ಸಂರಚನಾವಾದ

Author : ಬಸವರಾಜ ನಾಯ್ಕರ

Pages 99

₹ 30.00




Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕರ್ನಾಟಕ ಸಾಹಿತ್ಯ ಅಕಾಡೆಮಿ ನೃಪತುಂಗ ರಸ್ತೆ, ಬೆಂಗಳೂರು - 560002

Synopsys

ಸಂರಚನಾವಾದ ಎನ್ನುವುದು ಮೂಲಭೂತವಾಗಿ ಜೀವನವನ್ನು ನೋಡುವ ದೃಷ್ಟಿಯೆಂದು ಹೇಳಬಹುದು. ಈ ಸಿದ್ಧಾಂತದ ಪ್ರಕಾರ ಜೀವನವನ್ಬು ವೀಕ್ಷಿಸುವ ಪ್ರತಿಯೊಬ್ಬ ಮನುಷ್ಯನೂ ತಾನು ಕಂಡುಕೊಂಡ ಸತ್ಯವನ್ನು ತನ್ನದೇ ಆದ ರೀತಿಯಲ್ಲಿ ಸೃಜಿಸಿಕೊಳ್ಳುತ್ತಾನೆ. ಈ ಕ್ರಿಯೆಯಲ್ಲಿ ಜಗತ್ತು ಮತ್ತು ಅದನ್ನು ವೀಕ್ಷಿಸುವವನ ನಡುವೆ ಏರ್ಪಡುವ ಸಂಬಂಧ ಬಹು ಮಹತ್ವದ್ದಾಗುತ್ತದೆ. ಇಂತದ್ದು ’ಸಂರಚನಾವಾದ’ ದಲ್ಲಿ ಕಂಡು ಬರುವ ಪ್ರಮುಖವಾದ ಅಂಶಗಳು.

’ಸಂರಚನಾವಾದ’ ದ ಬಗ್ಗೆ ಸ್ಥೂಲವಾದ ಪರಿಚಯ, ಭಾಷಾಶಾಸ್ತ್ರ ಮತ್ತು ಮಾನವಶಾಸ್ತ್ರ, ಸಾಹಿತ್ಯದ ಸಂಚನೆಗಳು, ಸಂರಚನಾವಾದಿ ಅನ್ವಯಿಕ ವಿಮರ್ಶೆ, ಇವುಗಳ ಬಗ್ಗೆ ವಿಮರ್ಶಿಸುವ ಅಂಶಗಳು ’ಸಂರಚನಾವಾದ’ ಪುಸ್ತಕದಲ್ಲಿದೆ.

ಸಂರಚನಾವಾದ ಎನ್ನುವುದು ಸಾಹಿತ್ಯ ಮೀಮಾಂಸೆಯ ಪಂಥಗಳಲ್ಲಿ ಪ್ರಮುಖವಾದುದು.  ಈ ಪಂಥವು ಅಂತರ್ಶಿಸ್ತೀಯ ದೃಷ್ಟಿಕೋನವನ್ನು ಮತ್ತು ಅತ್ಯಂತ ಸಂಕೀರ್ಣವಾದ ವಿವರಗಳನ್ನು ಒಳಗೊಂಡಿದೆ. ಡಾ. ಬಸವರಾಜ ನಾಯ್ಕರ ಇದರ ಲೇಖಕರಾಗಿದ್ದು ಸಾಹಿತಿ, ವಿಮರ್ಶಕ ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ಸಾಹಿತ್ಯ ಪಾರಿಭಾಷಿಕ ಮಾಲೆಯ ಸರಣಿಯಲ್ಲಿ ಪ್ರಕಟವಾದ ಕೃತಿ ’ಸಂರಚನವಾದ’.   

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books