ಸರಕಾರದಿಂದ ಭಯೋತ್ಪಾದನೆ, ಪ್ರಜಾಪೀಡನೆ

Author : ವಿನಯಾ ಒಕ್ಕುಂದ

Pages 150

₹ 125.00




Year of Publication: 2012
Published by: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀನ್
Phone: 90088 20186

Synopsys

ಕರಾವಳಿ ಸೇರಿದಂತೆ ರಾಜ್ಯದಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ಕೇಂದ್ರವಾಗಿಟ್ಟುಕೊಂಡು, ನಡೆಸಿದ ತನಿಖೆ ಮತ್ತು ಅದರ ವರದಿಯನ್ನು ಒಳಗೊಂಡ ಪ್ರಮುಖ ಕೃತಿ ಇದು. ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆದ ದಾಳಿಯನ್ನೂ ಈ ತನಿಖೆ ಒಳಗೊಂಡಿದೆ. ನ್ಯಾ. ಮೈಕಲ್ ಎಫ್ ಸಲ್ದಾನ ಅವರ ನೇತೃತ್ವದಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಮತ್ತು ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಶನಲ್ ಇವುಗಳ ವತಿಯಿಂದ ವಿಚಾರಣೆ ನಡೆದಿದ್ದು, ಅದರಿಂದ ಹೊರಬಿದ್ದಿರುವ ವರದಿಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಇದರ ಒಂದು ಲಕ್ಷ ಪ್ರತಿಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದು ಪ್ರಕಾಶಕರು ಹೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಈ ದಾಳಿಗಳು ನಡೆದವು. ಮತ್ತು ಈ ದಾಳಿಯ ಹಿಂದೆ ಸಂಘಪರಿವಾರದ ದುಷ್ಕರ್ಮಿಗಳಲ್ಲದೆ, ಸರಕಾರವೂ ಪರೋಕ್ಷವಾಗಿ ಭಾಗಿಯಾಗಿದೆ ಎನ್ನುವುದನ್ನು ಕೃತಿ ಮುಕ್ತವಾಗಿ  ವಿವರಿಸುತ್ತದೆ. ದುಷ್ಕರ್ಮಿಗಳು ಸರಕಾರಿ ವ್ಯವಸ್ಥೆಯನ್ನು ಈ ದಾಳಿಗೆ ಬಳಸಿರುವುದು ವಿಚಾರಣೆಯ ಸಂದರ್ಭದಲ್ಲಿ ಬಹಿರಂಗವಾಗಿದೆ ಎನ್ನುವುದನ್ನು ನಿವೃತ್ತ ನ್ಯಾಯಮೂರ್ತಿ ಎಂ. ಎಫ್. ಸಲ್ದಾನ ಹೇಳುತ್ತಾರೆ. ಈ ವಿಚಾರಣೆ ದೇಶದಲ್ಲೇ ಪ್ರಥಮ ಬಾರಿಯಾಗಿ ನಡೆದಿರುವ ಪ್ರಯೋಗ ಎಂದು ಅವರು ಅಭಿಪ್ರಾಯಪಡುತ್ತಾರೆ. ಹಲವು ಪ್ರಕರಣಗಳನ್ನು ಅತ್ಯಂತ ಶಿಸ್ತಿನಿಂದ ವಿಚಾರಣೆ ನಡೆಸಿದ ಅದರ ವರದಿಯನ್ನು ಯಾವುದೇ ಪಕ್ಷಪಾತ, ಪೂರ್ವಾಗ್ರಹ, ಭಯವಿಲ್ಲದೆ ಈ ಕೃತಿ ತೆರೆದಿಟ್ಟಿದೆ. ವರದಿಯ ಕೊನೆಯಲ್ಲಿ, ಈ ಘಟನೆಗಳು ಮುಂದೆಯೂ ಮರುಕಳಿಸಬಹುದೆಂಬ ಎಚ್ಚರಿಕೆಯನ್ನುಈ  ಕೃತಿ ನಮಗೆ ನೀಡುತ್ತದೆ.

About the Author

ವಿನಯಾ ಒಕ್ಕುಂದ
(24 October 1968)

ವಿನಯಾ- ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನ ನಾಡುಮಾಸ್ಕೇರಿಯಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ 1990ರಲ್ಲಿ ಕನ್ನಡ ಎಂ.ಎ, 1992ರಲ್ಲಿ ಎಂ.ಫಿಲ್. ಹಾಗೂ 1996ರಲ್ಲಿ ಪಿಎಚ್.ಡಿ ಪದವಿ ಪಡೆದಿದ್ದು, ಸವಣೂರು, ನರಗುಂದದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಧ್ಯ ಧಾರವಾಡ ಜಿಲ್ಲೆಯ ಅಳ್ಳಾವರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ವಿನಯಾ ಅವರ ಕವನ ಸಂಕಲನಗಳು: ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ, ಇನ್ನೂ ಕಥಾ ಸಂಕಲನಗಳು: ಊರ ...

READ MORE

Related Books