ಸಾಮಾಜಿಕ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಬಾ ಫುಲೆ

Author : ರವಿ ರಾ. ಅಂಚನ್

Pages 92

₹ 65.00




Year of Publication: 2012
Published by: ಅಭಿಮುಖಿ ಪ್ರಕಾಶನ
Address: #ಎಂ, 37/ಬಿ, 2ನೇ ಮಹಡಿ, 8ನೇ ಅಡ್ಡ ರಸ್ತೆ, ಲಕ್ಷ್ಮೀನಾರಾಯಣಪುರ, ಬೆಂಗಳೂರು- 560 021

Synopsys

'ಸಾಮಾಜಿಕ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಬಾ ಫುಲೆ’ ರವಿ ರಾ. ಅಂಚನ್ ಅವರು ರಚಿಸಿರುವ ವ್ಯಕ್ತಿಚಿತ್ರಣ ಸಂಕಲನವಾಗಿದೆ. ಮಹಾರಾಷ್ಟ್ರದ ಪುಣೆಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿ ಸಮಾಜಸುಧಾರಕರಾಗಿ ದುಡಿದವರು ಜ್ಯೋತಿಬಾ ಫುಲೆ. ಇವರ ಅಜ್ಜ, ತಂದೆ, ತಾಯಿ ಅಕ್ಷರಸ್ಥರಲ್ಲದಿದ್ದರೂ ವ್ಯವಹಾರಚತುರರಾಗಿದ್ದರು. ಅಂದಿನ ಕಾಲದಲ್ಲಿ ಬೇರೂರಿದ್ದ ಸಾಮಾಜಿಕ ಕಂಟಕಗಳೆಂದರೆ ಜಾತಿಪದ್ಧತಿ, ಪಾಳೆಯಗಾರಿ ವ್ಯವಸ್ಥೆ, ಬಾಲ್ಯವಿವಾಹ, ಸತಿ ಪದ್ಧತಿ. ಇವುಗಳನ್ನು ಬದಲಿಸಿ ಹೊಸ ಸಮಾಜ ವ್ಯವಸ್ಥೆ ಯನ್ನು ಕಟ್ಟುವುದು ಸುಲಭವೇನೂ ಆಗಿರಲಿಲ್ಲ. ಜನಜಾಗೃತಿ ಮೂಡಿಸುವುದು ಮೊದಲ ಕೆಲಸವಾಗಿತ್ತು. ಸಮಾಜಸೇವೆಗಾಗಿಯೇ ಸತ್ಯಶೋಧಕ ಸಮಾಜವೆಂಬ ಸಂಸ್ಥೆ ಕಟ್ಟಿದರು. ಪ್ರಗತಿಪರ ಕಾರ್ಯಕ್ರಮಗಳನ್ನು ಸುಧಾರಣೆಗಳನ್ನು ತರಲು ಶ್ರಮಿಸಿದರು. ಒಂದೆಡೆ ಬಂಡವಾಳಶಾಹಿ - ಇನ್ನೊಂದೆಡೆ ಪುರೋಹಿತಶಾಹಿ ವ್ಯವಸ್ಥೆ ಇವೆರಡನ್ನೂ ಎದುರು ಹಾಕಿಕೊಂಡು ಕ್ರಾಂತಿಕಾರಿ ಹೆಜ್ಜೆಗಳನ್ನು ದಿಟ್ಟವಾಗಿಯೇ ಇಟ್ಟರು. ಅನೇಕ ಅಡೆತಡೆಗಳು, ಸಂಪ್ರದಾಯವಾದಿಗಳ ಕಿರುಕುಳ ಸಾಕಷ್ಟಿದ್ದು ಸಹಿಸಲಸಾಧ್ಯವಾಗಿತ್ತು. ಇವರ ಯಶಸ್ಸಿನ ಮಾರ್ಗದಲ್ಲಿ ಒತ್ತಾಸೆಯಾಗಿ ನಿಂತವರೆಂದರೆ ಇವರ ಪಾಲಿತ ಮಾತೆ ಸುಗುಣಾಬಾಯಿ ಹಾಗೂ ಸಹಧರ್ಮಿಣಿ ಸಾವಿತ್ರಿ ಬಾಯಿ, ಸಮಾನತೆಗಾಗಿ ಹೋರಾಟ, ಸ್ತ್ರೀ ಶಿಕ್ಷಣ, ದಲಿತರು - ಕಾರ್ಮಿಕರುಗಳಿಗೆ ಅವರವರ ಸ್ಥಿತಿಗಳ ಬಗ್ಗೆ ಅರಿವು ಮೂಡಿಸುವುದು ಇವೆಲ್ಲ ಮಹಾತ್ಮ ಫುಲೆ ಕೈಗೊಂಡ ಸುಧಾರಣಾ ಕ್ರಮಗಳು. ಈ ಪುಸ್ತಕ ಅವರ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿಸುತ್ತದೆ.

About the Author

ರವಿ ರಾ. ಅಂಚನ್
(02 September 1954 - 28 October 2017)

ತಮ್ಮ ವೈಚಾರಿಕ ಬರೆಹಗಳಿಂದ ಹೆಸರುವಾಸಿಯಾಗಿದ್ದ ಸಾಹಿತಿ-ವಾಗ್ಮಿ ರವಿ ರಾ.ಅಂಚನ್ ಅವರು ಮೂಲತಃ ಉಡುಪಿ ಜಿಲ್ಲೆಯ ಕಾಪುಪಾದೂರು ಮಡಂತೋಟದವರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮುಂಬೈನ ಅಂಧೇರಿಯ ನಿವಾಸಿಯಾಗಿದ್ದರು. ರಿಲಾಯನ್ಸ್ ಸಂಸ್ಥೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ಭಾರತ್ ಬ್ಯಾಂಕ್‌ನ ಮಾಜಿ ನಿರ್ದೇಶಕ, ಕರ್ನಾಟಕ ಸಂಘ ಮುಂಬಯಿ, ಗೊರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದರು. ವೈಚಾರಿಕ ಚಿಂತನೆಗಳಿಂದ ಕನ್ನಡ ನಾಡಿನ ಸಾಹಿತಿಗಳನ್ನು ಚಿಂತನೆಗೆ ಹಚ್ಚಿವಂತೆ ಮಾಡುವ ಲೇಖಕರಾಗಿದ್ದರು. ’ಯಕ್ಷರಂಗ’ ಅವರ ಮೊದಲ ಕೃತಿ. ಅವರು ಸುಮಾರು 21ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಮಾಯಂದಲ್, ಕಲ್ಲುರ್ಟಿ ಅವರ ಇಂಗ್ಲಿಷ್ ಕೃತಿಗಳು. ಇವರ ಒಂದು ಕೃತಿ ಮರಾಠಿ ಅನುವಾದ ...

READ MORE

Related Books