ಸಂಪಾದಕರನ್ನೇ ಕೇಳಿ?

Author : ವಿಶ್ವೇಶ್ವರ ಭಟ್

Pages 146

₹ 113.00
Year of Publication: 2020
Published by: ಸಪ್ನ ಬುಕ್ ಹೌಸ್
Address: # 3ನೇ ಮುಖ್ಯರಸ್ತೆ, ಬೆಂಗಳೂರು-560009
Phone: 08040114455

Synopsys

ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಕೃತಿ-ಸಂಪಾದಕರನ್ನೇ ಕೇಳಿ?. ಸಾಮಾನ್ಯವಾಗಿ ತಮ್ಮ ಪ್ರದೇಶದ ಯಾವುದೇ ಸಮಸ್ಯೆಗಳನ್ನು ಕೇಳಲು ಇಲ್ಲವೇ ಕಳುಹಿಸಿದ ಲೇಖನ ಯಾವಾಗ ಪ್ರಕಟವಾಗುವುದೆಂದು ಇಲ್ಲವೇ ಸುದ್ದಿ ಪ್ರಕಟಣೆಯಲ್ಲಿ ತಾರತಮ್ಯ ಮಾಡಿರುವ ಬಗ್ಗೆ ಹೀಗೆ ಅಸಂಖ್ಯ ಪ್ರಶ್ನೆಗಳಿದ್ದು, ಅವುಗಳ ಕುರಿತು ಪತ್ರಿಕೆಯಲ್ಲಿ ಯಾರನ್ನು ಕೇಳಬೇಕು? ಎಂಬುದು  ಪತ್ರಿಕಾ ಓದುಗರಿಗೆ ಸಮಸ್ಯೆಯಾಗಿರುತ್ತದೆ. ಸಂಪಾದಕರನ್ನೇ ಕೇಳಬೇಕೆಂದರೆ ಅವರು ಸದಾ ಮೀಟಿಂಗ್ ನಲ್ಲಿದ್ದಾರೆ. ಅವರೀಗ ಊರಲ್ಲಿ ಇಲ್ಲ. ಅಥವಾ ಬೇರೆ ಯಾರೋ ದೊಡ್ಡವರನ್ನು ಸಂದರ್ಶನ ಮಾಡಲು ಹೋಗಿದ್ದಾರೆ ಇಲ್ಲವೇ ಇಂತಹ ಸಂಗತಿಗಳನ್ನು ಸಂಪಾದಕರ ಮುಂದೆಯೇ ನೀವು ಹೇಳಬೇಕು. ಅದು ನಮ್ಮ ಹುದ್ದೆಗೆ ಮೀರಿದ್ದು ಎಂದೂ ಪ್ರತಿಕ್ರಿಯೆಗಳು ಸಾಮಾನ್ಯವಾಗಿರುತ್ತವೆ. ಹೀಗಾಗಿ, ಜನಸಾಮಾನ್ಯ ಓದುಗರಿಗೆ ಸಂಪಾದಕರು ಸಿಗುವುದೇ ಕಷ್ಟ ಎಂಬ ಭಾವನೆ ಬಲವಾಗಿ ಓದುಗರಲ್ಲಿ ಬೇರೂರಿರುತ್ತದೆ. ಇಂತಹ ಸಂಗತಿಗಳ ಕುರಿತು ಪ್ರಸ್ತಾಪಿಸುವ ಈ ಕೃತಿಯಲ್ಲಿ ಲೇಖಕರು ‘ನೇರವಾಗಿ ಸಂಪಾದಕರನ್ನೇ ಕೇಳಿ’ ಎಂದೂ ಸಲಹೆ ನೀಡುತ್ತಾರೆ. ಪತ್ರಿಕೆಯ ಸಿಬ್ಬಂದಿ ಹೊಣೆಗಾರಿಕೆ, ಯಾವ ಯಾವ ಸಮಸ್ಯೆಗಳಿಗೆ ಸಂಪಾದಕರು ಉತ್ತರಿಸುತ್ತಾರೆ ಇತ್ಯಾದಿ ವಿಷಯಗಳ ಬಗ್ಗೆ ಓದುಗರಿಗೆ ಮಾಹಿತಿ ನೀಡುವ ಕೃತಿ ಇದು. ಲೇಖಕರು ಪತ್ರಕರ್ತರಿದ್ದು, ವಿವಿಧ ಪತ್ರಿಕೆಯಲ್ಲಿ ಮಹತ್ವದ ಸ್ಥಾನ ನಿರ್ವಹಿಸಿದ್ದರಿಂದ ಪ್ರಸ್ತಾಪಿತ ಇಲ್ಲಿಯ ವಿಷಯಗಳು ಅಧ್ಯಯನ ದೃಷ್ಟಿಯಿಂದ ಯೋಗ್ಯವಾಗಿವೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books