ಸಂವರ್ಧನ

Author : ಸಿ.ಎಸ್.ಭೀಮರಾಯ (ಸಿಎಸ್ಬಿ)

Pages 100




Year of Publication: 2015
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ 
Address: ಶ್ರೀಸಿದ್ದಲಿಂಗೇಶ್ವರ ಪ್ರಕಾಶನ ವಿರಕ್ತಮಠ, ಇಂಗಳೇಶ್ವರ ಅಂಚೆ ಮು. ತಾ: ಬಸವನಬಾಗೇವಾಡಿ, ವಿಜಯಪುರ
Phone: 9448124431

Synopsys

ಈ ಕೃತಿಯಲ್ಲಿ  ಹಲವು ಲೇಖಕರ ಜೀವನವನ್ನು ಅನಾವರಣಗೊಳಿಸಲು, ಅವರ ಜೀವನಾನುಭವ ಏನೆಂದು ಅರಿಯಲು ಮತ್ತು ಅರುಹಲು ಪ್ರಯತ್ನಿಸಿದ್ದಾರೆ. ಅವರು ವಿಮರ್ಶಿಸಿದ ಕೆಲವು ಲೇಖಕರ ಕೃತಿಗಳು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಹಲವು ಬಗೆಯ ಸಂವೇದನೆ, ನೋಟಗಳನ್ನು ಕೊಟ್ಟಂಥವುಗಳಾಗಿವೆ. ಅವುಗಳ ಶಕ್ತಿ, ಮಿತಿ ಮತ್ತು ಮಹತ್ವವನ್ನು ನಿಖರವಾಗಿ, ಮುಕ್ತವಾಗಿ ಭೀಮರಾಯರು ಈ ಕೃತಿಯಲ್ಲಿ ಗುರುತಿಸಿದ್ದಾರೆ.

About the Author

ಸಿ.ಎಸ್.ಭೀಮರಾಯ (ಸಿಎಸ್ಬಿ)

ಲೇಖಕ ಸಿ.ಎಸ್.ಭೀಮರಾಯ  ಅವರು ಹೊಸ ತಲೆಮಾರಿನ ಕವಿ ಮತ್ತು ವಿಮರ್ಶಕ. 1981ರಲ್ಲಿ  ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಇಂಗ್ಲಿಷ್ ಭಾಷೆ ಉಪನ್ಯಾಸಕರು. ಈವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ಕಾವ್ಯ, ಪ್ರಬಂಧ ಮತ್ತು ವಿಮರ್ಶೆಗಳಲ್ಲಿನ ಸಂವೇದನೆಗಳು, ಧ್ಯೇಯ-ಧೋರಣೆಗಳು ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳ ಬಗೆಗಿನ ತೀವ್ರ ಕಾಳಜಿ, ಅನ್ಯಾಯದ ವಿರುದ್ಧ ಸಿಡಿದೇಳುವ ಆಕ್ರೋಶ, ಸಿಟ್ಟು, ವ್ಯಂಗ್ಯ, ಬಂಡಾಯ-ಅವರ ಬರವಣಿಗೆಯಲ್ಲಿ ಗಮನ ಸೆಳೆಯುತ್ತವೆ.  ಕೃತಿಗಳು: ...

READ MORE

Related Books