ಸಮನ್ವಯ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 399

₹ 400.00




Year of Publication: 2021
Published by: ಅಭಿನವ ಪ್ರಕಾಶನ
Address: # 17, 18-2, 1ನೇ ಮುಖ್ಯರಸ್ತೆ, 2ನೇ ಬ್ಲಾಕ್, ಮಾರೇನಹಳ್ಳಿ, ಬಿಡಿಎ ಬಡಾವಣೆ, ವಿಜಯನಗರ, ಬೆಂಗಳೂರು-560040

Synopsys

ಹಿರಿಯ ಸಾಹಿತ್ಯಾಸಕ್ತ, ಉದ್ಯಮಿ ವೈ.ಎನ್. ಗಂಗಾಧರ ಶೆಟ್ಟಿ ಅವರ ಅಭಿನಂದನಾ ಗ್ರಂಥ-ಸಮನ್ವಯ. ಅಭಿನಂದನೆ ಅಂಗವಾಗಿ ಭಾರತೀಯ ವಾಙ್ಮಯ ಪರಂಪರೆ: ಒಂದು ಪ್ರವೇಶಿಕೆ’ ಯಾಗಿ ಈ ಗ್ರಂಥವನ್ನು ಪ್ರೊ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ. ಧರ್ಮದ ಚೌಕಟ್ಟಿನಲ್ಲಿ ಉದ್ಯಮವನ್ನು ಕೈಗೊಂಡ ವಿರಳರ ಪೈಕಿ ವಿರಳರು ವೈ.ಎನ್. ಗಂಗಾಧರ ಶೆಟ್ಟಿ ಗೋಕಾಕ್ ಟ್ರಸ್ಟ್ ಅಧ್ಯಕ್ಷರೂ ಆದ ಅವರು ಸಾಹಿತ್ಯಾಸಕ್ತರು. ಇಂಥವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಅವರ ಆಸಕ್ತಿಕರ ವಿಷಯಗಳಾದ ಭಾರತೀಯ ವಾಙ್ಮಯ ಪರಂಪರೆ ಅಂದರೆ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಸಂವಿಧಾನ ಇತ್ಯಾದಿ ಕುರಿತ ಲೇಖನಗಳನ್ನು ಕೃತಿಯಲ್ಲಿ ಸಂಪಾದಿಸಲಾಗಿದೆ. ಇಲ್ಲಿಯ ಲೇಖನಗಳು ತಮ್ಮ ವಿಷಯ ವಸ್ತುವಿನ ಗಂಭೀರತೆ, ಭಾಷೆಯ ಪ್ರಬುದ್ಧತೆ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳ ದೃಷ್ಟಿಯಿಂದ ಹಾಗೂ ಸಂಶೋಧನೆಗೂ ಉತ್ತಮ ಆಕರ ಗ್ರಂಥವಾಗಿದೆ.

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Related Books