ಕರ್ನಾಟಕದ ಇಬ್ಬರು ಪ್ರತಿಭಾವಾಂತ ಮಹಿಳೆಯರ ಬದುಕು-ಸಾಧನೆಯನ್ನು ಪರಿಚಯಿಸುವ ಗ್ರಂಥ- ಸಂಗತ. ಅವರಲ್ಲಿ ಒಬ್ಬರು ಯು.ಕೆ. ಚಂದ್ರಭಾಗಾದೇವಿ. ಭಾರತೀಯ ನೃತ್ಯಕಲೆಯ ಪುನರುತ್ಥಾನದ ಸಂದರ್ಭದಲ್ಲಿ ನೃತ್ಯವನ್ನು ವೃತ್ತಿಯನ್ನಾಗಿ ಆಯ್ದುಕೊಂಡು ತಮ್ಮ ಪತಿ ಯು.ಎಸ್. ಕೃಷ್ಣರಾವ್ ಅವರೊಂದಿಗೆ ನೃತ್ಯ ಪ್ರದರ್ಶಕರಾಗಿ ಮತ್ತು ನೃತ್ಯ ಸಂಯೋಜಕರಾಗಿ ಕರ್ನಾಟಕದ ಮೂಲೆ ಮೂಲೆಗೆ ನೃತ್ಯವನ್ನು ಪ್ರಸಾರ ಮಾಡಿ ಸಾಮಾನ್ಯ ಜನರೂ ನೃತ್ಯವನ್ನು ತಿಳಿದುಕೊಳ್ಳುವಂತೆ ಮಾಡಿದ ನೃತ್ಯಕಲಾವಿದೆ ಇವರು. ಲೇಖನ, ಗ್ರಂಥಗಳ ಪ್ರಕಟಣೆಯಿಂದ ಲೇಖಕಿಯಾಗಿಯೂ ಗುರುತಿಸಿಕೊಂಡವರು. ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದವರು.
ಇನ್ನೊಬ್ಬರು, ಡಾ. ಜ್ಯೋತ್ಸ್ನಾ ಕಾಮತ್. ಕೇಂದ್ರ ಸರಕಾರ ಬಾನುಲಿ ಕೇಂದ್ರದ ಪ್ರಮುಖ ಆಡಳಿತ ಹುದ್ದೆಯನ್ನು ನಿರ್ವಹಿಸಿ, ಇತಿಹಾಸ ಮತ್ತು ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದವರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿವೆ.
©2021 Bookbrahma.com, All Rights Reserved