ಸಂಗೀತ ವೈವಿಧ್ಯ

Author : ಸ್ವಾಮಿರಾವ್ ಕುಲಕರ್ಣಿ

Pages 132

₹ 100.00




Year of Publication: 2019
Published by: ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ
Address: ಸರಸ್ವತಿ ಗೋದಾಮ, ಕಲಬುರಗಿ-585101

Synopsys

‘ಸಂಗೀತ ವೈವಿಧ್ಯ’ ಕೃತಿಯ ಶೀರ್ಷಿಕೆ ಹೇಳುವಂತೆ ಸಂಗೀತದ ವಿವಿಧ ಪ್ರಕಾರಗಳ ಕುರಿತು ಮಾಹಿತಿಗಳನ್ನು ಒದಗಿಸುತ್ತದೆ. ದಾಸರ ಕೀರ್ತನೆ, ಶರಣರ ವಚನ, ತತ್ವಪದ, ಸೂಫಿ ಸಾಹಿತ್ಯ, ಭಾವಗೀತೆಗಳಂತಹ ಸಾಹಿತ್ಯ ಪ್ರಕಾರ ಮಾತ್ರವಲ್ಲ; ಹಳಗನ್ನಡ, ನಡುಗನ್ನಡ, ಹೊಸ ಗನ್ನಡ ಕಾವ್ಯಕ್ಕೆ ಕಂಠ ನೀಡುವ ಹಿನ್ನೆಲೆಯಲ್ಲಿ ಸಾಹಿತ್ಯ ಮತ್ತು ಸಂಗೀತ ಸಾಮರಸ್ಯದ ಸಂದೇಶ ನೀಡುತ್ತದೆ.

ಡಾ. ಸ್ವಾಮಿರಾವ ಕುಲಕರ್ಣಿಯವರು ಹಿರಿಯ ಲೇಖಕರು. ಖ್ಯಾತ ಸಂಗೀತಗಾರ ಹುಸೇನಸಾಬರ ಅಭಿನಂದನ ಗ್ರಂಥಕ್ಕೆ ಬಂದಿದ್ದ ಸಂಗೀತ ಕುರಿತ ಲೇಖನಗಳನ್ನು ಒಂದು ಕಡೆ ಸೇರಿಸಿ, ಈ ಕೃತಿಯನ್ನು ಸಂಪಾದಿಸಿದ್ದಾರೆ. ಹಿಂದುಸ್ತಾನಿ ಸಂಗೀತದ ಹುಟ್ಟು, ವಿಕಾಸ, ದಾಸರ ಕೀರ್ತನೆ, ಶರಣರ ವಚನ ಮತ್ತು ಸಂಗೀತ- ಹೀಗೆ ಸಂಗೀತ, ಸಾಹಿತ್ಯದ ಕೊಡಕೊಳ್ಳುವಿಕೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.

ಈ ಕೃತಿಯ ಅತ್ಯಂತ ಮಹತ್ವದ ಭಾಗ- ಕಲ್ಯಾಣ ಕರ್ನಾಟಕ ಪ್ರದೇಶದ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಸಂಗೀತ ಪರಂಪರೆ ಹಾಗೂ ಸಂಗೀತಗಾರರ ದಾಖಲೆ. ಸಂಗೀತ ಅಭ್ಯಾಸಿಗಳಿಗೆ ಇದೊಂದು ಆಕರ ಗ್ರಂಥ. 

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books