ಸಂತೆಯೊಳಗೆ ಸಿಕ್ಕ ಬುದ್ಧ

Author : ಅಭಿಷೇಕ್‌ ಬಳೆ ಮಸರಕಲ್‌

Pages 80

₹ 80.00
Year of Publication: 2022
Published by: ಬಳೆ ಪ್ರಕಾಶನ
Address: # ಪ್ರಭಾಕರ ಬಳೆ ಮಸರಕಲ್, ಮಸರಕಲ್ ಗ್ರಾಮ, ದೇವದುರ್ಗ ತಾಲ್ಲೂಕು, ಜಿ: ರಾಯಚೂರು
Phone: 9740346147

Synopsys

ಕವಿ ಅಭಿಷೇಕ ಬಳೆ, ಮಸರಕಲ್ ಅವರು ರಚಿಸಿದ ಕವನಗಳ ಸಂಕಲನ. ಖ್ಯಾತ ಸಾಹಿತಿ, ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಕೃತಿಯ ಕುರಿತು ‘ಈ ಗಜಲ್ ಗಳು ವಿಶಿಷ್ಠ ರಚನೆಯಿಂದ ಕೂಡಿವೆ. ಗಜಲ್ ಎಂದ ಕೂಡಲೇ ಪ್ರೇಮ, ವಿರಹದ ವಸ್ತಗಳೇ . ಇವುಗಳನ್ನು ಒಳಗೊಳ್ಳುತ್ತಲೇ ಮೀರುತ್ತಾ ಬೆಳೆಯುತ್ತಿರುವ ಕನ್ನಡದ ಗಜಲ್ ಗಳನ್ನು ಇಲ್ಲಿ ಕಾಣಬಹುದು. ಕವಿಗಳು ಇಲ್ಲಿ ಅನೇಕ ಧ್ವನಿಪೂರ್ಣ ಗಜಲ್ ಗಳನ್ನು ಕಟ್ಟಿಕೊಟ್ಟಿದ್ದಾರೆ. ಮತಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ಸ್ಪಷ್ಟವಾಗಿ ವಿರೋಧಿಸಿ, ಸಹಿಷ್ಣುತೆಯ ಸಾಮರಸ್ಯಕ್ಕಾಗಿ ಮಿಡಿದಿದ್ದಾರೆ. ಸಂತೆಯಲ್ಲಿ ಗುರುವನ್ನು ಕಂಡುಕೊಂಡ ಒಳಹರಿವಿನ ಕೆಲವು ಗಜಲ್ ಗಳು, ಜೀವಶಕ್ತಿಯಾಗಿವೆ. ಅಭಿಷೇಕ ಅವರು ಕನ್ನಡದ ಗಮನಾರ್ಹ ಗಜಲ್ ಕವಿಯಾಗಿ ಭರವಸೆ ಮೂಡಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರು ‘ಅಭಿಷೇಕ್ ಅವರು ಗೇಯತೆಯ ಗುಣವನ್ನು ಗಜಲ್ ಗಳಲ್ಲಿ ತರುವಲ್ಲಿ ಶ್ರಮಿಸಿದ್ದಾರೆ . ಮದಿರೆ, ಚಂದ್ರ, ಸಾಕಿಗಳು ಗಝಲ್ ನ ಮೂಲ ಕಾವ್ಯವಸ್ತುಗಳು ಅವುಗಳನ್ನು ಹೊರತು ಪಡಿಸಿಯೂ ಸಹ ತಮ್ಮ ಭಾವ ಕೋಶದೊಳಗೆ ತುಂಬಿಕೊಂಡು ಸಾಲುಗಳನ್ನು ಚೆಂದವಾಗಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಅಭಿಷೇಕ್‌ ಬಳೆ ಮಸರಕಲ್‌
(30 November 1994)

ಯುವ ಬರಹಗಾರ ಕವಿ ಅಭಿಷೇಕ್‌ ಬಳೆ ಮಸರಕಲ್‌ ಜನಿಸಿದ್ದು 1994 ನ. 30ರಂದು. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್‌ ಗ್ರಾಮದವರು. ವಿಜ್ಞಾನ ಪದವೀಧರರು. ಹೈಸ್ಕೂಲ್ ನಲ್ಲಿರುವಾಗಲೇ ’ಕರ್ನಾಟಕ ಮಾತ” ಕವನ ಸಂಕಲನ ಪ್ರಕಟಿಸಿದ್ದರು. ಅಮ್ಮ ಮತ್ತು ಇತರೆ ಕವಿತೆಗಳು, ಗೋರಿ ಮೇಲಿನ ಹೂ ಇವರ ಪ್ರಮುಖ ಕೃತಿಗಳು. ಸಿರಿಗನ್ನಡ ವಚನ ಕಲ್ಯಾಣ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ಕವನ ಕುಸುರಿ ಪ್ರಶಸ್ತಿ, ಯುವ ಬರಹಗಾರ ಪ್ರಶಂಸತಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ. ...

READ MORE

Conversation

Related Books