ಸಮಯದ ನಿರ್ವಹಣೆ

Author : ಶಿವಾನಂದ ಬೇಕಲ್

Pages 99

₹ 150.00




Year of Publication: 2019
Published by: ಮಂಜುಳ ಪಬ್ಲಿಷಿಂಗ್ ಹೌಸ್
Address: # 2ನೇ ಮಹಡಿ, 42, ಉಷಾ ಪ್ರೀತ್ ಸಂಕೀರ್ಣ, ಮಾಳವೀಯ ನಗರ, ಭೂಪಾಲ, ಮಧ್ಯಪ್ರದೇಶ-462003
Phone: +91 755 424 03

Synopsys

ಖ್ಯಾತ ಆಂಗ್ಲ ಲೇಖಕ ಬ್ರಿಯಾನ್ ಟ್ರೇಸಿ ಅವರ ಯಶಸ್ಸಿನ ಗ್ರಂಥಾಲಯ ಸರಣಿ ಮಾಲೆಯ ‘ಟೈಂ ಮ್ಯಾನೇಜ್ ಮೆಂಟ್ ’ ಕೃತಿಯನ್ನು ಲೇಖಕ ಶಿವಾನಂದ ಬೇಕಲ್ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಸಮಯದ ನಿರ್ವಹಣೆ. ಸಮಯ ಸರಿದು ಹೋಗುತ್ತದೆ. ಅದನ್ನು ಹಿಡಿದು ನಿಲ್ಲಿಸಲಾಗದು. ಸರಿದು ಹೋದ ಸಮಯ ಮತ್ತೇ ಬಾರದು. ಅದರ ಸದುಪಯೋಗ ಆಗಬೇಕು. ತಪ್ಪಿದರೆ, ಜೀವನದಲ್ಲಿ ಬಹುದೊಡ್ಡ ದುರಂತಕ್ಕೆ ಆಹ್ವಾನ ನೀಡಿದಂತೆ. ಸಮಯ ಹಾಗೂ ಅದರ ನಿರ್ವಹಣೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕೃತಿ ಇದು.

About the Author

ಶಿವಾನಂದ ಬೇಕಲ್
(21 February 1951)

ಡಾ. ಶಿವಾನಂದ ಬೇಕಲ್ ಅವರು ಹುಟ್ಟಿದ್ದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ನಲ್ಲಿ. ತಂದೆ- ಬೇಕಲ್  ಸಾಂತನಾಯಕರು, ತಾಯಿ- ಲಲಿತಾಬಾಯಿ. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ . ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತು ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. 16ನೇ ವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೆ 1968ರಲ್ಲಿ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿತು. ಇವರ ಲೇಖನ ಕೃಷಿ ಮಂಗಳೂರಿನ ನವಭಾರತ, ಕಿನ್ನಗೋಳಿಯ ಯುಗಪುರುಷ ನಂತರ  ಸುಧಾ, ತರಂಗ, ಪ್ರಜಾವಾಣಿ, ...

READ MORE

Related Books