ಸಮರೋದ್ಯೋಗ ಶ್ರೀಕೃಷ್ಣ ಸಂಧಾನ

Author : ಕೆ.ಎಸ್‍. ನಾರಾಯಣಾಚಾರ್ಯ

Pages 568

₹ 523.00

Buy Now


Year of Publication: 2018
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪೀಕರ್ ಬೀದಿ, ಹುಬ್ಬಳ್ಳಿ- 580020
Phone: 08362367676

Synopsys

ಧಾರ್ಮಿಕ ಚಿಂತಕ ಪ್ರೊ. ಕೆ.ಎಸ್. ನಾರಾಯಣಾಚಾರ್ಯ ಅವರ ಕೃತಿ-ಸಮರೋದ್ಯೋಗ: ಶ್ರೀಕೃಷ್ಣ ಸಂಧಾನ. ಮಹಾಭಾರತದಲ್ಲಿ ಯುದ್ಧಸಿದ್ಧತೆಯ ಕುರಿತು ವಿವರಿಸಿದ ವರ್ಣನೆಯ ಚಿತ್ರಣವಿದೆ. ಯುದ್ಧವನ್ನು ತಪ್ಪಿಸಲು ಶ್ರೀಕೃಷ್ಣನು ಸಾಧ್ಯವಿದ್ದ ಎಲ್ಲ ಸಂಧಾನ ಮಾರ್ಗಗಳನ್ನು ತೋರುತ್ತಾನೆ. ಆದರೆ, ಆ ಎಲ್ಲ ಮಾರ್ಗಗಳು ವಿಫಲವಾಗುತ್ತಿದ್ದಂತೆ ಸಮರ ಆರಂಭವಾಗುವ ಅನಿವಾರ್ಯತೆ ದಟ್ಟವಾಗುತ್ತದೆ. ಈ ಚಿತ್ರಣ ನೀಡುವ ಕಥಾ ಭಾಗವು ಈ ಕೃತಿ ಒಳಗೊಂಡಿದೆ.

About the Author

ಕೆ.ಎಸ್‍. ನಾರಾಯಣಾಚಾರ್ಯ
(31 October 1933 - 26 November 2021)

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ  (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ...

READ MORE

Related Books