ಸಂಕಥನ

Author : ಕೇಶವ ಮಳಗಿ

Pages 206

₹ 120.00




Year of Publication: 2011
Published by: ಕಥನ ಪ್ರಕಾಶನ
Address: 15, 7ನೇ ಬಿ ಅಡ್ಡರಸ್ತೆ ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು-56೦೦72

Synopsys

ಫ್ರೆಂಚ್ ವಿಚಾರಧಾರೆಯ ಒಂದು ಅಪರೂಪದ ಅಧ್ಯಯನ ಮತ್ತು ಅನುವಾದ ಪ್ರಯತ್ನ. ಫ್ರೆಂಚ್ ಕ್ರಾಂತಿಯ ನಂತರದ ವರ್ಷಗಳಲ್ಲಿ ಸಾಹಿತ್ಯ-ಸಣಸ್ಕೃತಿ, ಸಮಾಜ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಒಡಮೂಡಿದ ಚಿಂತನೆಗಳು ಒಟ್ಟಾರೆ ವಿಶ್ವವನ್ನು ಪ್ರಭಾವಿಸಿದ್ದು ಆಧುನಿಕ ಬದುಕಿನ ಇತಿಹಾಸ. ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ್ದೆಂದು ಗುರುತಿಸುವ ಇಪ್ಪತ್ತೊಂದು ಲೇಖಕರ 3೦ ಬರಹಗಳನ್ನು ಇಲ್ಲಿ ಸಂಪಾದಿಸಿ, ಕನ್ನಡಿಸಲಾಗಿದೆ. ಹೊಸ ಜನಾಂಗದ ತರುಣ ಲೇಖಕರಿಗೆ, ಸಾಹಿತ್ಯವನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಈ ವಿಚಾರಗಳು ಆಧುನಿಕ ಫ್ರೆಂಚ್ ಸಂಸ್ಕೃತಿಯ ಮೀಮಾಂಸೆಯನ್ನು ಅರಿತುಕೊಳ್ಳಲು ಬೌದ್ಧಿಕ ಚೌಕಟ್ಟನ್ನು ಒದಗಿಸುತ್ತವೆ.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Related Books