ಸಂಗ್ಯಾ-ಬಾಳ್ಯಾ: ಬಿಟ್ರಯಲ್

Author : ಬಸವರಾಜ ನಾಯ್ಕರ

Pages 85

₹ 100.00




Year of Publication: 2004
Published by: ಮಿನರ್ವ ಪ್ರೆಸ್
Address: ಟ್ರಫೆಲ್ಗರ್ ಸ್ಕ್ವೇರ್, ಲಂಡನ್ & ಝಂಡೇವಾಲಾ ವಿಸ್ತರಣೆ, ಧರಿಯಾಗಂಜ್, ಹೊಸ ದೆಹಲಿ
Phone: 8790132456

Synopsys

ರಾಯಪ್ಪ ಪತ್ತಾರ ಅವರ ಮೂಲ ಕನ್ನಡ ನಾಟಕ ‘ಸಂಗ್ಯಾ-ಬಾಳ್ಯಾ’ವನ್ನು ಲೇಖಕ ಪ್ರೊ. ಬಸವರಾಜ ನಾಯ್ಕರ್ ಅವರು ಇಂಗ್ಲಿಷಿಗೆ ಅನುವಾದಿಸಿದ ಕೃತಿ-ಸಂಗ್ಯಾ-ಬಾಳ್ಯಾ ಬಿಟ್ರಯಲ್. ಸಂಗ್ಯಾ-ಬಾಳ್ಯಾ ಇಬ್ಬರು ಸ್ನೇಹಿತರು. ವೀರಭದ್ರ ಎಂಬಾತನ ಪತ್ನಿಯೊಂದಿಗೆ ಸಂಗ್ಯಾನ ಅನೈತಿಕ ಸಂಬಂಧವಿರುತ್ತದೆ. ಇದನ್ನು ತಿಳಿದ ವೀರಭದ್ರ ಆ ವಂಚಕರನ್ನು ಕೊಲೆ ಮಾಡುತ್ತಾನೆ. ನಂತರ, ವೀರಭದ್ರನು ತನ್ನ ಪತ್ನಿ ಗಂಗಾಳನ್ನು ತವರು ಮನೆಗೆ ಕಳುಹಿಸುತ್ತಾನೆ. ಬ್ರಿಟಿಷ್ ಕೋರ್ಟ್‌ನಲ್ಲಿ ಪ್ರಕರಣ ನಡೆಯುತ್ತದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಲು ತಾನು ಸಿದ್ಧನಿರುವುದಾಗಿ ಹೇಳಿದ ಮೇಲೆ, ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾನೆ. ನಂತರ, ಆತನು ಶಿಕ್ಷೆಯಿಂದ ಕ್ಷಮಾರ್ಹನಾಗುತ್ತಾನೆ.  

ಸಂಗ್ಯಾ-ಬಾಳ್ಯಾ ಜನಪದ ನಾಟಕವು ಕನ್ನಡ ಸಾಹಿತ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಜನಜನಿತವಾಗಿದೆ. ಜನಪದ ಸಾಹಿತ್ಯ ಸೊಗಡಿನ ನಾಟಕವನ್ನು ಲೇಖಕರು ಇಂಗ್ಲಿಷಿಗೆ ಅನುವಾದಿಸಿ ಜಾಗತಿಕ ಮೌಲ್ಯವನ್ನು ತಂದುಕೊಟ್ಟಿದ್ದಾರೆ. ಇಂತಹ ಅನೈತಿಕ ಸಂಬಂಧದ ವಿಷಯ ವಸ್ತುವಿನಿಂದ ಉಂಟಾದ ದ್ವೇಷ, ರಕ್ತಪಾತ, ಭೀಕರತೆಯ ಈ ನಾಟಕದ ದುರಂತವನ್ನು ಇಂಗ್ಲೆಂಡಿನ ರಾಣಿ ಎಲಿಜಬೆತ್ ಬದುಕಿನ ಕಥೆಗೂ ಹೋಲಿಸಲಾಗುತ್ತದೆ. ಭಾರತೀಯ ಆಂಗ್ಲ ಸಾಹಿತ್ಯದಲ್ಲಿ ಈ ಕೃತಿಯು ವಿಮರ್ಶಕರ ಗಮನ ಸೆಳೆದಿದೆ. 

ಕೇವಲ ಸಂಭಾಷಣೆ ಮಾತ್ರವಾಗಿರದೇ, ಹಾಡುಗಳು-ಕುಣಿತಗಳಿರುವುದು ಈ ನಾಟಕದ ವೈಶಿಷ್ಟ್ಯ. ಅನುವಾದಿತ ಈ ಇಂಗ್ಲಿಷ್ ಕೃತಿಯು ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ. ವಿದ್ಯಾರ್ಥಿಗಳಿಗೆ ಆರು ವರ್ಷ ಕಾಲ ಪಠ್ಯವಾಗಿತ್ತು.  

 

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books