ಸಪ್ತಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ

Author : ಇಂದಿರಾ ಹೆಗ್ಗಡೆ

Pages 174

₹ 150.00




Year of Publication: 2017
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾಮ್ ಲೇಔಟ್, ಬಿಎಸ್ ಕೆ ಮೂರನೇ ಸ್ಟೇಜ್, ಬೆಂಗಳೂರು- 560085

Synopsys

‘ಸಪ್ತಕನ್ಯೆಯರ ಕನ್ಯೆ ಭೂಮಿಯಲ್ಲಿ ನಮ್ಮ ನಡೆ’ ಲೇಖಕಿ ಇಂದಿರಾ ಹೆಗಡೆ ಅವರ ಪ್ರವಾಸ ಕಥನ. ಈಶಾನ್ಯರಾಜ್ಯಗಳ ಅನೇಕ ಬುಡಕಟ್ಟುಗಳ ಜೀವನಪದ್ದತಿಯ ಕುರಿತು ವಿವರವಾದ ವಿಶ್ಲೇಷಣೆಗಳು ಈ ಕೃತಿಯಲ್ಲಿವೆ.

ಮತ್ತೊಂದು ಮಹತ್ವವೆಂದರೆ, ಇಂದಿರಾ ಹೆಗ್ಗಡೆ ಅವರ ಪ್ರವಾಸದ ವೇಳೆಯಲ್ಲಿ ತೆಗೆದುಕೊಳ್ಳುವ ಪೂರ್ವ ಸಿದ್ಧತೆ, ಜನಸಾಮಾನ್ಯರಿಂದ ಮಾಹಿತಿ ಸಂಗ್ರಹ, ಸಾಂಸ್ಕೃತಿಕ ಕಣ್ಣಿನಿಂದ ಸ್ಥಳ ಆಚಾರವಿಚಾರಗಳ ಅವಲೋಕನ, ಮಹಿಳಾ ಪರವಾದ ನೋಟ, ತಮ್ಮ ಅನುಭವದ ತುಳು ಸಂಸ್ಕೃತಿಯ ಜೊತೆಗೆ ಮುಖಾಮುಖಿಯಾಗಿ ಇರಿಸಿ ನೋಡುವ ತುಲನೆಯ ದೃಷ್ಟಿಕೋನದಿಂದ ಈ ಕೃತಿಯನ್ನು ರಚಿಸಿದ್ದಾರೆ.

ನಿಸರ್ಗದ ಸೊಬಗನ್ನು ಕಂಡು ಭಾವಪರವಶರಾಗುವ ಜನರ ಜೀವಪರ ಬದುಕನ್ನು ಕೊಂಡಾಡುವ, ಮಹಿಳೆಯ ಸಾಹಸಗಾಥೆಯನ್ನು ಮುನ್ನೆಲೆಗೆ ತರುವ ಅನೇಕ ಪ್ರಸಂಗಗಳು ಈ ಪ್ರವಾಸಕಥನದ ಕೆಲವು ತೋರುಗಂಬಗಳು

 

About the Author

ಇಂದಿರಾ ಹೆಗ್ಗಡೆ
(14 March 1949)

'ತುಳುವರ ಮೂಲತಾನ ಆದಿ ಆಲಡೆ ಪರಂಪರೆ ಮತ್ತು ಪರಿವರ್ತನೆ' ಕೃತಿಗಾಗಿ ಪಿಎಚ್.ಡಿ ಪದವಿ ಪಡೆದ ಇಂದಿರಾ ಹೆಗ್ಗಡೆ ಅವರ ಆಸಕ್ತಿಯ ಕ್ಷೇತ್ರ ತುಳು ಸಂಸ್ಕೃತಿ. ಕನ್ನಡ ಮತ್ತು ತುಳು ಸೃಜನಶೀಲ ಸಾಹಿತ್ಯದಲ್ಲೂ ಕೈಯಾಡಿಸಿದವರು ಅವರು. ದಕ್ಷಿಣ ಕನ್ನಡದ ಕಿನ್ನಿಗೋಳಿ ಎಳತ್ತೂರು ಗುತ್ತಿನವರಾದ ಇಂದಿರಾ ಅವರು ಬಂಟರು – ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ, ತುಳುನಾಡಿನ ಗ್ರಾಮಾಡಳಿತ ಮತ್ತು ಅಜಲು, ತುಳುವೆರೆ ಅಟಿಲ ಅರಗಣೆ, ಚೇಳಾರು ಗುತ್ತು ಅಗೊಳಿ ಮಂಜಣ್ಣ ಕುರಿತು ಸಂಶೋಧನೆ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೂಲತಾನದ ನಾಗಬ್ರಹ್ಮ ಮತ್ತು ಪರಿವಾರ ದೈವಗಳ ಸಂಧಿ ಪಾಡ್ದನ ಕೃತಿಗಳು ತುಳು ಜನಪದ ಸಾಹಿತ್ಯವನ್ನು ಪರಿಚಯಿಸುತ್ತವೆ.  ಮೋಹಿನಿಯ ಸೇಡು, ಪುರುಷರೇ ...

READ MORE

Related Books