ಸನಾತನ

Author : ಚಂದ್ರಕಾಂತ ಪೋಕಳೆ

Pages 200

₹ 225.00




Year of Publication: 2022
Published by: ನವಕರ್ನಾಟಕ ಪಬ್ಲಿಕೇಷನ್‌

Synopsys

"ಸನಾತನ" ಶರಣಕುಮಾರ ಲಿಂಬಾಳೆ ಅವರ ಮರಾಠಿ ಕಾದಂಬರಿಯಾಗಿದೆ. ಈ ಕಾದಂಬರಿಯನ್ನು ಕನ್ನಡಕ್ಕೆ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿದ್ದಾರೆ. "ಸನಾತನ" ಕಾದಂಬರಿಯಲ್ಲಿನ ಘಟನೆಗಳು ಯಾವುದೋ ಕಾಲದ್ದಲ್ಲ. ಇಂದಿಗೂ ಭಾರತದಲ್ಲಿ ಜೀವಂತವಾಗಿರುವಂಥವು, ಇದು ನಿರಾಕರಿಸಿದ ಅಂದಿನ ಚರಿತ್ರೆಯ ಉತ್ಪನನವಾಗಿದೆ. ನೂರಾರು ಜನರನ್ನು ನೂರಾರು ಮೈಲುಗಳವರೆಗೆ ಮತ್ತು ನೂರಾರು ವರ್ಷಗಳ ಕಾಲಕ್ಕೆ ವ್ಯಾಪಿಸಿಕೊಂಡಿರುವ  ಕಾದಂಬರಿ. ಇದು ಕಲ್ಪನೆ ಹಾಗೂ ಚರಿತ್ರೆಯ ರಸಾಯನದಿಂದ ರೂಪಗೊಂಡ ಸತ್ಯದ ಒಂದು ಹೊಸ ಪ್ರಯೋಗವಾಗಿದೆ. ಶರಣಕುಮಾರ ಲಿಂಬಾಳೆಯವರ ಸನಾತನ ಕಾದಂಬರಿಯು ವ್ಯಾಪಕವಾದ ಸಾಮಾಜಿಕ ಅರಿವನ್ನು ತಂದು ಕೊಡುತ್ತದೆ. ಹೀಗಾಗಿ ಜಾತಿಯ ಸಂಕುಚಿತ ಪರಿಧಿಯೊಳಗೆ ಬದುಕುವ ಪ್ರತಿಯೊಬ್ಬರಿಗೂ ಇದು ಹರಿತವಾದ ಶಸ್ತ್ರದಂತೆ ಅನಿಸಬಹುದು. ಇದು ಶಸ್ತ್ರದ ಪೂಜೆಯಲ್ಲ, ಮನುಷ್ಯನ ಪ್ರಾರ್ಥನೆ ಎನ್ನುತ್ತದೆ, ಬೆನ್ನುಡಿ. 

About the Author

ಚಂದ್ರಕಾಂತ ಪೋಕಳೆ
(20 August 1949)

ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು  ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...

READ MORE

Related Books