ಸಂಗೀತ ಕೋಣೆ

Author : ಸದಾನಂದ ಕನವಳ್ಳಿ

Pages 232

₹ 150.00




Year of Publication: 2013
Published by: ಅಭಿನವ ಪ್ರಕಾಶನ
Address: 1ನೇ ಮುಖ್ಯ ರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು.560040
Phone: 9448804905, 080-23505825

Synopsys

’ಮ್ಯೂಸಿಕ್ ರೂಮ’ ಧೋಂಡೂಬಾಯಿ ಕುಲಕರ್ಣಿ ಎಂಬ ಸರಳ, ಮುಗ್ಧ, ಧಾರ್ಮಿಕ ಸ್ವಭಾವದ ಹಿರಿಯ ಸಂಗೀತಗಾರ್ತಿಯ ಜೀವನ ಕಥೆ. ಇದರ ಕನ್ನಡ ಅನುವಾದವೇ ’ಸಂಗೀತ ಕೋಣೆ’ . ದೋಂಡೂಬಾಯಿ ಕುಲಕರ್ಣಿ ವಯಸ್ಸಿನಲ್ಲಿಯೂ, ವಿದ್ವತ್ತಿನಲ್ಲೂ ಹಿರಿಯ ಸಂಗೀತ ಚೇತನ. ಮೂಲ ಕೃತಿಯನ್ನು ಬರೆದವರು ಧೋಂಡೂಬಾಯಿ ಶಿಷ್ಯೆ ನಮಿತಾ ದೇವಿಯಾಲ. ಗುರುಗಳ ಕಷ್ಟಮಯ, ಆದರ್ಶಮಯ ಜೀವನದ ಒಳನೋಟವನ್ನು  ಕೃತಿಯಲ್ಲಿ ಸೆರೆಹಿಡಿದಿದ್ದಾರೆ. ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಕನ್ನಡಕ್ಕೆ ಅನುವಾದಿಸುವಲ್ಲಿ ಸದಾನಂದ ಕನವಳ್ಳಿಯವರು ಯಶಸ್ವಿಯಾಗಿದ್ದಾರೆ. ಸಂಗೀತಲೋಕವನ್ನೇ ಗರ್ಭೀಕರಿಸಿಕೊಂಡ ಈ ಪುಸ್ತಕವನ್ನು ಸಂಗೀತ ಪ್ರೇಮಿಗಳಂತೂ ಓದಲೇಬೇಕು.

About the Author

ಸದಾನಂದ ಕನವಳ್ಳಿ
(18 September 1935 - 03 April 2015)

ಸಾಹಿತ್ಯ, ಸಂಗೀತ, ಕ್ರೀಡಾ ಪ್ರೇಮಿ ಸದಾನಂದ ಕನವಳ್ಳಿಯವರು (ಜನನ: 18-09-1935) ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದವರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. (ಇಂಗ್ಲಿಷ್) ಮತ್ತು ಎಂ.ಎ. (ಇಂಗ್ಲಿಷ್) ಪದವೀಧರರು. ಡಾ. ವಿ.ಕೃ. ಗೋಕಾಕ್ ಮತ್ತು ಅರ್ಮೆಂಡೊ ಮೆನೆಜಿಸ್ ಶಿಷ್ಯರು. ಹುಬ್ಬಳ್ಳಿಯ ಪಿ.ಸಿ. ಜಾಬಿನ ವಿಜ್ಞಾನ ಕಾಲೇಜು, ವಿಜಯ ಕಾಲೇಜು, ವಿಜಾಪುರದ ಎ.ಎಸ್.ಪಿ. ಕಾಮರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜು ಮತ್ತು ಮುನಿಸಿಪಲ್ ಆರ್ಟ್ಸ್ ಕಾಲೇಜು-ಲಕ್ಷ್ಮೇಶ್ವರದಲ್ಲಿ ಪ್ರಾಚಾರ‍್ಯರಾಗಿ ನಿವೃತ್ತರಾದರು. 1991-92ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ, ಅಲ್ಪಾವಧಿಯಲ್ಲಿ 110 ಪುಸ್ತಕಗಳ ಪ್ರಕಟಣೆಯ ದಾಖಲೆ ಮಾಡಿದ್ದರು. ಕರ್ನಾಟಕ ವಿ.ವಿ ...

READ MORE

Related Books