ಲಿ ಅಭಿಮಾನಿಗಳು ಅರ್ಪಿಸಿದ ಅಭಿನಂದನಾ ಗ್ರಂಥವಿದು. ಎಚ್ಚೆಸ್ಕೆ ಅವರ ವಿಹಂಗಮ ದೃಷ್ಟಿಯಿಂದಲಾದರೂ ಅವರ ಬಹುಮುಖೀ ಜೀವನದ ಸಾಧನೆ-ಸಿದ್ಧಿಗಳನ್ನು ಅವರು ನಾಡಿಗೆ ನೀಡಿರುವ ವಿದ್ವತ್ ಸಂಪತ್ತನ್ನು ನೆನಪಿಸಿಕೊಂಡು, ಉಚಿತ ರೀತಿಯಲ್ಲಿ ಸನ್ಮಾನ ಮಾಡಬೇಕಾದ್ದು ಕೃತಜ್ಞ ಜನರ ಕರ್ತವ್ಯವಾಗಿದೆ. ಎಚ್ಚೆಸ್ಕೆ ಅವರ ಕಾವ್ಯನಾಮ ಸಮದರ್ಶಿ ಅವರಿಗೆ ಅನ್ವರ್ಥವಾಗಿದೆ, ಈ ಅಭಿನಂದನಾ ಗ್ರಂಥಕ್ಕೆ ಸಾರ್ಥಕವಾಗಿದೆ ಎಂದಿದ್ದಾರೆ ಸಾಹಿತಿ ದೇಜಗೌ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books