ಸಮರಸದ ದಾಂಪತ್ಯ

Author : ನಡಹಳ್ಳಿ ವಸಂತ್‌

Pages 264

₹ 250.00




Year of Publication: 2022
Published by: ಸಿರಿಗನ್ನಡ ಪುಸ್ತಕ ಮನೆ
Address: ಶಿವಮೊಗ್ಗ
Phone: 9341068242

Synopsys

ನಡಹಳ್ಳಿ ವಸಂತ್‌ ಅವರ ಲೇಖನಗಳ ಸಂಕಲನ ಸಮರಸದ ದಾಂಪತ್ಯ. 2020ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ ಇದು. ಬದುಕಿನ ಎಲ್ಲಾ ಅಂಗಗಳಂತೆ ಇವತ್ತಿನ ದಾಂಪತ್ಯ ಜೀವನವೂ ಸಂಕೀರ್ಣವಾಗಿದೆ. ಕಳೆದ ಶತಮಾನದವರೆಗೆ ಧಾರ್ಮಿಕ ಕಟ್ಟುಪಾಡುಗಳು, ವಿಚ್ಛೇದಿತರು ಎಂಬ ಹಣೆಪಟ್ಟಿಗೆ ಅಂಟಿಕೊಳ್ಳುತ್ತಿದ್ದ ಸಾಮಾಜಿಕ ಕಳಂಕದ ಭೀತಿ, ಸ್ತ್ರೀಪುರುಷರಲ್ಲಿನ ಆರ್ಥಿಕ ಅಸಮಾನತೆ, ಪುರುಷರ ಮೇಲುಗೈಯನ್ನು ಒಪ್ಪಿಕೊಂಡಿದ್ದ ಸ್ತ್ರೀಯರ ಮನೋಧರ್ಮ ಮುಂತಾದ ಅಂಶಗಳು ವಿವಾಹಗಳನ್ನು ಹಿಡಿದು ನಿಲ್ಲಿಸುತ್ತಿದ್ದವು. ಆಗ ವಿಚ್ಛೇದನಗಳಾಗುತ್ತಿರಲಿಲ್ಲ ಎನ್ನುವುದರ ಆಧಾರದ ಮೇಲೆ ದಂಪತಿಗಳು ಪ್ರೀತಿ ಆತ್ಮೀಯತೆಯಿಂದ ಬದುಕುತ್ತಿದ್ದರು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅಹಿತಕರ ಸಂಬಂಧಗಳಲ್ಲಿಯೂ ಅನಿವಾರ್ಯವಾಗಿ ಸಂಗಾತಿಗಳು ಒಂದು ಮಟ್ಟದ ಹೊಂದಾಣಿಕೆ (ವರ್ಕಿಂಗ್ ರಿಲೇಷನ್‌ಶಿಪ್) ರೂಪಿಸಿಕೊಳ್ಳುತ್ತಿದ್ದರು. ಇವತ್ತು ಪೂರ್ಣ ಧಾರ್ಮಿಕ ವಿಧಿವಿಧಾನಗಳಲ್ಲಿ ಮದುವೆಯಾದವರೂ ವಿಚ್ಛೇದನ ಅನಿವಾರ್ಯವಾದಾಗ ಧಾರ್ಮಿಕ ನಂಬಿಕೆಗಳನ್ನು ದೂರ ತಳ್ಳುತ್ತಾರೆ. ಪಟ್ಟಣಗಳಲ್ಲಿ ಬದುಕುತ್ತಿರುವವರಿಗೆ ಸಾಮಾಜಿಕ ಕಳಂಕ ಅಷ್ಟಾಗಿ ಕಾಡುವುದಿಲ್ಲ. ಪ್ರೀತಿ ಪ್ರೇಮ, ಕುಟುಂಬ ಜೀವನಕ್ಕಾಗಿ ತ್ಯಾಗ ಹೊಂದಾಣಿಕೆ, ಕುಂಕುಮಭಾಗ್ಯ, ತಾಳಿಭಾಗ್ಯ ಮುಂತಾದವುಗಳು ಟಿವಿ ಧಾರವಾಹಿಗಳಿಗೆ ಸೀಮಿತಗೊಂಡಿವೆ! ಅಂದರೆ ವೈವಾಹಿಕ ವ್ಯವಸ್ಥೆಯ ತಳಹದಿಗಳು ಎಂದು ನಾವೆಲ್ಲಾ ಅಂದುಕೊಂಡಿದ್ದ ಅಂಶಗಳು 21ನೇ ಶತಮಾನದಲ್ಲಿ ಅಪ್ರಸ್ತುತವಾಗಿದೆ ಅನಿಸುವುದಿಲ್ಲವೇ? ಹಳೆಯ ತಲೆಮಾರಿನ ನಿರಾಶಾವಾದಿಗಳು ಹೇಳುವಂತೆ ವೈವಾಹಿಕ ವ್ಯವಸ್ಥೆಯೇ ಕುಸಿದುಬೀಳುತ್ತಿದೆಯೇ? ಇವೆಲ್ಲವನ್ನೂ ಕೇವಲ ತಲೆಮಾರಿನ ಅಂತರ ಎಂಬ ಮಾಮೂಲಿ ಸಬೂಬಿನಿಂದ ಕಡೆಗಣಿಸುವುದು ಸಾಧ್ಯವೇ? ಅಥವಾ ಎಲ್ಲದಕ್ಕೂ ಭಾರತೀಯ ಸಂಸ್ಕೃತಿಯ ತಿರಸ್ಕಾರ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ, ಇಂದಿನ ಯುವಜನರ ಬೇಜವಾಬ್ದಾರಿ, ಸಿನಿಮಾ ಅಂತರ್ಜಾಲಗಳ ಪ್ರಭಾವ, ಸ್ತ್ರೀಯರಿಗೆ ಸಿಗುತ್ತಿರುವ ಆರ್ಥಿಕ ಸ್ವಾತಂತ್ರ ಮತ್ತು ಸಮಾನತೆ-ಮುಂತಾದ ಸಾರಾಸಗಟಾದ ಕಾರಣಗಳನ್ನು ಹುಡುಕಿಕೊಂಡು ಎಲ್ಲರ ಮೇಲೂ ಗೂಬೆ ಕೂರಿಸುವುದು ಪರಿಹಾರವೇ? ಜಾಗತೀಕರಣಗೊಂಡ 21ನೇ ಶತಮಾನದಲ್ಲಿಯೂ ನಾವು ಹಿಂದಿನ ಶತಮಾನಗಳ ನೀತಿನಿಯಮ ಕಲ್ಪನೆ ಆದರ್ಶಗಳನ್ನಿಟ್ಟುಕೊಂಡು ವೈವಾಹಿಕ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸುತ್ತಿದ್ದೇವೆಯೇ? ದಾಂಪತ್ಯ ಚಿಕಿತ್ಸೆಯಲ್ಲಿ ಸಾಕಷ್ಟು ಪರಿಶ್ರಮ ಮತ್ತು ತರಬೇತಿ ಪಡೆದಿರುವ ಲೇಖಕರು ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಲೇಖನ ಅಂಕಣಗಳನ್ನು ಬರೆದಿದ್ದಾರೆ. ಕಳೆದ 10 ವರ್ಷಗಳಿಂದ ಶಿವಮೊಗ್ಗದಲ್ಲಿ ಮನೋಚಿಕಿತ್ಸಕರಾಗಿ ವೃತ್ತಿ ನಡೆಸುತ್ತಿದಾರೆ. ತಮ್ಮ ಅಧ್ಯಯನ ಮತ್ತು ವೃತ್ತಿಯ ಅನುಭವಗಳನ್ನು ಮೇಳೈಸಿ ಈ ಕೃತಿಯನ್ನು ರಚಿಸಿದ್ದಾರೆ. ಎಲ್ಲಾ ವಯಸ್ಸಿನ ದಂಪತಿಗಳಿಗೂ ಉಪಯುಕ್ತವಾಗಬಲ್ಲ ಮತ್ತು ವಧುವರರಿಗೆ ಉಡುಗೊರೆಯಾಗಿ ನೀಡಲು ಸೂಕ್ತವಾದ ಪುಸ್ತಕವಿದು. ಮೊದಲ ಮುದ್ರಣ 2020, ಎರಡನೆ ಮುದ್ರಣ 2022.

About the Author

ನಡಹಳ್ಳಿ ವಸಂತ್‌

ನಡಹಳ್ಳಿ ವಸಂತ್‌ ಅವರು 04 04 1958ರಂದು ಸೊರಬದಲ್ಲಿ ಜನಿಸಿದರು. ಬಿಬಿಎಮ್‌ ಹಾಗೂ ಆಪ್ತಸಮಾಲೋಚನೆ ಮತ್ತು ಮನೋಚಿಕಿತ್ಸವಿಷಯದಲ್ಲಿ ಎಂ. ಎಸ್‌ ಪೂರೈಸಿದರು. ವೃತ್ತಿಯಲ್ಲಿ ಮನೋಚಿಕಿತ್ಸೆ ಮತ್ತು ಆಪ್ತಸಮಾಲೋಚಕಿಯಾಗಿರುವ ಇವರು ದಾಂಪತ್ಯಚಿಕಿತ್ಸೆ ಮತ್ತು ಲೈಂಗಿಕ ಮನೋಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದವರು. ಕೃತಿಗಳು: ಏ ಬೀಳ್ತೀಯಾ ಹುಷಾರು! (ಪೋಷಕರ ಮಕ್ಕಳ ಸಂಬಂಧದ ಕುರಿತಾಗಿ, ಭೂಮಿ ಬುಕ್ಸ್‌ ಬೆಂಗಳೂರು), ನೀವು ನಿಜಕ್ಕೂ ಸುಖವಾಗಿದ್ದೀರಾ? (ವಿವಿಧ ಪತ್ರಿಕೆಗಳಲ್ಲಿ ಬರೆದ 39 ಲೇಖನಗಳ ಸಂಗ್ರಹ. ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ.), ನಮ್ಮೊಳಗಿನ ಭಾವಪ್ರಪಂಚ (ನಮ್ಮ ಅಂತರಂಗದ ಜಗತ್ತಿನ ಸೂಕ್ಷ್ಮ ಪರಿಚಯ., ಕರ್ನಾಟಕ ಸಂಘ ಶಿವಮೊಗ್ಗ ಇವರ ...

READ MORE

Related Books