ಸಮಗ್ರ ನಾಟಕ

Author : ವಿ. ಸೀತಾರಾಮಯ್ಯ

₹ 120.00




Year of Publication: 1993
Published by: ವಿ ಸೀ ಸಂಪದ

Synopsys

ಈ ಕೃತಿಯು ಏಳು ನಾಟಕ ಗಳನ್ನು ಒಳಗೊಂಡಿದೆ. ಗ್ರೀಕ್ ರುದ್ರ ನಾಟಕದಿಂದ ಪ್ರೇರಿತರಾಗಿ ಶ್ರೀ ಯವರು ರಚಿಸಿದ ' ಅಶ್ವತ್ಥಾಮನ್ ' ಗೂ , ವಿ ಸೀ ಯವರ ಅಶ್ವತ್ತಾಮನಿಗೂ ಅಗಾಧ ಅಂತರ ವ್ಯಕ್ತಿತ್ವದಲ್ಲಿ ಇರುವುದು ಗೋಚರ ವಾಗುತ್ತದೆ. ಶ್ರೀ ಯವರ ಅಶ್ವತ್ಥಾಮನ್ ಗ್ರೀಕ್ ನಾಟಕಗಳಲ್ಲಿನ ವೀರೋಚಿತ ರೀತಿಯಲ್ಲಿ ತನ್ನ ಖಡ್ಗದ ಮೇಲೆ ತಾನೇ ಬಿದ್ದು ಸಾಯುತ್ತಾನೆ. ಆದರೆ ವಿ ಸೀ ಯವರು ಮೂಲ ಕಥೆಯಿಂದ ದೂರ ಸಾಗದೆ ಶಾಪಗ್ರಸ್ತ ಅಶ್ವತ್ಥಾಮನನ್ನು ಚಿತ್ರಿಸುತ್ತಾರೆ. ಅವರೇ ಹೇಳುವಂತೆ 'ಯಾವ ದೇವರ ದಯೆಯಿಂದಲಾದರೂ ಮಾನವನ ಮನೋ ದೌರ್ಬಲ್ಯಗಳು ಅವನನ್ನು ಮುಳುಗಿಸದಂತೆ , ಅವನ ಬದುಕು ಮಂಗಳಕ್ಕೆ ತಿರುಗಲಿ' ಎಂದು ಬಯಸುತ್ತಾ ' ದುರ್ಬಲ ಮನಸ್ಸು ಆತ್ಮ ನಾಶ ಮಾಡದಿರಲಿ ' ಎಂಬ ಆಶಯದಿಂದ ಈ ನಾಟಕ ರಚಿಸಿರುವೆ ಎಂದು ಅವರು ಹೇಳುತ್ತಾರೆ . 1933 ರಲ್ಲೇ ಈ ನಾಟಕದ ರಂಗ ಪ್ರದರ್ಶನ ಪ್ರಯತ್ನ ನಡೆಯಿತು. ಅಮೆರಿಕೆಯ ನೀಳ ನಾಗವೇಣಿ ನಾಟಕ ಪ್ರದರ್ಶನದ ಜವಾಬ್ದಾರಿ ಹೊತ್ತಿದ್ದರು. ಆದರೆ ಅಭ್ಯಾಸದ ಅಭಾವದಿಂದ ನಾಟಕ ಪ್ರದರ್ಶನ ಸೋಲು ಕಂಡಿತು. ಈ ಬಗ್ಗೆ ಬರೆಯುತ್ತಾ ಡಾಕ್ಟರ್ ಹೆಚ್ ಕೆ ರಂಗನಾಥ್ ಅವರು ' ಆಗ್ರಹ ಸತ್ವಯುತ ನಾಟಕ. ಶ್ರೋತೃವಿನ ಮನೋರಂಗದಲ್ಲಿ ಮಹತ್ತಾದ ದೃಶ್ಯಗಳನ್ನು ರಚಿಸಿ ಬೆಳೆಯಿಸಬಲ್ಲದು ' ಎಂದಿದ್ದಾರೆ.

About the Author

ವಿ. ಸೀತಾರಾಮಯ್ಯ
(02 October 1899 - 04 September 1983)

ಕವಿ, ವಿದ್ವಾಂಸ, ವಿಮರ್ಶಕ,  ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ 1899ರ ಅಕ್ಟೋಬರ್ 2ರಂದು ಜನಿಸಿದರು. ತಂದೆ ವೆಂಕಟರಾಮಯ್ಯ ಮತ್ತು ತಾಯಿ ದೊಡ್ಡ ವೆಂಕಮ್ಮ. ಬೆಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ಬಿ. ಎ. (1920), ಎಂ. ಎ. (1922) ಪದವಿ ಪಡೆದರು. ಮುಂಬಯಿಗೆ ತೆರಳಿ ಎಲ್. ಎಲ್.ಬಿ. ಪದವಿ ಗಳಿಸಿ ಮೈಸೂರಿಗೆ ಹಿಂತಿರುಗಿದರು. ಶಾರದಾ ವಿಲಾಸ ಕಾಲೇಜಿನಲ್ಲಿ ಉಪಾಧ್ಯಾಯ (1923) ರಾದರು. ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಸೆಂಟ್ರಲ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಚಿಕ್ಕಮಗಳೂರಿನ ...

READ MORE

Related Books