ಸಮಗ್ರ ಸಾಹಿತ್ಯ

Author : ಗೌರೀಶ ಕಾಯ್ಕಿಣಿ

Pages 390

₹ 150.00




Year of Publication: 1998
Published by: ಶ್ರೀ ರಾಘವೇಂದ್ರ ಪ್ರಕಾಶನ
Address: ಅಂಬಾರಕೊಡ್ಲ, ಆಂಕೋಲ- ೫೮೧೩೧೪

Synopsys

ಲೇಖಕ ಗೌರೀಶ ಕಾಯ್ಕಿಣಿ ಅವರ ರೂಪಕ ಹಾಗೂ ನಾಟಕ ಕೃತಿ ʼಸಮಗ್ರ ಸಾಹಿತ್ಯʼ, 7ನೇ ಸಂಪುಟ. ಪುಸ್ತಕದ ಬಗ್ಗೆ ಸಂಪಾದಕ ವಿಷ್ಣು ನಾಯ್ಕ ಅವರು, “ಪ್ರಸ್ತುತ 7ನೆಯ ಸಂಪುಟದಲ್ಲಿ ಡಾ. ಕಾಯ್ಕಿಣಿಯವರ ಒಟ್ಟಿಗೆ ೨೩ ರೂಪಕಗಳು ಮತ್ತು ನಾಟಕಗಳು ಸೇರಿವೆ. ಇವು ಕಳೆದ ಆರು ದಶಕಗಳ ಕಾಲಾವಧಿಯಲ್ಲಿ ಬರೆದವುಗಳು. ಇವುಗಳಲ್ಲಿ ಹೆಚ್ಚಿನವು ಬಾನುಲಿ ಪ್ರಸಾರಕ್ಕಾಗಿಯೇ ಬರೆದವುಗಳಾಗಿವೆ. ಆಯಾ ಅಕಾಶವಾಣಿ ಕೇಂದ್ರಗಳು ಬೇರೆಬೇರೆ ಸಂದರ್ಭಗಳ ಅಗತ್ಯಗಳಿಗನುಸಾರವಾಗಿ ಕೇಳಿ ಪಡೆದವುಗಳು. ಈ ಮೊದಲು ಪುಸ್ತಕರೂಪದಲ್ಲಿ ಪ್ರಕಟವಾದ 'ಒಲುಮೆಯ ಒಗಟು, ಕೌಂಚಿದ್ದು, 'ಕರ್ಣಾಮೃತ' ಹಾಗೂ ಆಕಾಶ ನಾಟಕಗಳು ಎಂಬ ನಾಲ್ಕು ಸಂಕಲನಗಳಲ್ಲಿಯ ಎಲ್ಲ ಕೃತಿಗಳು ಈ ಸಂಪುಟದಲ್ಲಿವೆ. ಅವುಗಳ ಹೊರತಾಗಿ ಅಪ್ರಕಟಿತ ರೂಪಕಗಳಾದ ನರಕ ಚತುರ್ದಶಿ, 'ಮಕರ ಸಂಕ್ರಮಣ, ದೀಪಾವಳಿ, ಮೀರಾ ಕೆ ಪ್ರಭು, ಅಂಬೆ, ಅಪ್ರಕಟಿತ ನಾಟಕಗಳಾದ 'ಅತ್ತೆಗೆ ಲತ್ತೆ ಹಾಗೂ ''ಚಿದಂಬರ ಸ್ವಾರಸ್ಯಗಳನ್ನೂ ಸೇರಿಸಿದ್ದೇನೆ. ನಮ್ಮ ಪುರಾಣ ಪ್ರಸಂಗಗಳಲ್ಲಿ ಸಿಗುವ ಅನೇಕ ಮಹತ್ವದ ಘಟನೆಗಳನ್ನು ಡಾ. ಕಾಯ್ಕಿಣಿಯವರು ತಮ್ಮ ಇಲ್ಲಿಯ ರೂಪಕಗಳ ಹಾಗೂ ನಾಟಕಗಳ ವಸ್ತುವಾಗಿ ಹೆಕ್ಕಿಕೊಂಡಿದ್ದಾರೆ, ಕತೆಯ ಹಂದರಕ್ಕೆ ಚ್ಯುತಿಯಾಗದ ರೀತಿಯಲ್ಲಿ ತನ್ನ ವೈಚಾರಿಕ ಬೀಜಗಳನ್ನೂ ಅಲ್ಲಲ್ಲಿ ಚೆಲ್ಲಿದ್ದಾರೆ. ಕಾಯ್ಕಿಣಿಯವರ ವಿನೋದ ಸ್ವಭಾವದ ನೇರ ಪರಿಚಯವಾಗುವುದು ವಿಶೇಷವಾಗಿ ಅವರ ರೂಪಕ ಮತ್ತು ನಾಟಕಗಳಲ್ಲಿಯೇ ಎನ್ನಬಹುದು, ಎಷ್ಟೊಂದು ಸೊಗನಿಸಿಂದ ಕನ್ನಡ ಪದಗಳನ್ನು ಶ್ಲೇಶೋಕ್ತಿಯಾಗಿ ಅವರು ದುಡಿಸಿಕೊಳ್ಳಬಲ್ಲರೆಂಬುದನ್ನೂ ಅವರ ಈ ಬಗೆಯ ಬರವಣಿಗೆಯಲ್ಲಿಯೇ ನಾವು ಹೆಚ್ಚಾಗಿ ಕಾಣಬಹುದು. ರಂಗಪ್ರಯೋಗದ ದೃಷ್ಟಿಯಿಂದಲೂ ಇದ್ದ ಯಶಸ್ವಿಯಾದ ಕೃತಿಗಳೆಂಬುದಕ್ಕೆ ಇಲ್ಲಿಯ ಹಲವು ರಚನೆಗಳು ಈಗಾಗಲೇ ಅನೇಕ ಪ್ರಯೋಗಗಳನ್ನು ಕಂಡಿರುವುದೇ ಸಾಕ್ಷಿ” ಎಂದು ಹೇಳಿದ್ದಾರೆ.

About the Author

ಗೌರೀಶ ಕಾಯ್ಕಿಣಿ
(12 September 1912 - 14 November 2002)

ಸಾಹಿತಿ ಗೌರೀಶ್‌ ಕಾಯ್ಕಿಣಿ ಅವರು 1912 ಸೆಪ್ಟೆಂಬರ್‌ 12ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದರು. ತಂದೆ ವಿಠಲರಾವ್ ತಹಸೀಲ್ದಾರರು, ತಾಯಿ ಸೀರಾಬಾಯಿ. ಗೌರೀಶ ಹುಟ್ಟಿದ ಮೂರು ತಿಂಗಳಲ್ಲಿ ತಂದೆ ತೀರಿಕೊಂಡರು.  ಗೋಕರ್ಣ, ಕುಮುಟಾ ಹಾಗೂ ಧಾರವಾಡದಲ್ಲಿ ಶಿಕ್ಷಣ ಪಡೆದು, ಮುಂದಿನ ಶಿಕ಼್ಣ ಕುಮಟಾ ಹಾಗೂ ಧಾರವಾಡದಲ್ಲಿ ಮುಂದುವರಿಯಿತು.  ಎಸ್.ಟಿ.ಸಿ. ಪರೀಕ್ಷೆಯಲ್ಲಿ, ಆ ಕಾಲದ ಮುಂಬಯಿ ಪ್ರಾಂತ್ಯಕ್ಕೆ ಪ್ರಥಮರಾಗಿ ತೇರ್ಗಡೆಯಾದರು. ಅವರು ಹಿಂದಿಯಲ್ಲಿ ವಿಶಾರದರೂ ಆಗಿದ್ದರು.  ಮಾಧ್ಯಮಿಕ ಶಾಲಾ ಅಧ್ಯಾಪಕರಾಗಿ ನಾಲ್ಕು ದಶಕಗಳ ಕಾಲ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಗೌರೀಶರು 1930ರಿಂದಲೇ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡರು. ’ಶಾಂಡಿಲ್ಯ ಪ್ರೇಮಸುಧಾ’ ಕನ್ನಡ ಹಾಗೂ ಮರಾಠಿ ...

READ MORE

Related Books