‘ಸಮಾಹಿತ’ ಪ್ರೊ. ಮಲ್ಲೇಪುರಂ ಬದುಕು ಕೃತಿಗಳ ಅನುಸಂಧಾನ

₹ 1000.00
Year of Publication: 2022
Published by: ಉದಯ ಪ್ರಕಾಶನ
Address: ರಾಜಾಜಿನಗರ ಬೆಂಗಳೂರು-560010
Phone: 08023389143

Synopsys

‘ಸಮಾಹಿತ’ ಪ್ರೊ. ಮಲ್ಲೇಪುರಂ ಬದುಕು ಕೃತಿಗಳ ಅನುಸಂಧಾನ ಕೃತಿಯು ವೂಡೇ ಪಿ. ಕೃಷ್ಣ ಅವರ ಸಂಪಾದಕತ್ವದ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಪ್ರೊ. ಮಲ್ಲೇಶ್ವರಂ ಅವರ ಸಾಹಿತ್ಯ ಸಂಪತ್ತು ವಿಶಾಲವಾದುದು. ಅವರು ವಿಮರ್ಶೆ, ಸಂಸ್ಕೃತಿ ಚಿಂತನೆ, ಸಂಘಸಂತ, ಅನುವಾದ, ಕೋಳರಚನೆ, ಸಂಸ್ಕೃತ ಸಾಹಿತ್ಯ, ಶಾಸ್ತ್ರವಿಮರ್ಶೆ ಮೂಲದ ವಿಷಯಗಳಲ್ಲಿ ಆಳವಾದ ಪರಿಣಯ ಉಳ್ಳವರು. ಆಯಾಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು, ಕಳೆದ ನಾಲ್ವತ್ತು ವರ್ಷಗಳಿಗೂ ಹೆಚ್ಚು ಕಾಲ ಅವರು ನಡೆಸಿರುವ ಸಾಹಿತ್ಯ-ಸಂಸ್ಕೃತಿ ಅಧ್ಯಯನ ಎಣೆಯಿಲ್ಲದ್ದು, ಕನ್ನಡ-ಸಂಸ್ಕೃತ, ಇತ್ತ ಪಾಲಿ-ಪ್ರಾಕೃತ ಭಾಷಾ-ಸಾಹಿತ್ಯಗಳಲ್ಲಿ ಅವರು ಮಾಡಿರುವ ಸಾಧನೆ ನಮಗೆ ವಿಸ್ಮಯವನ್ನು ತರುತ್ತದೆ. ಇವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾಡಿರುವ ಕೆಲಸ ಕಾರ್ಯಗಳೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿದ ರೀತಿ-ನೀತಿಗಳೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ ಮಾಡಿದ ಘನವಾದ ಕಾರ್ಯಗಳೂ ನಮ್ಮಲ್ಲಿ ವಿಸ್ಮಯ-ಸಂಭ್ರಮಗಳನ್ನು ಉಂಟುಮಾಡಿವೆ. ಒಂದು ಕಡೆ ಸಾಹಿತ್ಯ-ಶಾಸ್ತ್ರ-ಕೋಶರಚನೆ, ಮತ್ತೊಂದು ಕಡೆ ಸಮರ್ಥ ಆಡಳಿತ ನಿರ್ವಹಣೆ- ಇವೆರಡನ್ನು ಸಮದಂಡಿಯಾಗಿ ಪ್ರೊ ಮಲ್ಲೇಪುರಂ ಅವರು ನಿರ್ವಹಿಸಿದ್ದಾರೆ. ಇವೆಲ್ಲವೂ ಅಭಿನಂದನ ಸಮಿತಿಯ ಎಲ್ಲಾ ಸದಸ್ಯರಿಗೆ ಅಭಿಮಾನ ತರುವ ಸಂಗತಿ! ಈ ಮಹಾಸಂಪುಟವನ್ನು ಮೈತ್ರಿಸಂಪತ್ತು, ಕೃತಿಸಂಪತ್ತು, ಸಂದರ್ಶನ ಸಂಪತ್ತು ಕೊನೆಗೆ ದರ್ಶನ-ಶಾಸ್ತ್ರಸಂಪತ್ತು - ಹೀಗೆಂದು ವಿಭಾಗೀಕರಿಸಿಕೊಳ್ಳಲಾಗಿದೆ. ಆಯಾಯ ವಿಭಾಗಗಳಲ್ಲಿ ಲೇಖನಗಳನ್ನು ಸೂಕ್ತ ರೀತಿಯಿಂದ ಪೋಣಿಸಲಾಗಿದೆ. ಸಂಪುಟದ ಕೊನೆಗೆ ವಿಶಿಷ್ಟವಾದ ಅನುಬಂಧಗಳನ್ನೂ ನೀಡಲಾಗಿದೆ. ಪ್ರೊ. ಮಲ್ಲೇಪುರಂ ಅವರ ವ್ಯಕ್ತಿತ್ವ ಮತ್ತು ತತ್ತ್ವಕ್ಕೆ ಅನುಗುಣವಾಗಿ 'ಸಮಾಹಿತ' ಎಂಬ ಈ ಬೃಹತ್ ಸಂಪುಟವು ಸಿದ್ಧವಾಗಿದೆ. ಸಮಾಹಿತ ಎಂದರೆ: ಕೂಡಿಹಾಕಿದ, ಕ್ರಮಬದ್ಧವಾಗಿ ಜೋಡಿಸಿದ, ಸಮಾಧಾನವನ್ನು ಪಡೆದ ಎಂಬ ಅರ್ಥಗಳಿವೆ. ಈ ಅರ್ಥವು ಮಲ್ಲೇಪುರಂ ಅವರ ಜೀವನಶೈಲಿ ಆಕೃತಿ-ಆಶಯಗಳನ್ನು ಪ್ರತಿನಿಧಿಸುತ್ತದೆ.

Related Books