
‘ಸಂಗೀತ ವಾದ್ಯಗಳು’ ಎಲ್. ಜಿ. ಸುಮಿತ್ರ ಅವರ ಅನುವಾದ ಕೃತಿಯಾಗಿದೆ. ಜಾನಪದ ಹಾಗೂ ಶಾಸ್ತ್ರೀಯ ಸಂಗೀತ ವಾದ್ಯಗಳ ಉಗಮ ಮತ್ತು ಬೆಳವಣಿಗೆಯನ್ನು ಅವುಗಳ ಪ್ರಾರಂಭಿಕ ಮೂಲಗಳಿಂದ ಈ ಪುಸ್ತಕದಲ್ಲಿ ಪರಿಶೀಲಿಸಲಾಗಿದೆ. ವಿವಿಧ ರೀತಿಯ ವಾದ್ಯಗಳ ಸ್ವರೂಪ ಮತ್ತು ಅವುಗಳ ಸಂಗೀತ ಬಳಕೆಗಳ ಬಗ್ಗೆ ಈ ಪುಸ್ತಕ ಅಮೂಲ್ಯವಾದ ವಿಷಯ ಸಂಗ್ರಹಣೆಯಾಗಿದೆ. ಮಿಥ್ಯ, ಜಾನಪದ ಹಾಗೂ ಧರ್ಮಗಳ ದೃಷ್ಟಿಯಿಂದ ಇವುಗಳನ್ನು ಅಧ್ಯಯನ ಮಾಡಿರುವುದಷ್ಟೇ ಅಲ್ಲದೆ ಅಂತರ ಸಾಂಸ್ಕೃತಿಕ ಸಂಬಂಧ ಹಾಗೂ ಸಮಾಜದ ವಿಕಾಸಗಳ ದೃಷ್ಟಿಯಲ್ಲೂ ಇವುಗಳ ಮಹತ್ವವನ್ನು ತಿಳಿಯಪಡಿಸಲಾಗಿದೆ. ಸರಳವಾದ ಈ ಅಧ್ಯಯನ ಸಾಧಾರಣ ಓದುಗರಿಗೂ ಸಂಗೀತ ಶಾಸ್ತ್ರಜ್ವರಿಗೂ ಉಪಯುಕ್ತವಾಗಿದೆ.
©2025 Book Brahma Private Limited.