'ಸಂಚು ವಂಚನೆಗಳ ಲೋಕದಲ್ಲಿ' ಡಾ. ಮೈಸೂರು ನಾಗರಾಜ ಶರ್ಮಾ ಅವರು ರಚಿಸಿರುವ ಅಪರಾಧ ಪ್ರಕರಣಗಳ ಕುರಿತ ನೈಜ ಕೃತಿಯಾಗಿದೆ. ಈ ಸಂಚಿಕೆಯಲ್ಲಿ ಸಮಾಜಕ್ಕೆ ಪಾಠವಾಗಬಹುದಾದ ಕೆಲವು ಸಂದರ್ಭಗಳನ್ನು ಲೇಖಕರು ನಿರೂಪಿಸಿದ್ದಾರೆ. ಸತ್ಯಘಟನೆಗಳನ್ನು ನೀರಸವಾಗಿ ಇಲ್ಲಿ ವಿವರಿಸದೇ, ಅದನ್ನು ಸ್ವಾರಸ್ಯಕರ ವಾದ ಒಂದು ಕಥಾರೂಪದಲ್ಲಿಯೇ ಸಮಾಜದ ಮುಂದಿಡುವ ಪ್ರಯತ್ನ ನಡೆಸಿದ್ದಾರೆ. ಪ್ರಾಚೀನ ಭಾರತೀಯ ನಿರೂಪಣೆಗಳಾದ; ಹಿತೋಪದೇಶ, ಪಂಚತಂತ್ರ ಹಾಗೂ ಕಾಕೋಲೋಕೀಯ ಮುಂತಾದ ಸಾಹಿತ್ಯಗಳಲ್ಲಿಯೂ ಇಂತಹುದೇ ಪಾಠ ಹಾಗೂ ರಂಜನೆಗಳ ಉಭಯ ಪ್ರಯತ್ನಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಮೈ.ನಾ. ಶರ್ಮಾ ಅವರು ಮೂಲತಃ, ಮೈಸೂರಿನವರು. ಮೈಸೂರು ವಿ.ವಿ. ಯಿಂದ ನಾಟಕಶಾಸ್ತ್ರದ ಪದವಿ, ಇತಿಹಾಸ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟೊರೇಟ್ ಪದವಿಯನ್ನು ಪಡೆದಿದ್ದಾರೆ. ಇವರ ಪುರಾತತ್ವ ಸಂಶೋಧನೆಯನ್ನು ಪರಿಗಣಿಸಿ ಕೇಂಬ್ರಿಡ್ಜ್ ಯೂನಿವರ್ಸಿಟಿ ಪರಿಸರದಿಂದ ʻಪೋಸ್ಟ್ ಡಾಕ್ಟೊರಲ್ ರಿಸರ್ಚ್ ಫೆಲೋಷಿಪ್ʼ ಎಂಬ ಉನ್ನತ ಸಂಶೋಧನಾ ಅನುದಾನವನ್ನು ಪ್ರದಾನಿಸಲಾಗಿದೆ. ಶರ್ಮರು ಲಂಡನ್, ಆಕ್ಸ್ಫರ್ಡ್, ಬೆರ್ಲಿನ್, ಪ್ಯಾರಿಸ್ ಹಾಗೂ ರೋಮ್ ದೇಶಗಳಲ್ಲಿನ ಅನೇಕ ವಸ್ತು ಸಂಗ್ರಹಾಲಯಗಳಲ್ಲಿ ಅಧ್ಯಯನವನ್ನು ಮಾಡಿದ್ದಾರೆ. ವರ್ಣಚಿತ್ರ, ಅಭಿನಯ, ಹಾಗೂ ಛಾಯಾಚಿತ್ರ ಕಲಾಪ್ರಕಾರಗಳಲ್ಲಿ ಶಾಸ್ತ್ರೀಯ ಅಧ್ಯಯನವನ್ನು ನಡೆಸಿರುವ ಶರ್ಮರು ಇತಿಹಾಸ, ಪುರಾತತ್ವ, ಕಲೆ ಹಾಗೂ ಸಾಮಾನ್ಯ ವಿಷಯಗಳ ಬಗೆಗೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಮೈಸೂರು ...
READ MORE