‘ಸಮಗ್ರ ದಾಸ ಸಾಹಿತ್ಯ ಸಂಪುಟ-24’ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ದಾಸ ಸಾಹಿತ್ಯ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ದಿ.ಪ್ರೊ.ಎಂ. ರಾಜಗೋಪಾಲಾಚಾರ್ಯ ಹಾಗೂ ಲೇಖಕ ಡಾ.ಶ್ರೀನಿವಾಸ ಹಾವನೂರ ಅವರು ಸಂಪಾದಿಸಿದ್ದಾರೆ. ಇಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯನ್ನು ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಳಿಯ ನುಡಿ, ಪ್ರಸ್ತಾವನೆ, ಕೀರ್ತನೆಗಳ ಕ್ರಮಸೂಚಿ, ಕೀರ್ತನೆಗಳು- ಶ್ರೀ ವಿಶ್ವೇಂದ್ರತೀರ್ಥರ ಕೀರ್ತನೆಗಳು, ಶ್ರೀವರಾಹತಿಮ್ಮಪ್ಪ ಅವರ ರಚನೆಗಳು, ಶ್ರೀಸದಾನಂದರ ಕೀರ್ತನೆಗಳು, ಶ್ರೀ ಬೆಳ್ಳೆ ದಾಸಪ್ಪಯ್ಯರ ಪದಗಳು, ಶ್ರೀಗೋವಿಂದದಾಸರ ಕೃತಿಗಳು, ಅನ್ಯ ದಾಸರ ಬಿಡಿ ರಚನೆಗಳು ಸಂಕಲನಗೊಂಡಿದ್ದು, ಅನುಬಂಧದಲ್ಲಿ ಕಠಿಣ ಶಬ್ದಗಳ ಅರ್ಥ, ಟಿಪ್ಪಣಿಗಳು, ಅಂಕಿತನಾಮ ಸೂಚಿ, ವಿಶಿಷ್ಟ ಪದ ಸೂಚಿ, ಹಾಗೂ ಕೀರ್ತನೆಗಳ ಆಕಾರಾದಿ ಸೂಚಿ ಸಂಕಲನವಾಗಿವೆ.
©2023 Book Brahma Private Limited.