ಸಂರಚನಾವಾದ

Author : ಕಿಕ್ಕೇರಿ ನಾರಾಯಣ

Pages 112

₹ 100.00




Year of Publication: 2018
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಹಿರಿಯ ಭಾಷಾ ವಿದ್ವಾಂಸರಾದ ಕಿಕ್ಕೇರಿ ನಾರಾಯಣ (1949-2017) ಅವರು ಬರೆದ ಮೌಲಿಕ ಬರಹಗಳನ್ನು, ಅವರ ಮರಣಾನಂತರ ಸಂಕಲಿಸಿ ಈ ಪುಸ್ತಕದಲ್ಲಿ ನೀಡಲಾಗಿದೆ. ಶುದ್ಧ ಭಾಷಾಶಾಸ್ತ್ರದ ಕುರಿತಾದ ಮೊದಲ ಲೇಖನದ ನಂತರ, ಇಲ್ಲಿರುವ ಬರಹಗಳು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕೃತಿಗಳ ವಿಶ್ಲೇಷಣೆಯನ್ನು ಒದಗಿಸುತ್ತವೆ. ಕುವೆಂಪು ಅವರ ವೈಚಾರಿಕತೆ, ಚದುರಂಗರ ಉಯ್ಯಾಲೆ - ತಂತ್ರ ನಿರ್ವಹಣೆ, ಶ್ರೀಕೃಷ್ಣ ಆಲನಹಳ್ಳಿಯವರ 'ಭುಜಂಗಯ್ಯನವರ ದಶಾವತಾರಗಳು' ಕಾದಂಬರಿ, ಕಂಬಾರರ ಭಾಷೆ ಮತ್ತು ದೇವನೂರು ಮಹಾದೇವರ 'ಕುಸುಮಬಾಲೆ' ಕಾದಂಬರಿಯ ಕುರಿತು ಇರುವ ಇಲ್ಲಿನ ಬರಹಗಳು ಕನ್ನಡ ಗದ್ಯದ ಪ್ರಮುಖ ಕೃತಿಗಳ ಪಾಂಡಿತ್ಯಪೂರ್ಣ ಪರಿಚಯವನ್ನು ಒದಗಿಸುತ್ತವೆ.

ಭಾಷೆ ಮತ್ತು ಸಾಹಿತ್ಯದಲ್ಲಿ ಪದೇ ಪದೇ ಕೇಳಿ ಬರುವ ಹೆಸರು ಸಂರಚನಾವಾದಕ್ಕೆ ಸಂಬಂಧಿಸಿದ್ದು. ಇದರ ಬಗ್ಗೆ ಮುಖ್ಯವಾಗಿ ಪ್ರಸ್ತಾಪಿಸುವ ವಿಮರ್ಶಾ ಸಂಕಲನ ಕಿಕ್ಕೇರಿ ನಾರಾಯಣ ಅವರು ಬರೆದಿರುವ ’ಸಂರಚನಾವಾದ’ ಕೃತಿ. 

ಈ ಕೃತಿಯ ಮಹತ್ವದ ವಿಚಾರವೊಂದು ಹೀಗಿದೆ: ಪಠ್ಯದ ಅರ್ಥ ಸೃಷ್ಟಿಯಾಗುವುದು 'ಕೃತಿಕಾರನ ಅರ್ಥ' ಎಂಬು ಒಂದು ಮಾತು ಇದ್ದರೆ,  “ಓದುಗನ ಅರ್ಥ' ಎಂಬ ಇನ್ನೊಂದು ಮಾತಿದೆ . ಪಠ್ಯಕ್ಕೆ ಒಂದೇ ಅರ್ಥ ಅಥವಾ ನಿರ್ದಿಷ್ಟವಾದ ಇದೇ  ಅರ್ಥ ಎಂಬುದು ಇಲ್ಲ. ಪಠ್ಯಕ್ಕೆ ನಾನಾ ಅರ್ಥಗಳು ಇರುತ್ತವೆ. ಅಂದರೆ ಪಠ್ಯ ಅರಾಜಕವಾಗಿರುವುದಿಲ್ಲ. ಓದುಗನೂ ಮುಗ್ಧನಾಗಿ ಒಂದು ಪಠ್ಯವನ್ನು ಓದುವುದಿಲ್ಲ. ಓದುವಾಗ  ಹಿನ್ನೆಲೆ,  ಸಂದರ್ಭಗಳನ್ನು ಸೃಷ್ಟಿಸಿಕೊಂಡೇ ಓದಲು ಪ್ರಾರಂಭಿಸುತ್ತಾನೆ.

ಯಾವ ಪಠ್ಯವಾಗಲಿ, ಓದಾಗಲಿ ಈ ಅರ್ಥದಲ್ಲಿ ಸಾಚಾ ಆಗಿರುವುದಿಲ್ಲ. ಈ ರೀತಿ ಸಂದರ್ಭ ಸೃಷ್ಟಿಸಿಕೊಳ್ಳುವುದರಿಂದಲೇ ಒಂದೇ ಕೃತಿಯ ಒಂದು ಓದಿಗೂ ಮತ್ತೊಂದು ಓದಿಗೂ ವ್ಯತ್ಯಾಸ ಕಂಡು ಬರುತ್ತದೆ. ಯಾವ ಪಠ್ಯವೂ ಈ ಅರ್ಥದಲ್ಲಿ ಸಾಚಾ ಅಲ್ಲ (not pure). ಆದ್ದರಿಂದ, ಪ್ರತಿ ಪಠ್ಯ ಓದುವ ಸಂದರ್ಭಕ್ಕೆ ಅವಲಂಬಿತವಾಗಿ ಅರ್ಥದ ವಿವಿಧ ಛಾಯೆಗಳನ್ನು (Fook prints) ಮಾತ್ರ ಓದುಗರು ಗುರುತಿಸಿಕೊಳ್ಳಬಲ್ಲರು. ಓದುಗ ಕಂಡುಕೊಳ್ಳುವ ಅರ್ಥಗಳೆಲ್ಲವೂ ಕೃತಿಕಾರನ ಅರ್ಥವೇ ಆಗಲೇ ಬೇಕೆಂಬುದಿಲ್ಲ. ರಚನೆಗೆ ಒಂದು ಕೇಂದ್ರವಿರುವುದಿಲ್ಲ. ಕೇಂದ್ರ ಬದಲಾಗುತ್ತಲೇ ಇರುತ್ತದೆ. ಹೀಗೆ ಕೇಂದ್ರ ಬದಲಾಗುವುದನ್ನು ಲೀಲೆ (Play) ಎಂದು ರಚನಾವಾದಿಗಳು ಕರೆಯುತ್ತಾರೆ. 

About the Author

ಕಿಕ್ಕೇರಿ ನಾರಾಯಣ
(02 May 1946 - 10 January 2017)

ಕಿಕ್ಕೇರಿ ನಾರಾಯಣ ಅವರು ಹುಟ್ಟಿದ್ದು 2ಮೇ 1946 ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೋಕಿನ ಕಿಕ್ಕೇರಿಯಲ್ಲಿ. ಕಿಕ್ಕೇರಿ, ಮೈಸೂರು, ಪೂನಾಗಳಲ್ಲಿ ವಿದ್ಯಾಭ್ಯಾಸ, ಪದವಿ ತರಗಳಿಯಲ್ಲಿರುವಾಗಲೇ ಸಹಪಾಠಿ ವಿ.ಎನ್.ಲಕ್ಷ್ಮೀನಾರಾಯಣರ ಜೊತೆಗೂಡಿ ಕ್ಷೇತ್ರಕಾರ್ಯ ಮಾಡಿ ತುಂಬೆ ಹೂವಿಟ್ಟು ಶರಣೆನ್ನಿ ಎಂಬ ಜನಪದ ಗೀತೆಗಳ ಸಂಕಲನವನ್ನು ಸಂಪಾದಿಸಿ ಪ್ರಕಟಿಸಿದ್ದರು. ಜೇನು ಕುರುಬರ ಕನ್ನಡವನ್ನು ಅಧ್ಯಯನ ಮಾಡಿ ಅದರ ನಿಘಂಟು ಮತ್ತು ಆ ಭಾಷೆಯಲ್ಲಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದರು. 11ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಕಟಿಸಿದ್ದರು , ಬಿದಿರು ಮಂಡಲ ನಾಟಕ ತುಂಬ ಜನಪ್ರಿಯವಾಗಿತ್ತು. (ಜೇನು ಕುರುಬ ಯುವಕರೇ ಅಭಿನಯಿದ್ದು ವಿಶೇಷ).  ...

READ MORE

Related Books