ಸಂಸ ದರ್ಪಣ

Author : ಬಿ.ಸಿ. ರಾಜಕುಮಾರ್‍

₹ 250.00




Published by: ಸ್ನೇಹ ಬುಕ್‍ ಹೌಸ್‍
Address: ಸ್ನೇಹ ಬುಕ್‍ ಹೌಸ್‍

Synopsys

ಸಂಸರಂತಹ ಕೆಲವು ನಾಟಕಕಾರರ ಕುರಿತು ಹೇಳಿದಷ್ಟೂ ಮುಗಿಯದು. ಇವರು ಕೂಡ ಉಳಿದವರಂತೆ ಬೆಳಕಿಗೆ ಬರದೇ, ಕತ್ತಲಲ್ಲಿ ಉಳಿದುಬಿಟ್ಟರು. ಕನ್ನಡ, ಇಂಗ್ಲೀಷ್, ಸಂಸ್ಕೃತ ಹಾಗೂ ತಮಿಳು ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದದ್ದ ಸಂಸರ ಜೀವನಾಧಾರಿತ ಕೃತಿ ‘ಸಂಸ ದರ್ಪಣ’. ಇದೊಂದು ಸಂಶೋಧನಾ ಪ್ರಬಂಧ. ಸಂಸರು ತಮ್ಮ ನಾಟಕಗಳಲ್ಲಿ ನಿರೂಪಿಸಿದ ದೇಸೀ ಪ್ರಜಾಪ್ರಭುತ್ವ ಹಾಗೂ ಆಂಗ್ಲರ ದಾಸ್ಯದ ವಿರುದ್ಧ ಅವರಿಗಿದ್ದ ಭಾವನೆಗಳು ಹೀಗೆ ಹಲವು ಅನುಭವಗಳ ಆಧಾರದ ಮೇಲೆ ರಚಿತವಾದ ನಾಟಕಗಳ ಕುರಿತು ವಿಶ್ಲೇಷಣೇ ಈ ಪುಸ್ತಕದಲ್ಲಿದೆ. ಇಷ್ಟು ಮಾತ್ರವಲ್ಲದೇ, ಸ್ಕಿಜೋ಼ಫ್ರೇನಿಯಾದಿಂದ ದುರಂತವಾಗಿ ಅಂತ್ಯಗೊಂಡ ಅವರ ಬದುಕಿನ ಕೊನೇಯ ಕ್ಷಣಗಳ ವಿವರಣೆ ಕೂಡ ಪುಸ್ತಕದಲ್ಲಿ ನೀಡಲಾಗಿದೆ. ಸಂಸರನ್ನು ಕನ್ನಡದ ಶೇಕ್ಸ್ ಪಿಯರ್‍ ಎಂದು ಕರೆಯಲಾಗಿದೆ. ಯಾಕೆಂದರೆ ಅವರ ನಾಟಕಗಳು ಶೇಕ್ಸ್‍ಪಿಯರ್‍ನ ನಿರೂಪಣಾ ಶೈಲಿಯನ್ನು ನೆನಪಿಸುತ್ತವೆ. ಈ ಪುಸ್ತಕದಲ್ಲಿ ಶೇಕ್ಸ್‍ಪಿಯರ್‍ ಹಾಗೂ ಸಂಸರ ಬದುಕುಗಳನ್ನು ತುಲನೆ ಮಾಡಿ ಬರೆದಿದ್ದಾರೆ ಲೇಖಕರಾದ ಡಾ. ರಾಜ್‍ಕುಮಾರ್‍.

Related Books