ಸಂವಾದಿನಿ

Author : ಗಿರಿಜಾ ಎಸ್. ದೇಶಪಾಂಡೆ

Pages 132

₹ 130.00




Year of Publication: 2020
Published by: ಕಾವ್ಯ ಸ್ಪಂದನ ಪಬ್ಲಿಕೇಷನ್ಸ್,
Address: ರಾಜಾಜಿನಗರ, ಬೆಂಗಳೂರು-560010

Synopsys

ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರ ಲೇಖನಗಳ ಸಂಗ್ರಹ ಕೃತಿ-ಸಂವಾದಿನಿ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಒಟ್ಟು 32 ಮಹಿಳೆಯರ ಸಾಧನೆಗಳ ಪರಿಚಯವನ್ನು ಒಳಗೊಂಡಿದೆ. ಸಾಹಿತಿ, ಉಪನ್ಯಾಸಕಿ ಜಯಶೀಲಾ ಎಸ್.ಎನ್. ಅವರು ಕೃತಿಯ ಕುರಿತು ‘ ಸ್ತ್ರೀ ಸಮೃದ್ಧಿಯ ಸಂಕೇತ ಎಂಬ ಲೇಖನದೊಂದಿಗೆ ಆರಂಭವಾಗುವ ಈ ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿಯರಾದ ಝಾಂಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರರಾಣಿ ಚೆನ್ನಮ್ಮ, ಒನಕೆ ಓಬವ್ವ ಇನ್ನೂ ಮುಂತಾದ ವೀರ ವನಿತೆಯರ ಬಗ್ಗೆ ಅನೇಕ ಕುತೂಹಲಕಾರಿ ವಿವರಗಳಿವೆ. ಖ್ಯಾತ ಲೇಖಕಿಯರಾದ ಅನುಪಮಾ ನಿರಂಜನ, ವಿಜಯಾದಬ್ಬೆ, ನಂಜನಗೂಡು ತಿರುಮಲಾಂಬಾ, ಎಂ.ಕೆ.ಇಂದಿರಾ, ಜಯದೇವಿತಾಯಿ ಲಿಗಾಡೆ, ತ್ರಿವೇಣಿ, ಕನ್ನಡದ ಮೊದಲ ಮಹಾಕವಿ ಅಂಬಾಬಾಯಿ, ವಚನಕಾರ್ತಿಯರಾದ ಸತ್ಯಕ್ಕ,ಮುಕ್ತಾಯಕ್ಕರ ಬದುಕು ಮತ್ತು ಸಾಧನೆಗಳ ಮಾಹಿತಿಗಳಿವೆ. ಸಾಧಕಿಯರಿಗೆ ಮಾದರಿ ಮತ್ತು ಸ್ಪೂರ್ತಿಯಾದ ಸುನಿತಾ ವಿಲಿಯಮ್ಸ, ಮತ್ತು ಕಲ್ಪನಾ ಚಾವ್ಲಾ,ಮಹಿಳಾ ಸೈನ್ಯ ರಚಿಸಿದ ಮೊದಲ ಮಹಿಳಾ ರಾಣಿ ಅಹಲ್ಯಾಬಾಯಿ, ಸ್ತ್ರೀಯರಿಗೆ ಮಾದರಿ ಬ್ರಹ್ಮವಾದಿನಿ ಮೈತ್ರೇಯಿ, ಮಹಿಳಾ ಮೊದಲ ನ್ಯಾಯಾಧೀಶರಾದ ಆರ್.ಕಲ್ಯಾಣಮ್ಮ, ಮಾನವ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಪುಲೆ, ಸಂಗೀತ ಸಾಮ್ರಾಜ್ಞಿ ಎಂ.ಎಸ್.ಸುಬ್ಬಲಕ್ಷ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ,ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮಹಿಳಾ ವೈದ್ಯೆ ಆನಂದಿಬಾಯಿ ಜೋಶಿ, ಗೃಹಿಣಿಯರಿಗೆ ಮಾದರಿ ಹೇಮರೆಡ್ಡಿ ಮಲ್ಲಮ್ಮ, ಶ್ರೀಮಾತೆ ಶಾರದಾದೇವಿ, ಪರಿಸರವಾದಿ ಸಾಲುಮರದ ತಿಮ್ಮಕ್ಕ ,ಸರಳ ಜೀವನದಲ್ಲಿ ಸಾಧನೆ ಗೈದ ಸುಧಾ ಮೂರ್ತಿ ಹೀಗೆ ಕಲೆ,ಸಾಹಿತ್ಯ,ಸಾಹಸ ಪ್ರವೃತ್ತಿಯಂತಹ ಸಾಧನೆಯಲ್ಲಿ ತೊಡಗಿ ವಿಶ್ವದ ಗೌರವಕ್ಕೆ ಪಾತ್ರರಾಗಿ ಇಂದಿಗೂ ಚಿರಪರಿತರಾಗಿರುವ ಹಲವು ಮಹಿಳಾ ಮಣಿಗಳ ಪರಿಚಯದ ಜೊತೆಗೆ ಬದುಕಿನ ನೋವು ನಲಿವುಗಳಿಗೆ ಸ್ಪಂದಿಸುತ್ತ ಜೀವನ ಮೌಲ್ಯಗಳನ್ನಿಟ್ಟು ಕೊಂಡು ಆದರ್ಶ ವ್ಯಕ್ತಿತ್ವದಿಂದ ಬದುಕಿ ,ಬೆಳಕಿಗೆ ಬಾರದೆ ಉಳಿದಿರುವ ಕೆಲವು ಸ್ತ್ರೀಯರ ಪರಿಚಯವೂ ಗಮನ ಸೆಳೆಯುವಂತಹುದಾಗಿದೆ. ಇವರೆಲ್ಲರ ಜೀವನ ಮೌಲ್ಯ, ಆದರ್ಶ ವ್ಯಕ್ತಿತ್ವ, ಶೌರ್ಯ,ಸಾಹಸ, ದೇಶಪ್ರೇಮ, ಒಳ್ಳೆಯ ಗುಣಗಳು ನಮಗಿಂದು ಮಾದರಿಯಾಗಬೇಕೆಂಬುದು ಲೇಖಕಿಯ ಆಶಯವಾಗಿದೆ. ವೈಚಾರಿಕತೆ,ಮತ್ತು ಪ್ರಾಮಾಣಿಕತೆಯಿಂದ ಕೂಡಿದ ಬರವಣಿಗೆಯಲ್ಲಿ ಸರಳತೆ ಇರುವದರಿಂದ ಓದುಗರಿಗೆ ಆಪ್ತವಾಗಬಲ್ಲ ಕೃತಿ ಇದಾಗಿದ್ದು ಮಹಿಳಾ ಸಾಧಕಿಯರ ಬಗ್ಗೆ ತಿಳಿಯ ಬಯಸುವವರಿಗೆ ಇದೊಂದು ಉಪಯುಕ್ತ ಕೈಪಿಡಿ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಗಿರಿಜಾ ಎಸ್. ದೇಶಪಾಂಡೆ

ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ಊರಿನವರು. ಹಾವೇರಿಯಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಬಿ.ಇಡಿ ಪದವೀಧರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರು. ಇವರು ಬರೆದ ಲೇಖನಗಳು, ಸಂದರ್ಶನಗಳು, ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನಲ್ಲಿ ವಾಸವಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರಾಗಿದ್ದಾರೆ. ಕೃತಿಗಳು: . ಸಂವಾದಿನಿ (32 ಮಹಿಳಾ ಸಾಧಕರ ಪರಿಚಯ), ಸಂಜೀವಿನಿ (ಆರೋಗ್ಯ ಲೇಖನಗಳು), ಜೇನುಗೂಡು (ಆತ್ಮಕಥೆ) ಪ್ರಶಸ್ತಿ-ಪುರಸ್ಕಾರಗಳು: ಡಿ.ಎಸ್.ಮ್ಯಾಕ್ಸ್ ಕನಸ್ಟ್ರಕ್ಶನ್ (2019) ಕಂಪನಿಯವರಿಂದ ರಾಜ್ಯೋತ್ಸವದಂದು ಶ್ರೇಷ್ಟ ಅಂಕಣ ಬರಹಗಾರ್ತಿ ಸಾಹಿತ್ಯಶ್ರೀ ಪ್ರಶಸ್ತಿ, ಕನ್ನಡ ...

READ MORE

Related Books