ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 390

₹ 400.00




Year of Publication: 2020
Published by: ಪಾಲಿ ಇನ್‍ಸ್ಟಿಟ್ಯೂಟ್
Address: ನಳಂದ ಆವರಣ, ಕುಸನೂರು ರಸ್ತೆ, ಕಲಬುರಗಿ- 585101
Phone: 08472249090

Synopsys

‘ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು’ ಹಿರಿಯ ಲೇಖಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ ಕೃತಿ. ಕಲಬುರಗಿಯ ಪಾಲಿ ಇನ್‍ಸ್ಟಿಟ್ಯೂಟ್ ಈ ಮಹತ್ವದ ಕೃತಿಯನ್ನು ಪ್ರಕಟಸಿದೆ. ‘ಪ್ರಸ್ತುತ ನಿಘಂಟು ತ್ರಿಪಿಟಕಗಳ ಸಾಮಾನ್ಯ ಪರಿಚಯವನ್ನು ಮಾಡಿಕೊಡುತ್ತದೆ. ನಾನು ತಿಳಿದಂತೆ ಭಾರತೀಯ ಪ್ರಾಂತ್ಯಭಾಷೆಗಳಲ್ಲಿ ಮೊದಲಬಾರಿಗೆ ರಚಿತಗೊಂಡಿರುವ ಸಂಕ್ಷಿಪ್ತ ಪಾಲಿ-ಕನ್ನಡ ನಿಘಂಟು ಇದಾಗಿದೆ’ ಎನ್ನುತ್ತಾರೆ ಸಂಪಾದಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ.

‘ಕನ್ನಡವು ಮೊದಮೊದಲು ಸಂಸ್ಕೃತವನ್ನು ತನ್ನದಾಗಿಸಿಕೊಂಡಿತು. ಆನಂತರ ಪ್ರಾಕೃತ ಬಂದು ಸೇರಿಕೊಂಡಿತು. ಮಧ್ಯಕಾಲೀನದ ಹೊತ್ತಿನಲ್ಲಿ ಅನ್ಯದೇಶಿಯ ಭಾಷೆಗಳು ಕನ್ನಡನುಡಿಯ ಜತೆಗೆ ಆಪ್ತತೆಯನ್ನು ಬೆಳೆಸಿಕೊಂಡಿತು. ದಕ್ಷಿಣಭಾರತೀಯ ಭಾಷೆಗಳ ಜತೆ ಆದಾನ-ಪ್ರದಾನ ಮಾಡಿಕೊಂಡಿತು. ಆಧುನಿಕ ಕರ್ನಾಟಕದ ಕಾಲಕ್ಕೆ ವಿಫುಲವಾಗಿ ಇಂಗ್ಲಿಷ್ ಭಾಷೆಯನ್ನು ತನ್ನ ಜಾಯಮಾನಕ್ಕೆ ಅನುಗುಣವಾಗಿ ಸ್ವಾಗತಿಸಿತು. ಆದರೆ, ಕನ್ನಡವು ಜೀರ್ಣಾಗ್ನಿಭಾಷೆಯಾಗಿಯೇ ಉಳಿಯಿತು. ಕನ್ನಡ ನುಡಿಯಲ್ಲಿ ನೂರಾರು ಪ್ರಾಕೃತ-ಪಾಲಿಭಾಷೆಗಳಿಂದ ಶಬ್ದಗಳು ಬಂದು ಸೇರಿಕೊಂಡಿವೆ. ಅವುಗಳ ಅಧ್ಯಯನಕ್ಕೆ ವಿದ್ವಾಂಸರು ತೊಡಗಬೇಕಾಗಿದೆ. ಪ್ರಸ್ತುತ ಸಂಕ್ಷಿಪ್ತ ನಿಘಂಟು, ಭಾಷೆಯ ಸುತ್ತಮುತ್ತಣ ಚರಿತ್ರೆಯನ್ನು ತಿಳಿಯಲು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ನೆರವಾಗುತ್ತದೆಂದು ನಾನು ನಂಬಿದ್ದೇನೆ’ ಎಂಬುದು ಮಲ್ಲೇಪುರಂ ಜಿ. ವೆಂಕಟೇಶ ಅವರ ಅಭಿಪ್ರಾಯವಾಗಿದೆ.

ಸಂಸ್ಕೃತ ಭಾಷಾಭ್ಯಾಸಿಗಳು ಹಾಗೂ ತುಲನಾತ್ಮಕ ಭಾಷಾಭ್ಯಾಸಿಗಳಿಗೂ ಈ ನಿಘಂಟು ಪ್ರಯೋಜನವಾಗಲಿದೆ. 

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Conversation

Related Books