ಸಮಾನತೆ ತಂದ ಸರ್ದಾರ

Author : ಧರೇಶ ಗೌಡರ

Pages 80

₹ 80.00




Year of Publication: 2020
Published by: ಹೊನ್ನ ಕುಸುಮ ಪ್ರಕಾಶನ
Address: ಪ್ರತೀಕ್ಷಾ ನಿಲಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಹತ್ತಿರ ಹುನಗುಂದ, ಬಾಗಲಕೋಟೆ ಜಿಲ್ಲೆ - 587118
Phone: 9663027091

Synopsys

ಲೇಖಕ ಧರೇಶ ಗೌಡರ ನಾಟಕ ಕೃತಿ ’ಸಮಾನತೆ ತಂದ ಸರ್ದಾರ’ ನಾಟಕ. ಕೃತಿಗೆ ಮುನ್ನುಡಿ ಬರೆದ ಸಾಹಿತಿ ಎಂ.ಡಿ. ಚಿತ್ತರಗಿ, ”ಒಟ್ಟಾರೆಯಾಗಿ ಅಸಮತೋಲನದ ಕವಲುದಾರಿಗಳನ್ನೆಲ್ಲ ಸಮಾನತೆಯ ರಾಜಮಾರ್ಗದಲ್ಲಿ ಬಂಧಿಸಿ ಕಾಲವನ್ನೇ ಬದಲಿಸುವ ಪಣತೊಟ್ಟ ನಾಟಕಕಾರರು ಬಲಾಡ್ಯತೆಯ ಗಾಜಿನ ಅರಮನೆಯಲ್ಲಿರುವವರ ಪೊಳ್ಳುಪೊರೆಗಳನ್ನೆಲ್ಲಾ ಕಳಚಿ, ಪಶ್ಚಾತ್ತಾಪಕ್ಕೆ ಕ್ಷಮಾಶೀಲತೆಯನ್ನು ತೋರಿ ಸಾಮಾಜಿಕ ಪರಿವರ್ತನೆಗೆ ಅಕ್ಕರದ ತೋರಣ ಕಟ್ಟಿದ್ದಾರೆ. ಮನದ ಮೂಲೆಮೂಲೆಯನ್ನೆಲ್ಲಾ ಕಬಳಿಸಿ, ನೆಲೆಯೂರಿ. ಕಾಲಕಾಲಕ್ಕೆ ತುಕ್ಕಿಡಿದ ನಾಲಿಗೆಯಿಂದ ಆರ್ಭಟಿಸುತ್ತಿರುವ ಜಾತಿಯ ಬುಡವನ್ನೇ ಕಿತ್ತಿ, ಗಂಡು-ಹೆಣ್ಣುಗಳೆಂಬ ಎರಡೇ ಜಾತಿಗಳೆಂದು ಸುಗ್ರೀವಾಜ್ಞೆ ಹೊರಡಿಸುತ್ತಾ ಗಾಢಾಂಧಕಾರದಲ್ಲಿರುವ ಮಾನವತೆ ಹಾಗೂ ಮಾನವೀಯತೆಗೆ ಪೂರ್ಣಿಮೆಯ ಬೆಳದಿಂಗಳನ್ನು ಗಲ್ಲಿಗಲ್ಲಿಗೆ ಚೆಲ್ಲ ಬಯಸಿದ್ದಾರೆ’ ಎಂದು ಪ್ರಶಂಸಿದ್ದಾರೆ.

About the Author

ಧರೇಶ ಗೌಡರ

ಲೇಖಕ ಧರೇಶ ಗೌಡರ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮಲದಿನ್ನಿ ಗ್ರಾಮದವರು. ಹುನಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹುನಗುಂದದಲ್ಲಿ ಬಿ.ಎ ವಿದ್ಯಾರ್ಥಿ. ಇವರ ಚೊಚ್ಚಲ ಕೃತಿ ’ಸಮಾನತೆ ತಂದ ಸರ್ದಾರ’ (ನಾಟಕ). ...

READ MORE

Related Books