ಸಾಫಲ್ಯ

Author : ವಿವೇಕಾನಂದ ಕಾಮತ್

Pages 176

₹ 85.00




Year of Publication: 2001
Published by: ಸಾಹಿತ್ಯ ಚಂದನ
Address: ನಂ.402 / 16, 4ನೇ ಮುಖ್ಯರಸ್ತೆ, 50 ಅಡಿ ರಸ್ತೆ, ಬನಶಂಕರಿ 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು.-560050

Synopsys

ಎರಡು ಕಿರು ಕಾದಂಬರಿಗಳುಳ್ಳ ಹೊತ್ತಗೆ ಇದು. ಈ ಎರಡೂ ಕಾದಂಬರಿಗಳು ರಾಗಸಂಗಮ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜನಪ್ರಿಯ ಮಾದರಿಯ ಎರಡು ಕಥೆಗಳು ಇಲ್ಲಿವೆ. ಜೀವನದಲ್ಲಿ ಆಕಸ್ಮಿಕವಾಗಿ ಏಳುವ ಬಿರುಗಾಳಿಗೆ ಬದುಕು ಬಲಿಯಾದಾಗ ಅಲ್ಲೇ ಮಣ್ಣಾಗುವುದಕ್ಕಿಂತಲೂ ಎದ್ದು ಹೊಸ ತೆರದಲ್ಲಿ ಬದುಕನ್ನು ಕಟ್ಟಿಕೊಂಡು ಸಾಫಲ್ಯವನ್ನು ಕಾಣುವ ಎರಡು ಹೆಣ್ಣುಮಕ್ಕಳ ಕಥೆಗಳು ಇಲ್ಲಿವೆ.

About the Author

ವಿವೇಕಾನಂದ ಕಾಮತ್
(21 January 1976)

ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...

READ MORE

Related Books